ಟಗರು ಚಿತ್ರದ ಮೂಲಕವೇ ಫೇಮಸ್ ಆದ ಡಾಲಿ ಧನಂಜಯ ನಿರ್ಮಾಣದ ಚಿತ್ರ ಟಗರು ಪಲ್ಯ. ಹಾಗಂತ ಅವರು ಇಲ್ಲಿ ನಟಿಸುತ್ತಿಲ್ಲ. ಕೇವಲ ನಿರ್ಮಾಪಕ. ಹೊಸಬರಿಗೆ ಅವಕಾಶ ಕೊಟ್ಟು, ಇನ್ನೊಂದು ಪ್ರಯೋಗ ಮಾಡುತ್ತಿದ್ದಾರೆ ಡಾಲಿ ಧನಂಜಯ. ‘ಟಗರು ಪಲ್ಯ’ ಚಿತ್ರಕ್ಕೆ ಉಮೇಶ್ ಕೆ ಕೃಪ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಮೂಲಕ ಅನೇಕ ಹೊಸಬರಿಗೆ ಅವಕಾಶ ಸಿಕ್ಕಿದೆ. ಈ ಸಿನಿಮಾ ಮೂಲಕ ನಟಿಯಾಗಿ ನೆನಪಿರಲಿ ಪ್ರೇಮ್ ಮಗಳು ಅಮೃತಾ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಪೋಸ್ಟರ್ಗಳು ಈಗಾಗಲೇ ರಿಲೀಸ್ ಆಗಿ ಗಮನ ಸೆಳೆದಿವೆ. ಈಗ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದ್ದು, ಕುಂಭಳಕಾಯಿ ಒಡೆಯಲಾಗಿದೆ.
ಈ ಚಿತ್ರಕ್ಕೆ ಡಾಲಿ ಧನಂಜಯ್ ಅವರ ಗೆಳೆಯ ನಾಗಭೂಷಣ್ ಹೀರೋ. ಜೊತೆಗೆ ರಂಗಾಯಣ ರಘು, ತಾರ, ಬಿರಾದಾರ್ ಮೊದಲಾದವರು ನಟಿಸಿದ್ದಾರೆ.
ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದು, ಎಸ್. ಕೆ. ರಾವ್ ಛಾಯಾಗ್ರಹಣ ಚಿತ್ರಕ್ಕಿದೆ.