Print 

User Rating: 0 / 5

Star inactiveStar inactiveStar inactiveStar inactiveStar inactive
 
deepika kamaiah image
deepika kamaiah

ಈ ಕೆಳಗಿನ ಸಾಲುಗಳನ್ನು ಸುಮ್ಮನೇ ಓದಿಕೊಳ್ಳಿ. ಇದು ಬಿಗ್ ಬಾಸ್ ಸೀಸನ್ 2 ಕಾರ್ಯಕ್ರಮಕ್ಕೆ ಸಂಬಂಧಿಸಿದ್ದು.

·        ಚಿರತೆಯಾಗಿ ದೀಪಿಕಾ ಕಾಮಯ್ಯ, ಕೋತಿಯಾಗಿ ಅಕುಲ್, ಯೇತಿಯಾಗಿ ಆದಿ ಲೋಕೇಶ್, ಜಿರಾಫೆಯಾಗಿ ಶ್ವೇತಾ ಚೆಂಗಪ್ಪ ಅದ್ಭುತ ಪ್ರದರ್ಶನ ನೀಡಿದರು.

·        ಮಾತಿನ ಚಕಮಕಿಯಲ್ಲಿ ರೋಹಿತ್ F…ಪದವನ್ನು ಬಳಸಿದರು.

·        ನೀತೂ ಅವರು ಅಕುಲ್ ಅವರನ್ನು ಲೋಫರ್ ಎಂದು ಜರಿದರು.

·        ಹರ್ಷಿಕಾ ಕೈಯಲ್ಲಿದ್ದ ವಸ್ತು ಜಾರಿ ಗುರುಪ್ರಸಾದ್ ಅವರ ಮರ್ಮಸ್ಥಾನಕ್ಕೆ ತಗಲಿತು. ಅದರಿಂದ ಆಘಾತಕ್ಕೊಳಗಾದ ಗುರುಪ್ರಸಾದ್ ಏನಮ್ಮಾ ಹಿಂಗ್ ಮಾಡ್ಬಿಟ್ಟೆ ಎಂದು ತಮ್ಮ ಚಡ್ಡಿ ಮೇಲೆ ಕೈ ಮುಚ್ಚಿಕೊಂಡು ಬಾತ್ ರೂಮಿಗೆ ಓಡಿಹೋದರು.

·        ಆಗ ಅಲ್ಲಿಗೆ ಬಂದ ಅಕುಲ್ ಮತ್ತು ಸಂತೋಷ್ ‘ಏನು ಗುರುಗಳೇ ಈಗ ಓಕೇನಾ’ಎಂದು ಕೇಳಿದರು. ‘ಇಲ್ಲಪ್ಪಾ ಸಿಕ್ಕಾಪಟ್ಟೆ ನೋವಾಗ್ತಿದೆ ಎಂದು ಗುರು ಹೇಳಿದರು. ‘ರಕ್ತ ಏನೂ ಬರ್ತಿಲ್ಲ ತಾನೆ’ಎಂದು ಕೇಳಿದ್ದಕ್ಕೆ ‘ಹಾಗೇನಿಲ್ಲ, ನೋವಾಗ್ತಿದೆ, ಐಸ್ ಇದ್ದರೆ ತನ್ನಿ’ಅಂದರು.

bigg boss 2 members

ಅಕುಲ್ ಕೋತಿಯಂತೆ ಆಡುವುದು, ಆದಿ ಯೇತಿಯಂತೆ ಓಡುವುದು ಕನ್ನಡದ ವೀಕ್ಷಕರಿಗೆ ಹೊಸದೇನಲ್ಲ. ಕೆಲವು ಹೆಣ್ಮಕ್ಕಳು ತಾವು ಧರಿಸುವ ವೇಷಭೂಷಣ ಮತ್ತು ಹಾವಭಾವದಿಂದಾಗಿ ಚಿರತೆ ಅಥವಾ ಜಿರಾಫೆಯಂತೆ ಕಾಣಿಸುವುದೂ ಉಂಟು, ಅದರಲ್ಲಿ ತಪ್ಪೇನಿಲ್ಲ. ಆದರೆ ರೋಹಿತ್ ಎಂಬ ರೇಡಿಯೋ ಜಾಕಿ ಅಶ್ಲೀಲ ಪದವನ್ನು ಬಳಸಿದ್ದಕ್ಕೆ ಕ್ಷಮೆಯಿಲ್ಲ. ಯಾವುದೋ ಅಡ್ಡಾದಲ್ಲಿ ಕುಳಿತು ಗುಂಡು ಹಾಕುತ್ತಾ ಗೆಳೆಯರ ಮುಂದೆ ಅವರು ಈ ಮಾತು ಆಡಿದರೆ ನಮ್ಮ ಆಕ್ಷೇಪಣೆಯೇನೂ ಇರುತ್ತಿರಲಿಲ್ಲ. ಆದರೆ ಮನೆಮಂದಿ ಒಟ್ಟಾಗಿ ಕುಳಿತು ನೋಡುವಂಥಾ ಕಾರ್ಯಕ್ರಮದಲ್ಲಿ ಇಂಥಾದ್ದೊಂದು ಕೆಟ್ಟಕೊಳಕ ಪದ ನುಸುಳಿದರೆ ಅದನ್ನು ಸಹಿಸಿಕೊಳ್ಳುವುದು ಹೇಗೆ? ಹೋಗಲಿ, ಅದನ್ನು ಎಡಿಟ್ ಮಾಡುವ ಅವಕಾಶ ಮತ್ತು ಅಧಿಕಾರ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಮಾಡುವ ಚಾನೆಲ್ಲಿಗಿದ್ದರೂ ಅವರ್ಯಾಕೆ ಸುಮ್ಮನಿದ್ದರು? ಇಂಥಾ ಅಸಭ್ಯ ಮಾತು ಟೀಆರ್ಪಿ ತಂದುಕೊಡಬಹುದು ಅನ್ನುವ ಭ್ರಮೆ ಅವರನ್ನು ಆವರಿಸಿದೆಯಾ?ನನ್ನ ಪ್ರಕಾರ ಇದು ಘೋರ ಅಪರಾಧ. ಅಂಥಾ ವಲ್ಗರ್ ಪದವನ್ನು ಜೀರ್ಣಿಸಿಕೊಳ್ಳುವ ಮಟ್ಟಕ್ಕೆ ಕನ್ನಡ ವೀಕ್ಷಕರಿನ್ನೂ ಇಳಿದಿಲ್ಲ. ಒಬ್ಬ ಸಂಭಾವಿತನಿಗೆ ಕುಡಿತದ ಚಟ ಹಿಡಿಸಿ, ಆ ಮೂಲಕ ಪೈಶಾಚಿಕ ಆನಂದವನ್ನು ಪಡೆಯುವ ವಿಕೃತಮನಸ್ಸುಗಳಿಗೂ ಇವರಿಗೂ ಯಾವುದೇ ವ್ಯತ್ಯಾಸ ನನಗೆ ಕಾಣಿಸುತ್ತಿಲ್ಲ. 

 ಹಾಗೆ ನೋಡಿದರೆ ಬಿಗ್ ಬಾಸ್ ಬಹಳ ವಿಶಿಷ್ಟವಾದ ಕಾನ್ಸೆಪ್ಟ್ . ಸ್ವಿಜರ್ಲೆಂಡ್ ಮೂಲದ ಎಂಡಮಾಲ್ ಕಂಪನಿ ಬಳಿ ಬಿಗ್ ಬಾಸ್ ಕಲ್ಪನೆಯ ಹಕ್ಕುಗಳಿವೆ.  ಒಬ್ಬ ವ್ಯಕ್ತಿಯನ್ನು ಒಂದೇ ಸ್ಥಳದಲ್ಲಿ ಅಪರಿಚಿತರ ಜೊತೆ ಮೂರು ತಿಂಗಳ ಕಾಲ ಕೂಡಿ ಹಾಕಿ, ಆತನಿಗೆ ಊಟ ತಿಂಡಿ ಹೊರತಾಗಿ ಯಾವ ಸೌಲಭ್ಯವನ್ನೂ ನೀಡದೇ ಇದ್ದಾಗ ಆತನ ವರ್ತನೆಯಲ್ಲಿ ಏನೇನು ಬದಲಾವಣೆಗಳಾಗುತ್ತವೆ ಅನ್ನುವುದನ್ನು ತೋರಿಸುವ ಪ್ರಯತ್ನವಿದು. ಮನಃಶಾಸ್ತ್ರದಲ್ಲಿ ಆಸಕ್ತಿ ಇರುವವರಿಗೆ ಅಧ್ಯಯನಕ್ಕೊಂದು ಒಳ್ಳೆಯ ವಸ್ತು. ಎಷ್ಟೇ ಐಶಾರಾಮದ ಬದುಕನ್ನು ಒದಗಿಸಿದರೂ ಮನುಷ್ಯ ಸದಾ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಾನೆ.ಒಬ್ಬ ಭಿಕ್ಷಕ ಕೂಡಾ ಬೆಗ್ಗರ್ಸ್ ಕಾಲನಿಯಲ್ಲಿ ಇರುವುದಕ್ಕೆ ಇಷ್ಟಪಡುವುದಿಲ್ಲ, ಯಾಕೆಂದರೆ ಊಟತಿಂಡಿಯಷ್ಟೇ ಸ್ವಾತಂತ್ರ್ಯವೂ ಅವನಿಗೆ ಮುಖ್ಯವಾಗುತ್ತದೆ. ಆಧುನಿಕ ಬದುಕು ಇಂದಿನ ಮನುಷ್ಯನಿಗೆ ಹಲವಾರು ಸವಲತ್ತುಗಳನ್ನು ನೀಡಿದೆ. ಉದಾ – ಪತ್ರಿಕೆ, ಟೀವಿ, ರೇಡಿಯೋ, ಫೋನ್ ಇತ್ಯಾದಿ. ಆ ಸವಲತ್ತುಗಳಿಗೆ ಆತ ಅಡಿಕ್ಟ್ ಆಗಿದ್ದೂ ಆಗಿದೆ. ಒಂದು ಮಗುವಿಗೆ ಕೈತುತ್ತು ತಿನಿಸಬೇಕಾದರೂ ಅದನ್ನು ಟೀವಿ ಮುಂದೆ ಕೂರಿಸಬೇಕಾದ ಪರಿಸ್ಥಿತಿಯಿದೆ.ಹಾಗಿರುವಾಗ ಇದಕ್ಕೆ ತದ್ವಿರುದ್ಧವಾದ ಪರಿಸರದಲ್ಲಿ ಮನುಷ್ಯನನ್ನು ಕೂಡಿಹಾಕಿದರೆ ಏನಾಗಬಹುದು? ಅದೇ ಬಿಗ್ ಬಾಸ್.

ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು  ಮಾನಸಿಕವಾಗಿ ತಯಾರಾಗಿರಬೇಕು. ಮನೆಯವರಿಂದ, ಆತ್ಮೀಯರಿಂದ  ದೂರವಾಗಿ ಯಾವುದೋ ದ್ವೀಪದಲ್ಲಿ ಅಪರಿಚಿತರ ಜೊತೆ ಬದುಕುವುದು ಸುಲಭವೇನಲ್ಲ.  ಹತಾಶೆ, ಅತಿಯಾದ ಭಾವುಕತೆ, ಮಾನಸಿಕ ಅಸ್ವಸ್ಥತೆ ಕಾಡಬಹುದು. ಬದುಕಿನ ಶೈಲಿಯೇ ಬದಲಾಗುವುದರಿಂದ ಆತ ಅಸಹಜವಾಗಿ ವರ್ತಿಸಬಹುದು. ಅಪರ್ಣನಂಥಾ ಪ್ರಬುದ್ಧ ಹೆಣ್ಮಗಳೇ ತಾಳ್ಮೆ ಕಳಕೊಂಡು ಕೂಗಾಡಿದ್ದನ್ನು ನಾವು ಬಿಗ್ ಬಾಸ್ ನ ಮೊದಲ ಆವೃತ್ತಿಯಲ್ಲಿ ನೋಡಿ ಚಕಿತರಾಗಿದ್ದು ನಿಮಗೆ ನೆನಪಿರಬಹುದು.

guruprasad, akul balaji

ಈ ಬಾರಿ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ಯಾರೂ ಅಂಥಾ ತಾಲೀಮು ಮಾಡಿಕೊಂಡು ಬಂದ ಹಾಗೆ ಕಾಣಿಸುತ್ತಿಲ್ಲ. ಟೈಮ್ ಪಾಸ್ ಗೆ ಬಂದವರು, ಖಾಲಿ ಕುಳಿತುಕೊಳ್ಳುವ ಬದಲು ಒಂದಷ್ಟು ದುಡ್ಡು  ಸಂಪಾದಿಸೋಣ ಅಂತ ಬಂದವರು, ಇಲ್ಲಿ ಸಿಗುವ ಪ್ರಚಾರದಿಂದ ಭವಿಷ್ಯದಲ್ಲಿ ಏನಾದರೂ ಸಹಾಯವಾದೀತು ಎಂಬ ನಿರೀಕ್ಷೆಯಿಟ್ಟುಕೊಂಡು ಬಂದವರು, ಇಂಥವರೇ ಇಲ್ಲಿ ತುಂಬಿಕೊಂಡಿದ್ದಾರೆ. ಸ್ಪರ್ಧಾಳುಗಳ ಆಯ್ಕೆಯಲ್ಲಿ ತಪ್ಪಾಗಿದ್ದು ಎಲ್ಲಿ ಅಂದರೆ ಇಲ್ಲಿರುವವರೆಲ್ಲಾ ಸಿನಿಮಾ ಅಥವಾ ಟೀವಿ ಕ್ಷೇತ್ರಕ್ಕೆ ಸಂಬಂಧಪಟ್ಟವರು. ಇವರನ್ನೆಲ್ಲಾ ಜನ ಈಗಾಗಲೇ ತೆರೆಯ ಮೇಲೆ ನೋಡಿದ್ದಾಗಿದೆ.  ಅದಕ್ಕಿಂತ ಹೆಚ್ಚಾಗಿ ಇವರ್ಯಾರೂ ಟೀಆರ್ಪಿಯನ್ನು ಬಾಚಿ ತಂದುಕೊಡುವಷ್ಟು ಜನಪ್ರಿಯರಲ್ಲ. ಹಾಗಾಗಿ ಇವರಾಡುವ ಜಗಳಗಳು ಬೀದಿ ಜಗಳದ ಮಟ್ಟಕ್ಕಿಂತ ಮೇಲೇರುವುದಿಲ್ಲ. ಇವರ ಹುಚ್ಚಾಟಗಳು ನಗುವನ್ನೂ ತರಿಸುವುದಿಲ್ಲ.  ಬಹುಶಃ ಚಾನೆಲ್ಲಿನವರಿಗೆ ಅರ್ಹ ಅಭ್ಯರ್ಥಿಗಳನ್ನು ಹುಡುಕುವುದೇ ಸಮಸ್ಯೆಯಾದಂತಿದೆ. ಅದಕ್ಕೆ ಮುಖ್ಯ ಕಾರಣ ಬಿಗ್ ಬಾಸ್ ನ ಮೊದಲ ಆವೃತ್ತಿಯ ಯಶಸ್ಸು ಮತ್ತು ವಿವಾದ. ಅದರಲ್ಲಿ ಪಾಲ್ಗೊಂಡವರು ಜನಪ್ರಿಯತೆ ಸಂಪಾದಿಸಿದ್ದು ನಿಜ. ಆದರೆ ಜನರು ಅವರನ್ನು ತಮಾಷೆಯ ವಸ್ತುವಿನಂತೆ ಪರಿಗಣಿಸಿದರು. ಬ್ರಹ್ಮಾಂಡ ಗುರೂಜಿ ಬಿಗ್ ಬಾಸ್ ನ ಟೀಆರ್ ಪಿ ಏರಿಸುವುದಕ್ಕೆ ಮುಖ್ಯ ಕಾರಣಕರ್ತರಾಗಿದ್ದರೂ ಹೊರಗೆ ಬಂದಮೇಲೆ ತಮ್ಮ ಟೀಆರ್ ಪಿಯನ್ನು ಕಳಕೊಂಡರು. ಕೆಲವರಂತೂ ನೇರವಾಗಿಯೇ ಪತ್ರಿಕೆಗಳಲ್ಲಿ ತಮ್ಮ ಮರ್ಯಾದೆ ಹೋಯಿತು ಎಂದು ಗೋಳಾಡಿದರು. ವಿಜಯರಾಘವೇಂದ್ರ ಬಿಗ್ ಬಾಸ್ ಪ್ರಶಸ್ತಿ ಗೆದ್ದರೂ ಅವರಿಗೆ ಸಿನಿಮಾದಲ್ಲಿ ಅಂಥಾ ಅವಕಾಶಗಳೇನೂ ಸಿಗಲಿಲ್ಲ, ಅರುಣ್ ಸಾಗರ್ ಹೆಚ್ಚುಕಮ್ಮಿ ನಾಪತ್ತೆಯಾಗಿಯೇ ಹೋಗಿದ್ದಾರೆ. ಹಾಗಿದ್ದಮೇಲೆ ಯಾವ ಪುರುಷಾರ್ಥಕ್ಕೆ ಬಿಗ್ ಬಾಸ್ ಗೆ ಹೋಗಬೇಕು ಅನ್ನುವ ಅಭಿಪ್ರಾಯ ಹೆಚ್ಚಿನ ಸಿಲಬ್ರೆಟಿಗಳಲ್ಲಿ  ಮೂಡಿತ್ತು.

neethu

ಸಿಲೆಬ್ರಟಿಗಳು ಯಾವತ್ತೂ ತಮ್ಮ ಪ್ಲಸ್ ಪಾಯಿಂಟುಗಳನ್ನೇ ಜನರ ಮುಂದೆ ಪ್ರದರ್ಶಿಸುವುದಕ್ಕೆ ಕಾತುರರಾಗಿರುತ್ತಾರೆ. ಯಾಕೆಂದರೆ ತಮ್ಮ ಇಮೇಜು ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಅವರಿಗಿರುತ್ತದೆ.  ಬಿಗ್ ಬಾಸ್ ಅವರ ಮೈನಸ್ ಅಂಶಗಳನ್ನೇ ಹೈಲೈಟ್ ಮಾಡುತ್ತದೆ. ಉದಾಹರಣೆಗೆ ನೀತೂ ಕನ್ನಡ ಚಿತ್ರರಂಗ ಕಂಡ ಬುದ್ದಿವಂತ ನಟಿಯರ ಪೈಕಿ ಒಬ್ಬರು. ಕಮರ್ಷಿಯಲ್ ಮತ್ತು ಕಲಾತ್ಮಕ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದವರು, ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ತಮ್ಮ ಘನತೆಯನ್ನು ಕಾಪಾಡಿಕೊಳ್ಳುವಲ್ಲಿ ಇನ್ನಿಲ್ಲದ ಎಚ್ಚರ ವಹಿಸುವವರು. ಈಗ ಅವರ ಸ್ಥಿತಿ ಏನಾಗಿದೆ ನೋಡಿ. ಲೋಫರ್ ಎಂದು ಬೈಯ್ಯುವ ಮಟ್ಟಕ್ಕೆ ಅವರು ಇಳಿದಿದ್ದಾರೆ. ಎಂಬಲ್ಲಿಗೆ ಅವರ ಅಸಲಿ ಮುಖ ಇದೇ ಇರಬಹುದಾ ಎಂಬ ಜನ ಅನುಮಾನಿಸುವಂತಾಗಿದೆ.

ಚಾರಿತ್ರ್ಯವಧೆಗಳು ಕೆಲವೊಮ್ಮೆ ಆಕಸ್ಮಿಕವಾಗಿರಬಹುದು, ಆದರೆ ಇನ್ನು ಕೆಲವೊಮ್ಮೆ ಬಿಗ್ ಬಾಸ್ ನೀಡುವ ಟಾಸ್ಕ್ ಗಳಿಂದಾಗಿ ಸ್ಪರ್ಧಿಗಳು ಈ ಥರ ವರ್ತಿಸುವುದು ಅನಿವಾರ್ಯವಾಗಿದ್ದಿರಬಹುದು. ಈಗಂತೂ  ಚಾನೆಲ್ ಕೂಡಾ ಸ್ಪರ್ಧಿಗಳಷ್ಟೇ ಅಸಹಾಯಕತೆಯನ್ನು ಅನುಭವಿಸುತ್ತಿರುವಂತೆ ಕಾಣಿಸುತ್ತಿದೆ. ಯಾಕೆಂದರೆ ಟೀಆರ್ ಪಿ ಕುಸಿಯುತ್ತಿದೆ. ಹಾಕಿದ ಬಂಡವಾಳಕ್ಕೆ ತಕ್ಕಂಥ ಪ್ರತಿಕ್ರಿಯೆ ಸಿಗದೇ ಇದ್ದಾಗ ಹುಚ್ಚುಚ್ಚಾದ ಪ್ರಯೋಗಗಳು ನಡೆಯುತ್ತಿವೆ.  ಆಗ ಗುರುಪ್ರಸಾದ್ ಮರ್ಮಸ್ಥಾನಕ್ಕೆ ಏಟು ಬೀಳುತ್ತದೆ, ಅವರು ದಯನೀಯವಾಗಿ ಅಳುತ್ತಾರೆ, ಇಲ್ಲವೇ ಹುಚ್ಚಾಪಟ್ಟೆ ರೇಗುತ್ತಾರೆ. ಅಕುಲ್ ಪದೇಪದೇ  ಆಂಜನೇಯನ ಅವತಾರ ತಾಳುತ್ತಾರೆ. ಹೊರಗೆ ಬಂದ ಸ್ಪರ್ಧಿಗಳೇ  ಮತ್ತೆ ಒಳಗೆ ಸೇರುತ್ತಾರೆ. ಎಂದಿನಂತೆ ಸ್ಪರ್ಧಾಳುಗಳ ಕೊರತೆ. ಸುದೀಪ್ ಮಾತುಗಳೂ ಹಿಂದಿನ ಮ್ಯಾಜಿಕ್ ಸ್ಪರ್ಶವನ್ನು ಕಳಕೊಂಡಿವೆ.

ಇದೇ ಸಂದರ್ಭದಲ್ಲಿ ಇನ್ನೊಂದು ಚಾನೆಲ್ಲಲ್ಲಿ ‘ವೀಕೆಂಡ್ವಿಥ್ರಮೇಶ್’ ಎಂಬ ಮತ್ತೊಂದು ರಿಯಾಲಿಟಿ ಶೋಶುರುವಾಗಿದೆ, ಗಣೇಶ್ ಇನ್ನೊಂದು ರಿಯಾಲಿಟಿ ಶೋ ಒಪ್ಪಿಕೊಂಡಿದ್ದಾರೆ. ಚಿತ್ರೋದ್ಯಮ ಯಥಾಪ್ರಕಾರ ಕೊರಗುವುದಕ್ಕೆ ಶುರುಮಾಡಿದೆ. ಕನ್ನಡ ಚಿತ್ರಗಳು ಟೀವಿ ಚಾನೆಲ್ಲುಗಳಿಗೆ ಬೇಡ, ಆದರೆ ಕನ್ನಡದ ಸ್ಟಾರುಗಳು ಅವುಗಳಿಗೆ ಬೇಕು ಅನ್ನುವುದು ನಿರ್ಮಾಪಕರ ಆಕ್ಷೇಪಣೆಯ ತಿರುಳು.  ಆದರೆ ಒಂದೊಳ್ಳೆಯ ಸಿನಿಮಾವನ್ನು ತ್ಯಾಗ ಮಾಡುವಷ್ಟು ಬಿಗ್ ಬಾಸ್  ಕಾರ್ಯಕ್ರಮ ಚೆನ್ನಾಗಿಲ್ಲ ಅನ್ನುವುದು ಎಲ್ಲರಿಗೂ ಗೊತ್ತಿದೆ. ಐಡಿಯಾಗಳು ಖಾಲಿಯಾದಾಗ ಜನರು ನೆಪಗಳನ್ನು ಹುಡುಕುವುದಕ್ಕೆ ಶುರು ಮಾಡುತ್ತಾರೆ.

ಬೀದಿ ಜಗಳ ಒಮ್ಮೆ ನೋಡುವುಕ್ಕೆ ಚೆನ್ನಾಗಿರುತ್ತದೆ. ಆದರೆ ಅದೇ ಬೀದಿಯಲ್ಲಿ ಅದೇ ಜಗಳಗಂಟರೇ ಮತ್ತೆಮತ್ತೆ ಜಗಳವಾಡುತ್ತಿದ್ದರೆ ಜನ ಆಸಕ್ತಿ ಕಳೆದುಕೊಳ್ಳುತ್ತಾರೆ. ಈ ಮಾತು ಉದ್ಯಮದ ಕೊರಗು ಮತ್ತು ಬಿಗ್ ಬಾಸ್ ಕಾರ್ಯಕ್ರಮ ಇವೆರಡಕ್ಕೂ ಅನ್ವಯವಾಗುತ್ತದೆ. 

Also See

Uma Column 46 - ಮಲ್ಲಿಗೆಯ ತೋಟದಲ್ಲಿ ಡೇಲಿಯಾ ಬಂದು ಕುಳಿತಂತೆ..

Uma Column 45 - ಈ ಸಂಭಾವನೆ.....

Uma Column 44 - ಸೇವಂತಿಗೆ ಚೆಂಡಿನಂಥ ಮುದ್ದುಕೋಳಿ ಎಲ್ಲಿ ಹೋಯಿತು?

Uma column 43 - ಅದು ಸಿಸೇರಿಯನ್ ಅಲ್ಲ, ನಾರ್ಮಲ್

Chitraloka 15th Year Celebration Images - View

Uma Column 42 - ಸ್ಟಾರ್.. ಸ್ಟಾರ್ ...ಎಲ್ನೋಡಿ ಸ್ಟಾರ್

Uma Column 41 - ಇವರಿಗೆ ಯಾರಾದರೂ ಒಳ್ಳೇ ಭಾಷೆ ಕಲಿಸಿ ಸ್ವಾಮೀ

Uma Column 40 - ನಾಯಕ್ ನಹೀಂ...ಖಳನಾಯಕ್ ಹೂಂ ಮೈ

Uma Column 39 - ರಮ್ಯನ ಸೋಲು ಮತ್ತು ಚಿತ್ರೋದ್ಯಮದ ಗೆಲುವು

Uma Column 38 - ಪ್ರೇಮಕತೆಗಳೂ ಕೆಲವೊಮ್ಮೆ ಸಾಯುತ್ತವೆ

Uma Column 37 - ಲೆಕ್ಕ ಪಕ್ಕಾ ಆಗಿದ್ದರೆ ಬಾಕಿ ಚುಕ್ತಾ

Uma Column 36 - ನಿಮ್ಮ ಪಿಕ್ಚರ್ ಸೌಂಡು ಮಾಡಬೇಕು ಅಂದರೆ...

Uma Column 35 - ಕರುಣೆಯಿಲ್ಲದ ಜಗತ್ತಲ್ಲಿ ಜಾಣನೊಬ್ಬನ ಪತನ

Uma Column 34 - ನಗು ನಗುತಾ ನಲಿನಲಿ.. ಏನೇ ಆಗಲಿ

Uma Column 33 - ಬದುಕೋದಕ್ಕೆ ಕಾರಣ ಬೇಕು, ಸಾಯೋದಕ್ಕಲ್ಲ..

Uma Column 32 - ರವಿ ಕಾಣದ್ದು ಮತ್ತು ನಾವು ಕಂಡಿದ್ದು...

Uma Column 31 - ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ...

Uma Column 30 - ಕಲಾದೇಗುಲದಲ್ಲಿ ದಕ್ಷಿಣೆಯದ್ದೇ ಪ್ರದಕ್ಷಿಣೆ

Uma Column 29 - ಕಳೆದು ಹೋದ ಬದುಕನ್ನು ಮರಳಿ ಕೊಡುವವರು ಯಾರು?

Uma Column 28 - ದಾಖಲೆ ಬರೆಯುವವರು ಮತ್ತು ಮುರಿಯುವವರು

Uma Column 27 - ಸಿನಿಮಾ ಪತ್ರಕರ್ತರೇ ಪಾಪಿಗಳು!

Uma Column 26 - ಡಿವೋರ್ಸು ಅನ್ನುವುದು ಈಗ ಬ್ರೇಕಿಂಗ್ ನ್ಯೂಸ್ ಅಲ್ಲ

Uma Column 25 - ಡರ್ಟಿ ಅವಾರ್ಡ್ಸ್ ಹಿಂದಿರುವ ಪಾಲಿಟಿಕ್ಸು

Uma Column 24 - ಬಂದದ್ದೆಲ್ಲಾ ಬರಲಿ, ಡಬ್ಬಿಂಗ್ ದಯೆಯೊಂದಿರಲಿ!

Uma Column 23 - ಡಬ್ಬಿಂಗ್ ಭೂತ ಅಲ್ಲ, ಭವಿಷ್ಯ

Uma Column 22 - ಮಳೆ ಹುಡುಗಿಯ ಮರೆವಿನ ಲೀಲೆ

Uma Column 21 - ಕಂಟ್ರಿ ಪಿಸ್ತೂಲ್ ಮತ್ತು ನಕಲಿ ಬುಲೆಟ್

Uma Column 20 -...ವಿಷ್ಣೂ ಎನಬಾರದೇ....

Uma Column 19 - ದರಿದ್ರರ ನಡುವೆ ಒಬ್ಬ ಗಂಡುಗಲಿ

Uma Column 18 - ಮೀನಿನ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಘಮ

Uma Column 17 - ತಂದೆ ನೀನಾಗು ಬಾ

Uma Column 16 - ಎಲ್ಲರೂ ಮಾಲಾಶ್ರೀ ಆಗುವುದಕ್ಕಾಗೋಲ್ಲ

Uma Column 15 - ಚಿತ್ರೋತ್ಸವವನ್ನು ಯೂ ಟ್ಯೂಬ್ ನಲ್ಲಿ ನೋಡಿ!

Uma Column 14 - ಹಾಗೆ ಸುಮ್ಮನೆ ಕಳೆದು ಹೋದ ಜೀನಿಯಸ್

Uma Column 13 - ಮಲ್ಟಿಪ್ಲೆಕ್ಸಲ್ಲಿ ಸಿನಿಮಾ ಭಾಗ್ಯ ಯೋಜನೆ

Uma Column 12 - ದೇವರಿಗೂ ಬೇಕಾ ಪ್ರಶಸ್ತಿಯ ಕಿರೀಟ?

Uma Column 11 - ಯಾರಿಗೇಳೋಣಾ ನಮ್ಮ ಪ್ರಾಬ್ಲಂ

Uma Column 10 - ತೊಲಗು ಅಂದರೆ ನಾನು ತೆಲುಗು ಅಂದ ಹಾಗಾಯಿತು

Uma Column 9 - ಹಳ್ಳಿ ಹುಡುಗನನ್ನು ಕೊಂದವರ್ಯಾರು?

Uma Column 8 - ಶಂಕರ ನಾಗಮಂಡಲದಲ್ಲಿ ಒಂದು ಸುತ್ತು..

Uma Column 7 - ಪ್ರಶಸ್ತಿಗಳು ಮಾರಾಟಕ್ಕಿವೆ!

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.