ಹಳ್ಳಿಯ ಕಥೆ. ಆ ಹಳ್ಳಿಯಲ್ಲೊಬ್ಬ ಸಿಕ್ಸ್ತ್ ಸೆನ್ಸ್ ಸೀನ ಎಂಬ ಹೆಸರಿನ ಕ್ಯಾರೆಕ್ಟರ್. ಪಕ್ಕಾ ಹಳ್ಳಿಯ ಕಥೆ. ನೀವು ಹಳ್ಳಿಯನ್ನ ಎಷ್ಟು ಮಿಸ್ ಮಾಡಿಕೊಳ್ತೀರೋ.. ಅದಕ್ಕಿಂತ ಹೆಚ್ಚು ನಿಮ್ಮ ಹಳ್ಳಿ ನಿಮ್ಮನ್ನ ಮಿಸ್ ಮಾಡಿಕೊಳ್ಳುತ್ತೆ ಅನ್ನೋದನ್ನ ಟೀಸರಿನಲ್ಲಿ ತೋರಿಸಿದ್ದರು ಗ್ರಾಮಾಯಣ ಸಿನಿಮಾದವರು. 4 ವರ್ಷಗಳ ಹಿಂದೆ ಟೀಸರ್ ತೋರಿಸಿದ್ದ ನಿರ್ಮಾಪಕರು, ಸಿನಿಮಾ ಕಂಪ್ಲೀಟ್ ಮಾಡಲು ಆಗಲಿಲ್ಲ. ಈಗ ಆ ಸಿನಿಮಾಗೆ ಕೆ.ಪಿ.ಶ್ರೀಕಾಂತ್ ಮತ್ತು ಲಹರಿ ಮನೋಹರ್ ಅವರಂತಹ ದೊಡ್ಡ ನಿರ್ಮಾಪಕರೂ ಬಂದಿದ್ದಾರೆ. ಚಿತ್ರ ಟೇಕಾಫ್ ಆಗಿದೆ.
ಅದೇ ಗ್ರಾಮಾಯಣ ಚಿತ್ರಕ್ಕೆ ಅದ್ಧೂರಿ ಮಹೂರ್ತ ಸಮಾರಂಭ ನಡೆಸಿದ ಚಿತ್ರತಂಡ, ಮುಹೂರ್ತಕ್ಕೆ ಅರ್ಧಕ್ಕರ್ಧ ಚಿತ್ರರಂಗವನ್ನೇ ಆಹ್ವಾನಿಸಿತ್ತು. ರಾಘವೇಂದ್ರ ರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್, ದುನಿಯಾ ವಿಜಯ್, ಧ್ರುವ ಸರ್ಜಾ, ಉಪೇಂದ್ರ, ಧ್ರುವ ಸರ್ಜಾ, ರಾಜ್ ಬಿ.ಶೆಟ್ಟಿ, ಆರ್.ಚಂದ್ರು, ಪವನ್ ಒಡೆಯರ್, ಅರುಣ್ ಸಾಗರ್, ಸಿಂಪಲ್ ಸುನಿ.. ಹೀಗೆ ಬಹುತೇಕ ಇಂಡಸ್ಟ್ರಿಯೇ ಹಾಜರಿತ್ತು. ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಡಿಸಿಎಂ ಡಿಕೆ ಶಿವಕುಮಾರ್ ಬಂದಿರಲಿಲ್ಲ. ಚಿತ್ರ ಹೊಸದಾಗಿ ಶುರುವಾದ ಕಾರಣ ಹೊಸ ಪೋಸ್ಟರ್ ರಿಲೀಸ್ ಆಗಿದೆ.