` SIMA 2023 ಪ್ರಶಸ್ತಿ : ಯಶ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಕಾರುಬಾರು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
SIMA 2023 ಪ್ರಶಸ್ತಿ : ಯಶ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಕಾರುಬಾರು
SIMA 2023 ಪ್ರಶಸ್ತಿ : ಯಶ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಕಾರುಬಾರು

SIMA 2023 ಪ್ರಶಸ್ತಿ ಪ್ರದಾನ ಸಮಾರಂಭ ಮುಕ್ತಾಯವಾಗಿದೆ. ಈ ಬಾರಿ ಕೆಜಿಎಫ್ ಚಾಪ್ಟರ್ 2, ಕಾಂತಾರ, 777 ಚಾರ್ಲಿ ಚಿತ್ರಗಳು ಪ್ರಮುಖ ಪ್ರಶಸ್ತಿಗಳನ್ನು ಗೆದ್ದುಕೊಂಡಿವೆ. ಕಾಂತಾರ ಚಿತ್ರದ ಮೂಲಕ ರಿಷಬ್ ಶೆಟ್ಟಿ ಅತ್ಯುತ್ತಮ ಡೈರೆಕ್ಟರ್ ಮತ್ತು ಸಪ್ತಮಿ ಗೌಡ ವಿಮರ್ಶಕರ ಆಯ್ಕೆಯ ಉತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 777 ಚಾರ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರೆ, ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿನ ನಟನೆಗಾಗಿ ಯಶ್ ಅವರಿಗೆ 'ಅತ್ಯುತ್ತಮ ನಟ' ಪ್ರಶಸ್ತಿ, ಶ್ರೀನಿಧಿ ಶೆಟ್ಟಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ಸೈಮಾ 2023 ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡ ತಾರೆಯರ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ…

SIMA 2023  ನಿರ್ದೇಶಕ - ರಿಷಬ್ ಶೆಟ್ಟಿ (ಚಿತ್ರ: ಕಾಂತಾರ)

SIMA 2023 ಚಿತ್ರ - 777 ಚಾರ್ಲಿ (ನಿರ್ಮಾಣ: ಪರಂವಃ ಸ್ಟುಡಿಯೋಸ್)

SIMA 2023 ನಟಿ (ವಿಮರ್ಶಕರ ಆಯ್ಕೆ) - ಸಪ್ತಮಿ ಗೌಡ (ಚಿತ್ರ: ಕಾಂತಾರ)

SIMA 2023  ನಟಿ - ಶ್ರೀನಿಧಿ ಶೆಟ್ಟಿ (ಚಿತ್ರ: ಕೆಜಿಎಫ್ - ಚಾಪ್ಟರ್ 2)

SIMA 2023  ನಟ - ಯಶ್ (ಚಿತ್ರ: ಕೆಜಿಎಫ್ - ಚಾಪ್ಟರ್ 2)

SIMA 2023 ವಿಶೇಷ ಮೆಚ್ಚುಗೆ ಪ್ರಶಸ್ತಿ - ಮುಕೇಶ್ ಲಕ್ಷ್ಮಣ್ (ಚಿತ್ರ: ಕಾಂತಾರ)

SIMA 2023 ವಿಶೇಷ ಮೆಚ್ಚುಗೆ ಪ್ರಶಸ್ತಿ - ಪಾಥ್ ಬ್ರೇಕಿಂಗ್ ಸ್ಟೋರಿ - ರಿಷಬ್ ಶೆಟ್ಟಿ (ಚಿತ್ರ: ಕಾಂತಾರ)

SIMA 2023 ವಿಶೇಷ ಮೆಚ್ಚುಗೆ ಪ್ರಶಸ್ತಿ - ಅತ್ಯುತ್ತಮ ನಟ - ರಕ್ಷಿತ್ ಶೆಟ್ಟಿ (ಚಿತ್ರ: 777 ಚಾರ್ಲಿ)

ಉದಯೋನ್ಮುಖ ನಟಿ - ನೀತಾ ಅಶೋಕ್ (ಚಿತ್ರ: ವಿಕ್ರಾಂತ್ ರೋಣ)

ಉದಯೋನ್ಮುಖ ನಟ - ಪೃಥ್ವಿ ಶಾಮನೂರು (ಚಿತ್ರ: ಪದವಿ ಪೂರ್ವ)

ಉದಯೋನ್ಮುಖ ನಿರ್ಮಾಪಕರು - ಅಪೇಕ್ಷಾ ಪುರೋಹಿತ್, ಪವನ್ ಒಡೆಯರ್ (ಚಿತ್ರ: ಡೊಳ್ಳು)

ಉದಯೋನ್ಮುಖ ನಿರ್ದೇಶಕರು - ಸಾಗರ್ ಪುರಾಣಿಕ್ (ಚಿತ್ರ: ಡೊಳ್ಳು)

ಪೋಷಕ ನಟಿ - ಶುಭಾ ರಕ್ಷಾ (ಚಿತ್ರ: ಹೋಮ್ ಮಿನಿಸ್ಟರ್)

ಪೋಷಕ ನಟ - ದಿಗಂತ್ ಮಂಚಾಲೆ (ಚಿತ್ರ: ಗಾಳಿಪಟ 2)

ಹಾಸ್ಯ ನಟ - ಪ್ರಕಾಶ್ ತುಮಿನಾಡ್ (ಚಿತ್ರ: ಕಾಂತಾರ)

ಖಳ ನಟ - ಅಚ್ಯುತ್ ಕುಮಾರ್ (ಚಿತ್ರ: ಕಾಂತಾರ)

ಛಾಯಾಗ್ರಹಣ - ಭುವನ್ ಗೌಡ (ಚಿತ್ರ: ಕೆಜಿಎಫ್ ಚಾಪ್ಟರ್ 2)

ಗಾಯಕಿ - ಸುನಿಧಿ ಚೌಹಾಣ್ (ಹಾಡು: ರಾ ರಾ ರಕ್ಕಮ್ಮ) (ಚಿತ್ರ: ವಿಕ್ರಾಂತ್ ರೋಣ)

ಗಾಯಕ - ವಿಜಯ್ ಪ್ರಕಾಶ್ (ಹಾಡು: ಸಿಂಗಾರ ಸಿರಿಯೇ) (ಚಿತ್ರ: ಕಾಂತಾರ)

ಗೀತರಚನೆಕಾರ - ಪ್ರಮೋದ್ ಮರವಂತೆ (ಹಾಡು: ಸಿಂಗಾರ ಸಿರಿಯೇ) (ಚಿತ್ರ: ಕಾಂತಾರ)

ಸಂಗೀತ ನಿರ್ದೇಶನ - ಅಜನೀಶ್ ಲೋಕನಾಥ್ (ಕಾಂತಾರ)