ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್. ಇದೀಗ ಹೊಂಬಾಳೆ ಫಿಲಂಸ್ ಮಾಲಿವುಡ್ಗೆ ಕಾಲಿಟ್ಟಿದೆ. ‘ಧೂಮಂ’ ಚಿತ್ರದ ಮೂಲಕ ಹೊಂಬಾಳೆ ಫಿಲಂಸ್ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದೆ. ಫಹಾದ್ ಫಾಸಿಲ್ ಮತ್ತು ಅಪರ್ಣ ಬಾಲಮುರಳಿ ಒಟ್ಟಿಗೇ ನಟಿಸಿರುವ ಚಿತ್ರವಿದು. ಲೂಸಿಯಾ ಪವನ್ ಕುಮಾರ್ ಡೈರೆಕ್ಟರ್. ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.
ದೊಡ್ಡ ಶ್ರೀಮಂತನಾಗುವ ಕನಸು ಕಾಣುವ ಯುವಕ, ಆತನಿಗೊಬ್ಬಳು ಪ್ರೇಯಸಿ. ಶ್ರೀಮಂತನಾಗುವ ಆಸೆ ಪಟ್ಟು ಹೋಗುವವರು ಸಡನ್ ಟ್ರ್ಯಾಪ್`ಗೆ ಸಿಕ್ಕು ಬೀಳ್ತಾರೆ. ಧೂಮಪಾನದ ಬಗ್ಗೆ ಎಚ್ಚರಿಕೆ ನೀಡುವ ಜಾಹೀರಾತನ್ನೂ ಜನ ಇಷ್ಟ ಪಡುವಂತೆ ಮಾಡುವಷ್ಟು ಕ್ರಿಯೇಟಿವಿಟಿ ಇರುವ ಫಹಾದ್, ಶ್ರೀಮಂತನಾಗಲು ಹೋಗಿ ಬೀಳೋ ಟ್ರ್ಯಾಪ್ ಎಂಥದ್ದು..? ಅದರಿಂದ ಆತ ಹೇಗೆ ಹೊರಬರುತ್ತಾನೆ.. ಸಸ್ಪೆನ್ಸ್.. ಥ್ರಿಲ್ ಕೊಡುವ ಅಂಶಗಳೂ ಢಾಳಾಗಿವೆ.
ಫಹಾದ್, ಅಪರ್ಣ ಬಾಲಮುರಳಿ ಜೊತೆ ಅಚ್ಯುತ್ ಕುಮಾರ್, ರೋಷನ್ ಮ್ಯಾಥ್ಯೂ, ವಿನೀತ್ ರಾಧಾಕೃಷ್ಣನ್, ಅನು ಮೋಹನ್ ಮೊದಲಾದವರು ನಟಿಸಿದ್ದಾರೆ. ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ.