` ಪಂಚಮವೇದ ವಿಶ್ವನಾಥ್`ರ ಹೊಸ ಸಿನಿಮಾ ಆಡೇ ನಮ್ ಗಾಡು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಪಂಚಮವೇದ ವಿಶ್ವನಾಥ್`ರ ಹೊಸ ಸಿನಿಮಾ ಆಡೇ ನಮ್ ಗಾಡು
ಪಂಚಮವೇದ ವಿಶ್ವನಾಥ್`ರ ಹೊಸ ಸಿನಿಮಾ ಆಡೇ ನಮ್ ಗಾಡು

ಪಂಚಮವೇದ, ಶ್ರೀಗಂಧ, ಅರಗಿಣಿ, ಅರುಣೋದಯ, ರಂಗೋಲಿ, ಅಂಡಮಾನ್, ಮುಂಜಾನೆಯ ಮಂಜು, ಮುಸುಕು.. ಹೀಗೆ ವಿಭಿನ್ನ ಚಿತ್ರಗಳನ್ನು ನಿರ್ದೇಶನ ಮಾಡುವುದರಲ್ಲಿಯೇ ಫೇಮಸ್ ಆಗಿರುವ ವಿಶ್ವನಾಥ್, ಇದೀಗ ಹೊಸದೊಂದು ಚಿತ್ರದೊಂದಿಗೆ ತೆರೆಗೆ ಬರುತ್ತಿದ್ದಾರೆ. ಆಡೇ ನಮ್ ಗಾಡು ಅನ್ನೋದು ಚಿತ್ರದ ಹೆಸರು.

ಚಿತ್ರದಲ್ಲಿ ಮೂಢನಂಬಿಕೆಗಳ ಕುರಿತ ಕಥೆ ಇದೆ. ಆಡೊಂದು ನಾಲ್ವರು ಹುಡುಗರ ಬದುಕಿನಲ್ಲಿ ಮಾಡುವ ಪವಾಡದ ಬಗ್ಗೆ ಕಥೆ ಹೇಳಲಾಗಿದೆ. ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಇದೆಯಂತೆ. ಕಾಮಿಡಿ ಟ್ರ್ಯಾಕ್ ಸುತ್ತಲೇ ತಿರುಗುವ ಚಿತ್ರವಿದು. ರಾಮಾ ರಾಮಾ ರೇ ಖ್ಯಾತಿಯ ನಟರಾಜ್, ಅಜಿತ್ ಬೊಪ್ಪನಹಳ್ಳಿ, ಮಂಜುನಾಥ್ ಹಾಗೂ ಅನೂಪ್ ಪ್ರಧಾನ ಪಾತ್ರಗಳಲ್ಲಿದ್ದಾರೆ. ನಟರಾಜ್ ಚಿತ್ರಕ್ಕೆ ಸಂಭಾಷಣೆಯನ್ನೂ ಬರೆದಿದ್ದಾರೆ. ಪಿಕೆಹೆಚ್ ದಾಸ್ ಛಾಯಾಗ್ರಹಣದ ಚಿತ್ರಕ್ಕೆ ಸ್ವಾಮಿನಾಥನ್ ಸಂಗೀತ ನೀಡಿದ್ದಾರೆ.

ಪಿ ಎಚ್ ವಿಶ್ವನಾಥ್ ಸಿನಿಮಾಗೆ ಕರೆ ಬಂದಾಗಲೇ ನನಗೆ ಖುಷಿಯಾಯಿತು. ಆರಂಭದಲ್ಲಿ ಅವರು ಬೇರೆ ಪಾತ್ರದಲ್ಲಿ ನಟಿಸಬೇಕು ಎಂದಿದ್ದರು. ನಂತರ ನನಗೆ ಮತ್ತೊಂದು ಪಾತ್ರ ನೀಡಿದರು. ಗೌರಿ ಗಣೇಶ ಸಿನಿಮಾದಲ್ಲಿ ಅನಂತನಾಗ್ ನಿರ್ವಹಿಸಿದ ರೀತಿಯ ಪಾತ್ರವದು. ನನಗೆ ಬಹಳ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ ನಟರಾಜ್.