ರೆಬೆಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಅಂಬಿ ಪುತ್ರನ ಮದುವೆಗೆ ಕೌಂಟ್ಡೌನ್ ಶುರುವಾಗಿದ್ದು ಈಗಾಗಲೇ ಶಾಸ್ತ್ರಗಳು ನಡೆಯುತ್ತಿವೆ. ಅಭಿಷೇಕ್ ಅರಿಶಿಣ ಶಾಸ್ತ್ರ ಜೋರಾಗಿದೆ. ಅಂಬಿ ಮನೆಗೆ ಹಾಗೂ ಅರಿಶಿಣ ಶಾಸ್ತ್ರಕ್ಕೆ ಹಸಿರು ಹಾಗೂ ಹಳದಿ ಹೂವಿನ ಅಲಂಕಾರ ಮಾಡಲಾಗಿದೆ.
ಜೂನ್ 5ರಂದು ಅಭಿ-ಅವಿವಾ ಮದುವೆಯಾಗಲಿದ್ದಾರೆ. ಅರಿಶಿಣ ಶಾಸ್ತ್ರ ಅದ್ಧೂರಿಯಾಗಿ ನಡೆಯುತ್ತಿದೆ. ಜೂನ್ 5, 9.30 ರಿಂದ 10.30ರ ಸಮಯದಲ್ಲಿ ಕರ್ಕಾಟಕ ಲಗ್ನದಲ್ಲಿಮದುವೆ ಸಮಾರಂಭ ನಡೆಯಲಿದೆ. ಜೂನ್ 7ರಂದು ಭರ್ಜರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ. ಮಂಡ್ಯದಲ್ಲೂ ಅದ್ದೂರಿ ಬಾಡೂಟ ವ್ಯವಸ್ಥೆ ಹಾಗೂ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಅಭಿಷೇಕ್ ಮದುವೆ ಸಂಭ್ರಮಕ್ಕೆ ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರದ ಗಣ್ಯರು ಆಗಮಿಸಲಾಗಿದ್ದಾರೆ. ಈಗಾಗಲೇ ಸುಮಲತಾ ಮತ್ತು ಅಭಿಷೇಕ್ ಅನೇಕ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ್ದಾರೆ. ಮದುವೆಗೆ ಆಪ್ತ ಬಳಗದವರಿಗಷ್ಟೇ ಆಹ್ವಾನ ನೀಡಲಾಗಿದೆ.