` ಕೌಸಲ್ಯ ಸುಪ್ರಜಾ ರಾಮಗೆ 50ನೇ ದಿನದ ಸಂಭ್ರಮ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೌಸಲ್ಯ ಸುಪ್ರಜಾ ರಾಮಗೆ 50ನೇ ದಿನದ ಸಂಭ್ರಮ
Kaushalya Supraja Rama Movie Image

50 ದಿನದ ಸಂಭ್ರಮಗಳೆಲ್ಲ ಈಗ ಮುಗಿದ ಅಧ್ಯಾಯ ಎನ್ನುತ್ತಿರುವ ಕಾಲದಲ್ಲೇ ಕೆಲವೊಂದು ಚಿತ್ರಗಳು ಹಾಫ್ ಸೆಂಚುರಿ, 100 ಡೇಸ್ ದಾಖಲೆ ಮಾಡಿ ಬಿಡುತ್ತವೆ. ಇದೀಗ ಅಂತಹ ಅಪರೂಪದ ಸಾಧನೆ ಮಾಡಿರುವುದು ಕೌಸಲ್ಯ ಸುಪ್ರಜಾ ರಾಮ.

ಕೌಸಲ್ಯ ಸುಪ್ರಜಾ ರಾಮ ಚಿತ್ರ ತೆರೆಕಂಡ ಬಳಿಕ ಬೇರೆ ಬೇರೆ ಸಿನಿಮಾಗಳು ಬಿಡುಗಡೆ ಆದವು. ಪರಭಾಷೆಯಲ್ಲಿ ಹಲವು ಸಿನಿಮಾಗಳು ಅಬ್ಬರಿಸಿದವು. ಅವುಗಳಿಗೆಲ್ಲ ಸರಿಯಾದ ಪೈಪೋಟಿ ನೀಡುವ ಮೂಲಕ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ 50ನೇ ದಿನದ ಸಂಭ್ರಮಕ್ಕೆ ಸಾಕ್ಷಿ ಆಗುತ್ತಿದೆ. ಭಾರತ ವರ್ಸಸ್ ಪಾಕಿಸ್ತಾನ್ ಕ್ರಿಕೆಟ್ ಪಂದ್ಯ ಇದ್ದಾಗಲೂ ಕೂಡ ಪ್ರೇಕ್ಷಕರು ಈ ಸಿನಿಮಾವನ್ನು ವೀಕ್ಷಿಸಿದ್ದಾರೆ. ಒಳ್ಳೆಯ ಕಂಟೆಂಟ್ ಇದ್ದರೆ ಪ್ರೇಕ್ಷಕರು ಖಂಡಿತವಾಗಿಯೂ ಸಿನಿಮಾವನ್ನು ಗೆಲ್ಲಿಸುತ್ತಾರೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುವಂತಹ ಕಥಾಹಂದರ ಈ ಸಿನಿಮಾದಲ್ಲಿದೆ. ತಾಯಿ ಸೆಂಟಿಮೆಂಟ್ ಚೆನ್ನಾಗಿದೆ. ಇದು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಸಿನಿಮಾದ ಮೂಲಕ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಜೋಡಿಗೆ ಮತ್ತೊಂದು ಗೆಲುವು ಸಿಕ್ಕಂತೆ ಆಗಿದೆ. ವಿಮರ್ಶಕರಿಂದ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಬೃಂದಾ ಆಚಾರ್ಯ ಅವರ ಜನಪ್ರಿಯತೆ ಹೆಚ್ಚಾಗಿದೆ.

ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಸಂಜೆ 4.15ಕ್ಕೆ ಪ್ರೇಕ್ಷಕರೊಂದಿಗೆ ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ಶಶಾಂಕ್ ಮುಂತಾದವರು ಸಿನಿಮಾ ನೋಡಲಿದ್ದಾರೆ. ಟಿಕೆಟ್ ಕೌಂಟರ್ನಲ್ಲಿ ಮಿಲನಾ ಮತ್ತು ಕೃಷ್ಣ ಅವರು ಟಿಕೆಟ್ ನೀಡಲಿದ್ದಾರೆ. ಅದರೊಂದಿಗೆ ಸಿಹಿ ಕೂಡ ಹಂಚಲಿದ್ದಾರೆ. ಈ ಸಂಭ್ರಮದಲ್ಲಿ ಭಾಗಿ ಆಗುವಂತೆ ಪ್ರೇಕ್ಷಕರಿಗೆ ಚಿತ್ರತಂಡದವರು ಸೋಶಿಯಲ್ ಮೀಡಿಯಾ ಮೂಲಕ ಆಹ್ವಾನ ನೀಡಿದ್ದಾರೆ.