ವಿನೋದ್ ಪ್ರಭಾಕರ್ ಅವರ ಬೆನ್ನ ಹಿಂದೆ ಒಬ್ಬಳು ಸುಂದರಿ ಬಿದ್ದಿದ್ದಾಳೆ. ವಿನೋದ್ ಎಲ್ಲೇ ಹೋದ್ರೂ.. ಆಕೆ ಫಾಲೋ ಮಾಡ್ತಾಳೆ. ಅದೂ ಅಂತಿಂತಾ ಫಾಲೋ ಅಲ್ಲ. ವಿನೋದ್ ಇನ್ನೊಬ್ಬಳಿಗೆ ತಾಳಿ ಕಟ್ಟೋಕೆ ಹೋದ್ರೆ ಗೂಂಡಾಗಳನ್ನ ಇಟ್ಟುಕೊಂಡು ವಿನೋದ್ ಪ್ರಭಾಕರ್‍ನ್ನೇ ಓಡಿಸ್ಕೊಂಡು ಹೋಗ್ತಾಳೆ. ಪೊಲೀಸ್ ಆಗಿ ಬಂದು ರಸ್ತೆಯಲ್ಲೇ..
ಫೈಟರ್ ಚಿತ್ರದ ಹಾಡಿದು. ಟೀಸರ್ ಬಿಟ್ಟು ಸೆನ್ಸೇಷನ್ ಮಾಡಿದ್ದ ಫೈಟರ್ ಚಿತ್ರದ ಹೊಸ ಹಾಡು ರಿಲೀಸ್ ಆಗಿದೆ. ಐ ವಾನಾ ಫಾಲೋ ಯೂ… ರುಕ್ಕೋ ರುಕ್ಕೋ ರೋಮಿಯೋ, ನನ್ನ ಕಡೆ ನೋಡಯ್ಯೋ…’ ಎಂದು ಸಾಗುವ ಹಾಡಿದು. ನಾಯಕನ ಹಿಂದೆ ಸುತ್ತುತ್ತಾ ಆತನನ್ನು ಛೇಡಿಸುವ ರೀತಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ವಿನೋದ್ ಪ್ರಭಾಕರ್ ಹಾಗೂ ಲೇಖಾಚಂದ್ರ ಈ ಹಾಡಿಗೆ ಸ್ಟೈಲಿಶ್ ಲುಕ್ನಲ್ಲಿ ಸ್ಟೆಪ್ಸ್ ಹಾಕಿದ್ದಾರೆ.
ಗುರುಕಿರಣ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಕವಿರಾಜ್ ಸಾಹಿತ್ಯ ಬರೆದಿದ್ದು, ಚೈತ್ರಾ ಧ್ವನಿಯಾಗಿದ್ದಾರೆ. ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ನೂತನ್ ಉಮೇಶ್ ನಿರ್ದೇಶನದ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಪಾವನಾ ಹಾಗೂ ಲೇಖಾಚಂದ್ರ ನಟಿಸಿದ್ದಾರೆ. ‘ಲಾಕಪ್ ಡೆತ್’ ಖ್ಯಾತಿಯ ನಟಿ ನಿರೋಷ ‘ಫೈಟರ್’ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದೊಡ್ಡ ಗ್ಯಾಪ್ನ ನಂತರ ಮತ್ತೆ ಕನ್ನಡದಲ್ಲಿ ಅಭಿನಯಿಸಿರುವುದು ವಿಶೇಷ.