ಇತ್ತೀಚೆಗೆ ಸಿನಿಮಾಗಳ 50 ದಿನ, 100 ದಿನ ಎನ್ನುವುದೆಲ್ಲ ಕಾಲ್ಪನಿಕ ಸುದ್ದಿಗಳಂತಾಗಿ ಹೋಗಿವೆ. ಹಿಂದಿನಂತೆ ಈಗ 50 ದಿನ, 100 ದಿನ ಎಷ್ಟು ಸೆಂಟರುಗಳಲ್ಲಿ ಎನ್ನುವುದು ಮುಖ್ಯವಲ್ಲ. ಈಗ ಇರುವ ಮಲ್ಟಿಪ್ಲೆಕ್ಸ್ ಶೋಗಳ ಯುಗದಲ್ಲಿ 50 ದಿನ ಪೂರೈಸುವುದು ಸುಲಭದ ಮಾತೂ ಅಲ್ಲ. ಆ ಹಾದಿಯಲ್ಲಿ ಗೆದ್ದಿರುವ ಚಿತ್ರ ಶಿವಾಜಿ ಸುರತ್ಕಲ್.
ರಮೇಶ್ ಅರವಿಂದ್, ಮೇಘನಾ ಗಾಂವ್ಕರ್, ರಾಧಿಕಾ ನಾರಾಯಣ್, ನಾಸರ್, ರಮೇಶ್ ಭಟ್, ಬೇಬಿ ಆರಾಧ್ಯ ಸೇರಿದಂತೆ ಹಲವರು ನಟಿಸಿದ್ದ ಚಿತ್ರಕ್ಕೆ ಆಕಾಶ್ ಶ್ರೀವತ್ಸ ನಿರ್ದೇಶಕ.
ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿರುವ ಶಿವಾಜಿ ಸುರತ್ಕಲ್ ಚಿತ್ರದ 50 ದಿನದ ಸಂಭ್ರಮವನ್ನು ನಿರ್ಮಾಪಕರು ವಿಶೇಷ ಪೋಸ್ಟರ್ ರಿಲೀಸ್ ಮಾಡಿ ಸಂಭ್ರಮಿಸಿದ್ದಾರೆ.
ಕನ್ನಡ ಚಿತ್ರವೊಂದು ಐವತ್ತು ದಿನಗಳನ್ನು ಪೂರೈಸಿರುವುದು ಖುಷಿಯ ಸಂಗತಿ. ಈ ಸಂದರ್ಭದಲ್ಲಿ ನಾನು ಅಭಿಮಾನಿಗಳಿಗೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಅಭಿನಂದನೆ ತಿಳಿಸುತ್ತೇನೆ ಎಂದಿದ್ದಾರೆ ರಮೇಶ್ ಅರವಿಂದ್.