` ವಿನಯ್ ರಾಜಕುಮಾರ್ ಜೊತೆ ಜೊತೆಯಲಿ ಮೇಘಾ ಶೆಟ್ಟಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವಿನಯ್ ರಾಜಕುಮಾರ್ ಜೊತೆ ಜೊತೆಯಲಿ ಮೇಘಾ ಶೆಟ್ಟಿ
ವಿನಯ್ ರಾಜಕುಮಾರ್ ಜೊತೆ ಜೊತೆಯಲಿ ಮೇಘಾ ಶೆಟ್ಟಿ

ಜೊತೆ ಜೊತೆಯಲಿ ಸೀರಿಯಲ್ ಖ್ಯಾತಿಯ ಮೇಘಾ ಶೆಟ್ಟಿ, ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಮಿನುಗೋಕೆ ಸಿದ್ಧವಾಗಿದ್ದಾರೆ. ಈ ಬಾರಿ ದೊಡ್ಮನೆ ಹುಡುಗ ವಿನಯ್ ರಾಜ್`ಕುಮಾರ್ ಜೊತೆಯಾಗಿದ್ದಾರೆ. ಗ್ರಾಮಾಯಣ ಚಿತ್ರಕ್ಕೆ ಮೇಘಾ ಶೆಟ್ಟಿ ಹೀರೋಯಿನ್ ಆಗಿದ್ದಾರೆ.

ಈ ಮೊದಲು ಗಣೇಶ್ ಜೊತೆ ತ್ರಿಬ್ಬಲ್ ರೈಡಿಂಗ್ ಚಿತ್ರದಲ್ಲಿ ನಟಿಸಿದ್ದ ಮೇಘಾ ಶೆಟ್ಟಿ, ಆಪರೇಷನ್ ಲಂಡನ್ ಕೆಫೆ, ಕೈವ ಚಿತ್ರದಲ್ಲಿಯೂ ನಾಯಕಿಯಾಗಿದ್ದಾರೆ. ಗ್ರಾಮಾಯಣ ಪಕ್ಕಾ ಹಳ್ಳಿ ಸ್ಟೋರಿಯಾಗಿದ್ದು, ಹಳ್ಳಿ ಹುಡುಗಿಯಾಗಿಯೇ ಮೇಘಾ ಶೆಟ್ಟಿ ಮಿಂಚಲಿದ್ದಾರೆ. ಮೇಘಾ ಶೆಟ್ಟಿಯವರು ಮೂಗು ಚುಚ್ಚಿಸಿಕೊಂಡು ಮೂಗುತಿ ಧರಿಸಿದ್ದು ಇದಕ್ಕೇನೇ.

ದೇವನೂರು ಚಂದ್ರು ನಿರ್ದೇಶನದ ಚಿತ್ರಕ್ಕೆ ಇದೀಗ ಲಹರಿ ಫಿಲಮ್ಸ್ ಮತ್ತು ವೀನಸ್ ಎಂಟರ್‍ಟೈನ್‍ಮೆಂಟ್ ನಿರ್ಮಾಣದ ಹೊಣೆಗಾರಿಕೆ ಇದೆ.  ಚಿತ್ರದ ಚಿತ್ರೀಕರಣ ಅಕ್ಟೋಬರ್ 4 ರಂದು ಪ್ರಾರಂಭವಾಗಲಿದ್ದು, ಮೊದಲ ದಿನದ ಚಿತ್ರೀಕರಣ ಕಡೂರಿನಲ್ಲಿ ನಡೆಯಲಿದೆ. ಚಿತ್ರದಲ್ಲಿ ನಟನಾಗಿ ವಿನಯ್ ರಾಜ್ ಕುಮಾರ್ ಅವರು ನಟಿಸುತ್ತಿರುವುದು ಅಧಿಕೃತವಾಗಿದ್ದು, ನಿರ್ಮಾಪಕರು ಇದೀಗ ಚಿತ್ರದ ನಾಯಕ ನಟಿಯಾಗಿ ಮೇಘಾ ಶೆಟ್ಟಿಯವರನ್ನು ಅಂತಿಮಗೊಳಿಸಿದ್ದಾರೆ.