ಜಯಂತ್ ಕಾಯ್ಕಿಣಿ. ಆ ಹೆಸರು ಕೇಳಿದರೆ ಚಿತ್ರ ಪ್ರೇಮಿಗಳ ಹೃದಯದಲ್ಲೊಂದು ಮಧುರ ಭಾವ ಮೂಡಿದರೆ ಆಶ್ಚರ್ಯವಿಲ್ಲ. ಸದಾ ಪ್ರೀತಿ, ಪ್ರೇಮ, ಮಾಧುರ್ಯ, ಪದಗಳ ಲಾಲಿತ್ಯದಲ್ಲೇ ಹೊಸ ಕಾವ್ಯ ಕಟ್ಟುವ ಜಯಂತ್ ಕಾಯ್ಕಿಣಿ, ಪ್ರೇಮಿಗಳ ಡಾರ್ಲಿಂಗ್ ಕೂಡಾ ಹೌದು. ಅಂತಹ ಕಾಯ್ಕಿಣಿ ಮಾಸ್ ಸಾಂಗ್ ಬರೆದರೆ.. ಹೇಗಿರುತ್ತೆ..? ಒಂದ್ಸಲ ಬ್ಯಾಡ್ ಮ್ಯಾನರ್ಸ್ ಚಿತ್ರದ ಟೈಟಲ್ ಸಾಂಗ್ ಕೇಳಿ ನೋಡಿ.
ಓಗಾ ಓಗಾ ಎಲೆ
ಟೀ ಅಮೋ
ಒ ಮಿಗೋ ಮೀಗೋ
ಎಲೆ ಟೀ ಅಮೋ..
ಆ ಆಯೋನ ಟೀ ಅಮೋ..
ಟೀ ಅಮೋ..
ಏ ಓಗಾ ಓಗಾ ಓಗಾ
ಎಯ ಟೀ ಅಮೋ..
ನಂಬಿ.. ಇದನ್ನು ಬರೆದಿರುವುದು ಜಯಂತ ಕಾಯ್ಕಿಣಿ. ದುನಿಯಾ ಸೂರಿ, ಕಾಯ್ಕಿಣಿಯವರ ಪೆನ್ನಿಗೆ ಅದೇನೋ ತುಂಬಿದ್ದಾರೆ. ಕಾಯ್ಕಿಣಿಯವರ ಈ ಸಾಹಿತ್ಯದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಪದಗಳೂ ತುಂಬಿವೆ. ನಡುವೆ ನಮ್ಮೂರ ನೆಂಟ, ಅಲೆಮಾರಿ ಸಂತ, ಮಂದಹಾಸ, ಪ್ರೀತಿ ನಿಷ್ಕಾರಣ, ಒಗಟು, ಹಬ್ಬಿದ ಒಂದೇ ಬಳ್ಳಿ, ಹನಿಯ ತವರು ಮೋಡ.. ದನಿಯ ತವರು ಹಾಡು.. ಎಂಬ ಸಾಲುಗಳೂ, ಪದಗಳೂ ಇವೆ. ಆದರೆ ಮ್ಯೂಸಿಕ್ ಮಾತ್ರ ಧಡ್ಡಂತ ಹೊಡೆಯೋ ಹಾಗಿದೆ.
ಕಪಿಲ್ ಕಾಪಿಲನ್, ನಾರಾಯಣ ಶರ್ಮ ಹಾಡಿದ್ದು, ಚರಣ್ ರಾಜ್ ಅವರ ಸಂಗೀತ ಬೇರೆಯದ್ದೇ ಲೆವೆಲ್ಲಿನಲ್ಲಿದೆ. ಅಭಿಷೇಕ್ ಅಂಬರೀಷ್ ಎದುರು ರಚಿತಾ ರಾಮ್ ನಾಯಕಿಯಾಗಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಚಿತ್ರಕ್ಕೆ ಕೆ.ಎಂ.ಸುಧೀರ್ ನಿರ್ಮಾಪಕ.