ಓ ಮಲ್ಲಿಗೆ ಎಂಬ ವಿಭಿನ್ನ ಪ್ರೇಮಕಾವ್ಯ, ಇಂದ್ರಧನುಷ್ ಎಂಬ ವಿಚಿತ್ರ ಸೈಂಟಿಫಿಕ್ ಸಸ್ಪೆನ್ಸ್ ಥ್ರಿಲ್ಲರ್ ಕೊಟ್ಟಿದ್ದ ವಿ.ಮನೋಹರ್, ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಬರುತ್ತಿದ್ದಾರೆ. ದರ್ಬಾರ್ ಮಾಡೋಕೆ. 23 ವರ್ಷಗಳ ನಂತರ ಎನ್ನುವುದೇ ವಿಶೇಷ. ದರ್ಬಾರ್ ಚಿತ್ರದ ಹೀರೋ ಸತೀಶ್. ಚಿತ್ರದ ಹೀರೋ ಅಷ್ಟೇ ಅಲ್ಲ, ಚಿತ್ರದ ಚಿತ್ರಕಥೆ ಹಾಗೂ ಸಂಭಾಷಣೆಯೂ ಅವರದ್ದೇ. ಚಿತ್ರಕ್ಕೆ ಜಾನ್ವಿ ಚಿತ್ರದ ನಾಯಕಿ. ಸಾಧುಕೋಕಿಲ, ಅಶೋಕ್, ತ್ರಿವೇಣಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಚಿತ್ರದಲ್ಲಿದ್ದಾರೆ.
ಚಿತ್ರದಲ್ಲೊಂದು ಕ್ಯೂಟ್ ಲವ್ ಸ್ಟೋರಿ ಇದೆ. ಪಾಲಿಟಿಕ್ಸ್ ಇದೆ. ಆಕ್ಷನ್ ಇದೆ. ರೆಗ್ಯುಲರ್ ಜಾನರ್`ಗಿಂತ ವಿಭಿನ್ನವಾಗಿ ಕಾಣುವ ಕಥೆಯ ದರ್ಬಾರ್ ಜೂನ್ 9ಕ್ಕೆ ರಿಲೀಸ್ ಆಗುತ್ತಿದೆ. ಬಿ.ಎನ್.ಶಿಲ್ಪಾ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಮನೋಹರ್ ಅವರು ನಿರ್ದೇಶಕರಷ್ಟೇ ಅಲ್ಲ, ಸಂಗೀತ ನಿರ್ದೇಶಕರೂ ಹೌದು.