ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಲಿಸ್ಟಿನಲ್ಲಿ ಯಾರು ನಂ.1 ಎಂದರೆ ಕಟ್ಟಾ ಅಭಿಮಾನಿಗಳೂ ರಜನಿಕಾಂತ್ ಅವರಾ.. ಕಮಲ್ ಹಾಸನ್ ಅವರಾ ಎಂದು ಕನ್`ಫ್ಯೂಸ್ ಆಗ್ತಾರೆ. ವಿಶೇಷವೆಂದರೆ ಈ ಇಬ್ಬರೂ ಗೆಳೆಯರು. ಜೀವಕ್ಕೆ ಜೀವ ಕೊಡುವ ಗೆಳೆಯರು. ಒಂದು ಕಾಲದಲ್ಲಿ ರಜನಿಕಾಂತ್ ಅವರಿಗೆ ಅವಕಾಶ ಇಲ್ಲದಿದ್ದಾಗ ಸಹಾಯ ಮಾಡಿದ್ದವರು ಕಮಲ್ ಹಾಸನ್. ಕಮಲ್ ಹಾಸನ್ ರಾಜಕೀಯ ವಿರೋಧಿಗಳ ಆಟಕ್ಕೆ ಗುರಿಯಾಗುತ್ತಿದ್ದಾಗ ರಜನಿಕಾಂತ್ ಅವರ ಒಂದು ಹೇಳಿಕೆ, ವಿರೋಧಿಗಳು ಬಾಲಮುದುರಿಕೊಳ್ಳೋ ಹಾಗೆ ಮಾಡಿತ್ತು. ವೇದಿಕೆಗಳಲ್ಲಿ ರಜನಿಯನ್ನು ಕಮಲ್, ಕಮಲ್ ಅವರನ್ನು ರಜನಿ ಹೊಗಳೋದು ಕಾಮನ್. ಆದರೆ.. ಇವರಿಬ್ಬರೂ ಒಟ್ಟಿಗೇ ನಟಿಸುವ ಆಸೆ ಹಾಗೆಯೇ ಉಳಿದುಕೊಂಡಿದೆ.
ಒಂದು ಕಾಲದಲ್ಲಿ ಇಬ್ಬರೂ ಒಟ್ಟಿಗೇ ನಟಿಸುತ್ತಿದ್ದವರು ಎನ್ನುವುದನ್ನೂ ಮರೆಯುವಂತಿಲ್ಲ. ಇದೀಗ ರಜನಿ-ಕಮಲ್ ಇಬ್ಬರೂ ಮತ್ತೊಮ್ಮೆ ಒಟ್ಟಿಗೇ ನಟಿಸುವ ಕಾಲ ಕೂಡಿ ಬಂದಂತೆ ಕಾಣ್ತಿದೆ. ಆದರೆ.. ಒಂದು ಸಣ್ಣ ಟ್ವಿಸ್ಟ್ ಇದೆ. ರಜನಿ ನಟಿಸ್ತಾರೆ. ಕಮಲ್ ನಟಿಸಲ್ಲ. ಹೀಗೇಕೆ ಎನ್ನಬೇಡಿ. ಇರೋದೇ ಹಾಗೆ.
ಈ ಬಗ್ಗೆ ಕಮಲ್ ಹಾಸನ್ ಅವರೇ ರಜನಿಯ ಒಂದು ಸಿನಿಮಾ ನಿರ್ಮಾಣ ಮಾಡಬೇಕಿದೆ. ಮಾತುಕತೆ ನಡೆಯುತ್ತಿದೆ. ಶೀಘ್ರದಲ್ಲೇ ಸಿಹಿ ಸುದ್ದಿ ಕೊಡುತ್ತೇನೆ ಎಂದಿದ್ದಾರೆ. ಡೈರೆಕ್ಟರ್ ಯಾರು? ಕಥೆ ಎಂಥದ್ದು ಎಲ್ಲವನ್ನ ಸೈಡಿಗಿಡಿ, ಪಕ್ಕಾ ಎಂದು ಹೇಳಿಬಿಡಿ ಸಾಕು ಎನ್ನುತಿದ್ದಾರೆ ಫ್ಯಾನ್ಸ್.
ಸದ್ಯಕ್ಕೆ ರಜನಿಕಾಂತ್ ಜೈಲರ್ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಆ ಜೈಲರ್ ಚಿತ್ರದಲ್ಲಿ ಶಿವಣ್ಣ ಕೂಡಾ ಇದ್ದಾರೆ ಅನ್ನೋದು ಸ್ಪೆಷಲ್. ಈ ನಡುವೆಯೇ ಈ ಸಿನಿಮಾ ಸೆನ್ಸೇಷನ್ ಸೃಷ್ಟಿಯಾಗಿದೆ.