` Uma Column 50 - ನಟಿಯರೂ ಸೇಲೇಬಲ್! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
romanchana sexy image
romanchana

ಇದು ಹತ್ತು ವರ್ಷದ ಹಿಂದಿನ ಕತೆ. ಕನ್ನಡದ ಹೆಸರಾಂತ ನಿರ್ಮಾಪಕರೊಬ್ಬರು ತನ್ನ ಹೊಸ ಚಿತ್ರದ ನಾಯಕಿ ಪಾತ್ರಕ್ಕೆ ತಮಿಳು ನಟಿಯೊಬ್ಬಳನ್ನು ಆಯ್ಕೆ ಮಾಡಿದ್ದರು. ಆಕೆ ಚೆನ್ನೈನಿಂದ ವಿಮಾನದಲ್ಲಿ ಬಂದಿಳಿದು, ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ತಂಗಿದ್ದಳು. ಆದರೆ ಸದ್ರಿ ಚಿತ್ರದ ನಿರ್ದೇಶಕರಿಗ್ಯಾಕೋ ಆ ನಟಿ ಇಷ್ಟವಾಗಲಿಲ್ಲ. ಹಾಗಾಗಿ ಮಾರನೆಯ ದಿನದ ಫ್ಲೈಟಲ್ಲಿ ಆಕೆಯನ್ನು ವಾಪಸ್ ಕಳಿಸುವ ನಿರ್ಧಾರಕ್ಕೆ ಬರಲಾಯಿತು. ಈ ಹಾರ್ಟ್ ಬ್ರೇಕಿಂಗ್ ನ್ಯೂಸನ್ನು ನಿರ್ಮಾಪಕರು ಬಹಳ ಬೇಸರದಿಂದ ನನ್ನ ಮುಂದೆ ಹೇಳಿಕೊಂಡರು. ಫ್ಲೈಟ್ ಚಾರ್ಜ್ ಮತ್ತು ಎರಡು ದಿನದ ರೂಂ ಬಾಡಿಗೆ ವ್ಯರ್ಥವಾಗಿ ಹೋಯಿತಲ್ಲ ಅನ್ನುವುದು ಅವರ ಬೇಸರಕ್ಕೆ ಕಾರಣವಾಗಿತ್ತು.  ಮಾತಿನ ಮಧ್ಯೆ ನನ್ನ ಪಕ್ಕ ನಿಂತಿದ್ದ ಯುವ ಪತ್ರಕರ್ತನನ್ನು ನೋಡುತ್ತಾ ನಿರ್ಮಾಪಕರು ಕೇಳಿದರು. “ನಿಮಗಿನ್ನೂ ಮದುವೆಯಾಗಿಲ್ಲ ಅಲ್ವಾ?”. ಆತ ಇಲ್ಲ ಎಂಬಂತೆ ತಲೆ ಅಲ್ಲಾಡಿಸಿದ. “ಹಾಗಿದ್ರೆ ಆಯಮ್ಮನ ರೂಮ್ ಗೆ ಹೋಗಿಬನ್ನಿ. ಅವಳ ಮೇಲೆ ನಾನು ಮಾಡಿದ ಖರ್ಚು ಹೀಗಾದರೂ ವಾಪಸ್ ಬರಲಿ”ಎಂದರು ಆ ನಿರ್ಮಾಪಕ. ಪತ್ರಕರ್ತ ಗಾಬರಿಯಾಗಿ ನನ್ನ ಮುಖ ನೋಡಿದ. ನಿರ್ಮಾಪಕರು ತಮಾಷೆಗೆ ಆ ಮಾತು ಹೇಳಿದ್ದರೂ, ನಮ್ಮ ಚಿತ್ರೋದ್ಯಮ ನಟಿಯರನ್ನು ನೋಡುವ ದೃಷ್ಟಿಕೋನಕ್ಕೆ ಅದು ಕನ್ನಡಿ ಹಿಡಿದಂತಿತ್ತು.

ಇಪ್ಪತ್ತು ವರ್ಷದ ಹಿಂದೆ ಸಿನಿಮಾ ಮಾಸಪತ್ರಿಕೆಯ ವರದಿಗಾರರೊಬ್ಬರು, ಒಂದು ಸಿನಿಮಾದಲ್ಲೂ ನಟಿಸದ  ಉದಯೋನ್ಮುಖ ನಟಿಯೊಬ್ಬಳ ಬಗ್ಗೆ ಹೇಳುತ್ತಿದ್ದರು. ಆಕೆಯ ಬೇಡಿಕೆ ವಿಚಿತ್ರವಾಗಿತ್ತು. ತನ್ನ ಬಗ್ಗೆ ಲೇಖನ ಬರೆಯೋದೇನೂ ಬೇಕಾಗಿಲ್ಲ, ಆದರೆ ಒಂದು ಇಡೀ ಪುಟದಲ್ಲಿ ಎದ್ದು ಕಾಣುವಂತೆ ತನ್ನ ಫೋಟೋ ಹಾಕಿ. ಈ ಬೇಡಿಕೆಯ ಹಿಂದಿನ ಮರ್ಮ ಗೊತ್ತಾದ ನಂತರ ವರದಿಗಾರರು ಬೆಚ್ಚಿಬಿದ್ದರು. ಹೆಸರಾಂತ ಪತ್ರಿಕೆಯಲ್ಲಿ ಫೋಟೋ ಬಂದರೆ  ತಾನೊಬ್ಬ ಸಿನಿಮಾ ನಟಿ ಎಂದು ಜನರಿಗೆ ಗೊತ್ತಾಗುತ್ತದೆ, ಆ ಮೂಲಕ ಮಾರ್ಕೆಟ್ಟಲ್ಲಿ ತನ್ನ ಬೆಲೆ ಏರುತ್ತದೆ ಅನ್ನುವುದು ಆಕೆಯ ಲೆಕ್ಕಾಚಾರವಾಗಿತ್ತಂತೆ.

swetha babu prasad

ಶ್ವೇತಾ ಬಸು ಪ್ರಸಾದ್ ಎಂಬ ನಟಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಬಂಧನವಾದ ಸುದ್ದಿ ಓದಿದಾಗ ಮೇಲಿನ ಘಟನೆಗಳು ನೆನಪಾದವು. ಸಿನಿಮಾ ನಟಿಯರು ಇಂಥಾ ‘ಅನೈತಿಕ ಚಟುವಟಿಕೆ’ಗಳಲ್ಲಿಪಾಲ್ಗೊಳ್ಳುವುದು ಮತ್ತು ಅರೆಸ್ಟ್ ಆಗುವುದು ನಮಗೇನೂ ಹೊಸದಲ್ಲ. ಈ ಹಿಂದೆ ತೆಲುಗು ನಟಿ ಭುವನೇಶ್ವರಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಎರಡು ಸಾರಿ ಅರೆಸ್ಟ್ ಆಗಿದ್ದಳು, ಐಶ್ ಅನ್ಸಾರಿ ಎಂಬ ನಟಿ ಕಾಮಪರವಶವಾಗಿದ್ದಾಗಲೇ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಹಾಕಿಕೊಂಡಿದ್ದಳು, ಹೈದರಾಬಾದ್ ನ ಅಪಾರ್ಟ್ ಮೆಂಟ್ ಒಂದರಲ್ಲಿ ನಟಿ ಸಾಯಿರಾಬಾನು ಸೆರೆಯಾಗಿದ್ದಳು, ಕನ್ನಡ ಚಿತ್ರಗಳಲ್ಲೂ ನಟಿಸಿದ್ದ ಸೌಮ್ಯ ಮುಖದ ಹಿರಿಯ ನಟಿ ಯುಮನಾ ಬೆಂಗಳೂರಿನ ಪಂಚತಾರಾ ಹೋಟೆಲಲ್ಲಿ ಬಂಧನಕ್ಕೊಳಗಾಗಿದ್ದಳು. ಕೆರೋಲಿನ್ ಮರಿಯತ್ ಎಂಬ ತಮಿಳು ನಟಿಗೆ ಆಕೆಯ ಸೋದರನೇ ಪಿಂಪ್ ಆಗಿ ಕೆಲಸ ಮಾಡುತ್ತಿದ್ದ. ಇದೇ ಥರದ ಇನ್ನೊಂದು ಕೇಸಲ್ಲಿ ಒಬ್ಬ ನಟಿಯ ಮಲತಾಯಿಯೇ ಆಕೆಯನ್ನು ಸೆಕ್ಸ್ ವ್ಯಾಪಾರಕ್ಕೆ ದೂಡಿದ್ದುಂಟು.

ಹೈದರಾಬಾದಿನಲ್ಲಿ ಸಿನಿಮಾ ನಟಿಯರ ಸೆಕ್ಸ್ ದಂಧೆ ಎಷ್ಟು ವ್ಯವಸ್ಥಿತವಾಗಿ ನಡೆಯುತ್ತದೆ ಅಂದರೆ ದಿನವೊಂದಕ್ಕೆ ಕೋಟ್ಯಂತರ ರುಪಾಯಿ ವ್ಯವಹಾರ ನಡೆಯುತ್ತದೆ. ಇದರಲ್ಲಿ ಹೋಟೆಲ್ ಮಾಲಿಕರು, ನಟರು, ದಲ್ಲಾಳಿಗಳು, ರಾಜಕಾರಣಿಗಳು, ರೌಡಿಗಳು, ಪೊಲೀಸರು ಎಲ್ಲರೂ ಶಾಮೀಲಾಗಿರುತ್ತಾರೆ. ನಟಿಯೊಬ್ಬಳ ಜನಪ್ರಿಯತೆ ಮತ್ತು ವಯಸ್ಸಿನ ಆಧಾರದ ಮೇಲೆ ಆಕೆಯ ಬೆಲೆ ನಿಗದಿಯಾಗುತ್ತದೆ. ಅದು ಒಂದು ತಾಸಿಗೆ ಒಂದೂವರೆ ಲಕ್ಷದಿಂದ ಏಳು ಲಕ್ಷದ ತನಕ ಇರುತ್ತದೆ. ಇದಿಷ್ಟು ಮೊತ್ತವೂ ನಟಿಯ ಕೈಸೇರುತ್ತದೆ ಎಂದು ನೀವು ಭಾವಿಸಿದರೆ ತಪ್ಪು. ಅದರಲ್ಲಿ ದಲ್ಲಾಳಿ, ಹೋಟೆಲ್ ಮಾಲಿಕರು ತಮ್ಮ ಕಮಿಷನ್ ಕಿತ್ತುಕೊಳ್ಳುತ್ತಾರೆ. ನಟಿ ಅಕಸ್ಮಾತ್ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಅವರೆಲ್ಲರೂ ಬಚಾವಾಗುತ್ತಾರೆ. ಈಕೆಯ ಮಾನವೂ ಹೋಯಿತು, ಹಣವೂ ಹೋಯಿತು. ಪೊಲೀಸರೂ ಅಷ್ಟೆ, ಆ ನಟಿಯ ಹೆಸರನ್ನು ಬಹಿರಂಗಪಡಿಸುತ್ತಾರಷ್ಟೇ ಹೊರತಾಗಿ ಆಕೆಯ ಗಿರಾಕಿಗಳ ಹೆಸರನ್ನು ಹೇಳುವುದಿಲ್ಲ. ಯಾಕೆಂದರೆ ಅವರೆಲ್ಲರೂ ದೊಡ್ಡವರು!

ವೇಶ್ಯಾವಾಟಿಕೆಯ ಮೇಲೆ ಆಗಾಗ ನಡೆಯುವ ಈ ದಾಳಿಯನ್ನು ಪೊಲೀಸ್ ಭಾಷೆಯಲ್ಲಿ ರೇಡ್ ಎಂದೂ, ಚಾನೆಲ್ಲುಗಳ ಭಾಷೆಯಲ್ಲಿ ಸ್ಟಿಂಗ್ ಆಪರೇಷನ್ ಎಂದೂ ಕರೆಯಲಾಗುತ್ತದೆ. ಆದರೆ ಪೊಲೀಸರಾಗಲಿ, ಚಾನೆಲ್ಲುಗಳಾಗಲಿ ದೊಡ್ಡಬಲೆ ಬೀಸುವ ಗೋಜಿಗೆ ಹೋಗುವುದಿಲ್ಲ. ಬರೀ ಗಾಳ ಹಾಕುತ್ತಾರೆ. ಹಾಗಾಗಿ ತಿಮಿಂಗಲಗಳು ಸೆರೆಯಾಗುವುದಿಲ್ಲ, ಚಿಕ್ಕಪುಟ್ಟ ಮೀನುಗಳಷ್ಟೇ ಸಿಕ್ಕಿಬೀಳುತ್ತವೆ. ಆಮೇಲೆ ಆ ಮೀನುಗಳನ್ನು ಸಾರ್ವಜನಿಕ ಪ್ರದರ್ಶನಕ್ಕಿಟ್ಟು ಚೆನ್ನಾಗಿ ಹುರಿಯಲಾಗುತ್ತದೆ. ಜನ ಚಪ್ಪರಿಸಿಕೊಂಡು ಕಣ್ಣಲ್ಲೇ ಮುಕ್ಕುತ್ತಾರೆ. ಮೊದಲು ತನ್ನ ಗಿರಾಕಿಯ ಮುಂದೆ ಬೆತ್ತಲಾಗುವ ನಟಿ, ಆಮೇಲೆ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಮತ್ತೊಮ್ಮೆ ಬೆತ್ತಲಾಗುತ್ತಾಳೆ. ಎಂಬಲ್ಲಿಗೆ ಆಕೆಯ ವೃತ್ತಿ ಮತ್ತು ಬದುಕು ಎರಡೂ ನಾಶವಾಗಿ ಹೋಗುತ್ತದೆ. ಫುಲ್ ಟೈಂ ಬೆಲೆವೆಣ್ಣಾಗಿ ಬದುಕುವುದಷ್ಟೇ ಆಕೆಯ ಮುಂದಿರುವ ಏಕೈಕ ದಾರಿ.

shakeela image

ಈಗ ನಾಶವಾಗುವ ಸರದಿ ಶ್ವೇತಾ ಬಸು ಅವಳದು. ದುರಂತವೆಂದರೆ 2002ನೇ ಇಸ್ವಿಯಲ್ಲಿ ಬಿಡುಗಡೆಯಾದ ‘ಮಕ್ಡೀ’ಎಂಬ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದ ಈಕೆಗೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಆಮೇಲೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದರೂ ಜನರಿಗೆ ಆಕೆ ಯಾರು ಅನ್ನುವುದು ಗೊತ್ತಾಗಿದ್ದು ಮೊನ್ನೆ ಸೆಕ್ಸ್ ಹಗರಣದಲ್ಲಿ ಸಿಲುಕಿದಾಗಲೇ. ಈಕೆಯೊಂದಿಗೆ ಮುಂಬೈನ ಕೆಲವು ದೊಡ್ಡ ವ್ಯಾಪಾರಿಗಳು ಸೆರೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದರೂ ಎಂದಿನಂತೆ ಅವರ ಹೆಸರನ್ನು ಗೋಪ್ಯವಾಗಿಡಲಾಗಿದೆ. ಅವರು ಈಗಾಗಲೇ  ಬಿಡುಗಡೆಯಾಗಿ ಇನ್ಯಾವುದೋ ನಟಿಯ ಜೊತೆ ಚಕ್ಕಂದವಾಡುತ್ತಿದ್ದರೂ ಆಶ್ಚರ್ಯವೇನಿಲ್ಲ. ನ್ಯಾಯವಾಗಿ ನೋಡುವುದಾದರೆ ಬಡ ಹುಡುಗಿಯೊಬ್ಬಳ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳುವವರಿಗೆ ಶಿಕ್ಷೆಯಾಗಬೇಕಿತ್ತು, ಅವರಿಂದ ದೌರ್ಜನ್ಯಕ್ಕೊಳಗಾದ ಹುಡುಗಿ ನಮ್ಮೆಲ್ಲರ ಸಹಾನುಭೂತಿಗೆ ಪಾತ್ರವಾಗಬೇಕಾಗಿತ್ತು. ಆಕೆಗೊಂದು ಪುನರ್ವಸತಿ ವ್ಯವಸ್ಥೆಯನ್ನಾದರೂ ಮಾಡಬೇಕಾಗಿತ್ತು. ಆದರೆ ಇಲ್ಲಾಗುತ್ತಿರುವುದು ಆಕೆಯ ಮಾನಭಂಗ - ನಾಲ್ಕು ಗೋಡೆಗಳ ನಡುವೆ ಮತ್ತು ಟೀವಿ ಪರದೆಯ ಮೇಲೆ.

ಇಂಥಾ ಘಟನೆಗಳ ಬಗ್ಗೆ ನಾವೆಷ್ಟು ಅಸೂಕ್ಷ್ಮತೆ ಬೆಳೆಸಿಕೊಂಡಿದ್ದೇವೆ ಅಂದರೆ ಮೊನ್ನೆ ಟೀವಿ ಚಾನೆಲ್ಲೊಂದರ ಕುಟುಕು ಕಾರ್ಯಾಚಾರಣೆಯಲ್ಲಿ ಕನ್ನಡದ ಇಬ್ಬರು ಹೆಸರಾಂತ ನಿರ್ದೇಶಕರ ವಿಕೃತ ಕಾಮವಾಂಛೆ ಬಟಾಬಯಲಾದಾಗ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಚಿತ್ರೋದ್ಯಮವಂತೂ ಇದೊಂದು ಮಾಮೂಲಿ ಸಂಗತಿ ಅನ್ನುವಂತೆ ನಕ್ಕು ಸುಮ್ಮನಾಯಿತು. ಅದರ ಅರ್ಥ ಏನು? ಸಿನಿಮಾದಲ್ಲಿ ಅವಕಾಶ ಸಿಗಬೇಕಾದರೆ ನಟಿಯೊಬ್ಬಳು ಕಾಂಪ್ರವೈಸ್ ಆಗುವುದು ಅನಿವಾರ್ಯ ಎಂದೇ? ಬಾಲಿವುಡ್ಡಲ್ಲಿ ಈ ವ್ಯವಸ್ಥೆಯನ್ನು ಪ್ಯಾಕೇಜ್ ಸಿಸ್ಟಂ ಎಂದು ಕರೆಯುತ್ತಾರೆ. ನಟಿಯೊಬ್ಬಳು ಚಿತ್ರವೊಂದಕ್ಕೆ ಪಡೆಯುವ ಸಂಭಾವನೆಯಲ್ಲಿ ನಿರ್ಮಾಪಕನ ಇಚ್ಚೆ ತಣಿಸುವ ಶುಲ್ಕವೂ ಸೇರಿರುತ್ತದೆಯಂತೆ. ಕನ್ನಡದಲ್ಲೂ ಇಂಥಾದ್ದೆಲ್ಲಾ ನಡೆಯುತ್ತದೆ ಎಂದು ಇತ್ತೀಚೆಗೆ ಕೆಲವು ನಟಿಯರು ಹೇಳಿಕೊಳ್ಳುವ ಧೈರ್ಯ ಮಾಡುತ್ತಿದ್ದಾರೆ. ದುರ್ದೈವದ ಸಂಗತಿಯೆಂದರೆ ಹೀಗೆ  ವ್ಯವಸ್ಥೆಯ ಹುಳುಕುಗಳನ್ನು ಬಯಲು ಮಾಡುವ ಹುಡುಗಿಯರನ್ನೂ ಜನರು ಅನುಮಾನದಲ್ಲೇ ನೋಡುತ್ತಾರೆ.

ನಟಿಯರು ಯಾಕೆ ಇಂಥಾ ಕೊಳಕು ಕೆಲಸಕ್ಕೆ ಮುಂದಾಗುತ್ತಾರೆ? ಶ್ವೇತಾ ಬಸು ಹೇಳುವ ಪ್ರಕಾರ ಆಕೆಗೆ ದುಡ್ಡಿನ ಅಗತ್ಯವಿತ್ತು, ತನ್ನ ಕುಟುಂಬವನ್ನು ಸಾಕುವ ಹೊಣೆಗಾರಿಕೆ ಅಕೆಯ ಮೇಲಿತ್ತು, ಅವಕಾಶಗಳು ಕಡಿಮೆಯಾಗಿದ್ದರಿಂದ ವೇಶ್ಯಾವಾಟಿಕೆಯನ್ನು ತಬ್ಬಿಕೊಳ್ಳಬೇಕಾಯಿತು. ತನ್ನಂತೆಯೇ ಇನ್ನೂ ಹಲವು ನಟಿಯರು ದುಡ್ಡಿಗೋಸ್ಕರ ಮೈಮಾರುವ ದಂಧೆಯಲ್ಲಿ ನಿರತರಾಗಿದ್ದಾರೆ  ಎಂದು ಆಕೆ ಹೇಳಿದ್ದಾಳೆ. ಹಾಗಿದ್ದರೆ ದುಡ್ಡು ಸಂಪಾದನೆಗೆ ಇರುವುದು ಇದೊಂದೇ ಹಾದಿಯೇ? ಹೆಣ್ಮಕ್ಕಳಿಗೆ ಈ ಕಾಲದಲ್ಲಿ ಅವಕಾಶಗಳಿಗೇನೂ ಕೊರತೆಯಿಲ್ಲ.  ಪಿಜ್ಜಾ ಜಾಯಿಂಟುಗಳಿವೆ, ಮಾಲ್ ಗಳಿವೆ, ಕಾಸ್ಮೆಟಿಕ್ ಉದ್ಯಮಗಳಿವೆ...ಈ ನೌಕರಿಗಳು ಲಕ್ಷಾಂತರ ರುಪಾಯಿ ಆದಾಯವನ್ನು ನೀಡಲಾರವು ನಿಜ, ಆದರೆ ಒಬ್ಬ ಹೆಣ್ಣಿಗೆ ತನ್ನ  ಘನತೆಗಿಂತ ಹಣವೇ ಮುಖ್ಯಾನಾ?

romanchana image

ಸಿನಿಮಾ ನಟನಟಿಯರ ಸಮಸ್ಯೆ ಏನೆಂದರೆ ಅವರು ಕೀರ್ತಿ, ಪ್ರಭಾವ ಮತ್ತು ಹಣ. ಈ ಮೂರರ ರುಚಿಯನ್ನೂ ಏಕಕಾಲಕ್ಕೆ ನೋಡಿರುತ್ತಾರೆ. ಅವಕಾಶಗಳು ಕಡಿಮೆಯಾಗುತ್ತಾ ಹೋಗುತ್ತಿದ್ದಂತೆ ಈ ಮೂರು ಸವಲತ್ತುಗಳೂ ಅವರ ಕೈಯಿಂದ ಜಾರಿಹೋಗುತ್ತವೆ. ಆಗ ಅವರು ಹತಾಶರಾಗುತ್ತಾರೆ. ಐಶಾರಾಮದ  ಬದುಕಿನ ಶೈಲಿಯನ್ನು ಬದಲಾಯಿಸೋದಕ್ಕೆ ಮನಸ್ಸು ಒಪ್ಪುವುದಿಲ್ಲ.  ಆ ಕಾರಣಕ್ಕೆ ಸುಲಭ ಸಂಪಾದನೆಗೆ ಇಂಥಾ ಶಾರ್ಟ್ ಕಟ್ ಗಳ ಮೊರೆಹೋಗುತ್ತಾರೆ. ಈ ಸಂದರ್ಭದಲ್ಲಿ ಅವರ ಹಳೇ ಕಾಂಟಾಕ್ಟುಗಳು ಉಪಯೋಗಕ್ಕೆ ಬರುತ್ತವೆ. ಒಂದು ಸಾರಿ ಜಾರಿದ ಮೇಲೆ ಮತ್ತೆ ಮತ್ತೆ ಜಾರುವುದು ಸುಲಭವಾಗುತ್ತದೆ. ಅತ್ಯಾಚಾರ ಅನ್ನುವ ಪದ ಇಲ್ಲಿ ನುಸುಳುವುದೇ ಇಲ್ಲ. ಎಲ್ಲವೂ ಸರ್ವಸಮ್ಮತಿಯಿಂದ ನಡೆಯುವ ವ್ಯವಹಾರ.

ಸಿನಿಮಾದಲ್ಲಿ ಸೆಕ್ಸ್ ರಾಕೆಟ್ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಾ ಹೋಗುವಾಗ bollyw…djo.…..comಎಂಬ ವೆಬ್ ಸೈಟ್ ಕಣ್ಣಿಗೆ ಬಿತ್ತು. ಅದರಲ್ಲಿ ಹೊಸದಾಗಿ ಚಿತ್ರೋದ್ಯಮಕ್ಕೆ ಕಾಲಿಡುವ ನಟಿಯರು ಅವಕಾಶ ಸಿಗುವುದಕ್ಕೆ ಅನುಸರಿಸಬೇಕಾದ ತಂತ್ರಗಳ ಬಗ್ಗೆ  ಓದುವುದಕ್ಕೇ ಅಸಹ್ಯವಾದ ವಿವರಗಳಿದ್ದವು. ಕೆಲವು ಸ್ಯಾಂಪಲ್ಲುಗಳು ಹೀಗಿವೆಃ

·         ಅಗತ್ಯವಿದ್ದರೆ ಕಾಂಪ್ರಮೈಸ್ ಆಗಿ. ಆದರೆ ನಿರ್ಮಾಪಕನ ಹೊರತಾಗಿ ಮಿಕ್ಕ ಕಾಂಜಿಪೀಂಜಿಗಳನ್ನು ರಂಜಿಸುವುದಕ್ಕೆ ಹೋಗಬೇಡಿ.

·         ನಿರ್ಮಾಪಕನನ್ನು ನೀವು ಭೇಟಿಯಾದ ತಕ್ಷಣ ಆತ ತನ್ನ ಜೊತೆ ಮಲಗುವಂತೆ ಕೇಳಬಹುದು. ನೆನಪಿರಲಿ, ಮಲಗೋದಕ್ಕೆ ಮುಂಚೆ ಆ ಪ್ರಾಜೆಕ್ಟಲ್ಲಿ ನಿಮಗೆ ಅವಕಾಶ ಸಿಗುವ ಸಾಧ್ಯತೆ 50-50 ಆಗಿರುತ್ತದೆ. ಸುಮ್ಮನೇ ಹೂಂ ಅಂದಿರೋ ನಿಮ್ಮ ಕತೆ ಮುಗೀತು. ಹಾಗಾಗಿ ಆತನನ್ನು ಆಟ ಆಡಿಸಿರಿ. ಪಾತ್ರ ಸಿಕ್ಕುವುದು ಖಾತ್ರಿಯಾದ ಮೇಲೆ ಅವನ ಸಂಗ ಮಾಡಿ.

·         ನಿರ್ಮಾಪಕ ನಿಮ್ಮ ಜೊತೆ ಸಂಬಂಧ ಬೆಳೆಸಿದ್ದಕ್ಕೆ ಕೆಲವು ಸಾಕ್ಷಿಗಳನ್ನು ಇಟ್ಟುಕೊಳ್ಳಿ. ಇಲ್ಲದಿದ್ದರೆ, ನಿಮಗೆ ಅವಕಾಶ ಕೈತಪ್ಪಿಹೋದ ನಂತರ  ನೀವು ಮಾಡುವ ಚೀರಾಟಕ್ಕೆ ಬೆಲೆ ಬರುವುದಿಲ್ಲ. ಮೀಡಿಯಾಗಳು ಕೂಡಾ ಸಹಾಯ ಮಾಡುವುದಿಲ್ಲ. ನೀವೇನೂ ಸೆಕ್ಸ್ ಟೇಪ್ ಮಾಡಬೇಕಾಗಿಲ್ಲ.  ನಿರ್ಮಾಪಕ ಕಳಿಸಿದ ಟೆಕ್ಸ್ಟ್, ಮೊಬೈಲ್ ಸಂವಾದ, ಫೇಸ್ ಬುಕ್ ಚಾಟ್, ಇತ್ಯಾದಿಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಸಿನಿಮಾದಲ್ಲಿ ಅವಕಾಶ ನೀಡಿದರೆ ಅದಕ್ಕೆ ಪ್ರತಿಯಾಗಿ ದೇಹ ಒಪ್ಪಿಸುತ್ತೇನೆ  ಎಂಬ ಎಕ್ಸ್ ಚೇಂಜ್ ಆಫರ್ ಗೆ ನೀವು ಸಿದ್ಧರಾಗಿದ್ದಲ್ಲಿ  ಅದನ್ನು ಸಾಧ್ಯವಾದಷ್ಟು ಮುಂದೂಡುತ್ತಾ ಹೋಗಿ. ಪಾತ್ರ ಕೈಗೆ ಸಿಕ್ಕಿದಮೇಲೆಯೇ ದೇಹವನ್ನು ಒಪ್ಪಿಸಿ.

          ಚಿತ್ರೋದ್ಯಮದಲ್ಲಿ ನಟಿಯರು ಸೇಲೇಬಲ್. ಸಿನಿಮಾದಲ್ಲಷ್ಟೇ ಅಲ್ಲ, ಸಿನಿಮಾದಾಚೆಗೂ. ಹಾಗಂತ ನಮ್ಮ ಜನ ಅಂದುಕೊಂಡಿದ್ದಾರೆ. ಅವರ ಅನಿಸಿಕೆಯನ್ನು ಸುಳ್ಳು ಮಾಡುವ ಪ್ರಯತ್ನಕ್ಕೆ ಚಿತ್ರೋದ್ಯಮ ಕೈಹಾಕುತ್ತಿಲ್ಲ ಅನ್ನುವುದೇ ವಿಷಾದದ ಸಂಗತಿ. ಆ ಕಾರಣಕ್ಕೆ ಬೆಳ್ಳಿತೆರೆಯಲ್ಲಿ ಬೆಳಗುವ ಪ್ರತಿಭೆಯುಳ್ಳ ಹಲವಾರು ಹೆಣ್ಮಕ್ಕಳು ಚಿತ್ರರಂಗದ ಕಡೆ ನೋಡುವುದೂ ಇಲ್ಲ.

ಅಂದಹಾಗೆ ಇನ್ನು ಮುಂದೆ ಶ್ವೇತಾ ಬಸುವನ್ನು ಯಾರೂ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಎಂದು ನೆನಪಲ್ಲಿಟ್ಟುಕೊಳ್ಳುವುದಿಲ್ಲ. ಆಕೆ ಸೆಕ್ಸ್ ಸ್ಕಾಂಡಲ್ ಖ್ಯಾತಿಯ ನಟಿಯಾಗಿಯೇ ಜನಮಾನಸದಲ್ಲಿ ಸ್ಥಿರವಾಗಿರುತ್ತಾಳೆ. ಅಲ್ಲೆಲ್ಲೋ ದೂರದಲ್ಲಿ ಹೊಸ ರಣಹದ್ದುಗಳು ಆಕೆ ಹೊರಬರುವುದಕ್ಕೇ ಕಾಯುತ್ತಿವೆ.

Also See

Uma Column 49 - ಮಾರಿಬಿಡಿ!

Uma Column 48 - ಅನಂತಮೂರ್ತಿಯವರು ಕುಪ್ಪಣ್ಣನಾದ ಕತೆ

Uma Column 47 - ಇದ್ಯಾಕೆ ಬಾಸು ಹಿಂಗಾಯ್ತು?

Uma Column 46 - ಮಲ್ಲಿಗೆಯ ತೋಟದಲ್ಲಿ ಡೇಲಿಯಾ ಬಂದು ಕುಳಿತಂತೆ..

Uma Column 45 - ಈ ಸಂಭಾವನೆ.....

Uma Column 44 - ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ ಎಲ್ಲಿ ಹೋಯಿತು?

Uma column 43 - ಅದು ಸಿಸೇರಿಯನ್ ಅಲ್ಲ, ನಾರ್ಮಲ್

Chitraloka 15th Year Celebration Images - View

Uma Column 42 - ಸ್ಟಾರ್.. ಸ್ಟಾರ್ ...ಎಲ್ನೋಡಿ ಸ್ಟಾರ್

Uma Column 41 - ಇವರಿಗೆ ಯಾರಾದರೂ ಒಳ್ಳೇ ಭಾಷೆ ಕಲಿಸಿ ಸ್ವಾಮೀ

Uma Column 40 - ನಾಯಕ್ ನಹೀಂ...ಖಳನಾಯಕ್ ಹೂಂ ಮೈ

Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು

Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.

#

Rambo 2 Movie Gallery

https://www.chitraloka.com/movie-reviews/17656-rambo-2-movie-review-chitraloka-rating-3-5-5.html

Raja Loves Radhe Movie Gallery