` ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿ ಬಳಿಕ ಈಗ ಗೋದ್ರಾ ಕಥೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕಾಶ್ಮೀರ್ ಫೈಲ್ಸ್, ಕೇರಳ ಸ್ಟೋರಿ ಬಳಿಕ ಈಗ ಗೋದ್ರಾ ಕಥೆ..!
Godhra Movie Image

2002. ಫೆಬ್ರವರಿ 27. ಫೈಜಾಬಾದ್`ನಿಂದ ಅಹಮದಾಬಾದ್`ಗೆ ತೆರಳುತ್ತಿದ್ದ ರೈಲಿನಲ್ಲಿ 59 ಹಿಂದೂಗಳನ್ನು ಜೀವಂತವಾಗಿ ಸುಟ್ಟು ಹಾಕಲಾಗಿತ್ತು. ರೈಲಿನ ಬೋಗಿಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ, ಬೋಗಿಯ ಒಳಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದರು. ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿಗನಳಲ್ಲಿ ಈ ಹತ್ಯಾಕಾಂಡ ನಡೆದು ಹೋಗಿತ್ತು. ತನಿಖೆಗಳಲ್ಲಿ ಆ ಘಟನೆ ಮುಸ್ಲಿಮರು ನಡೆಸಿದ ಯೋಜಿತ ದಾಳಿ ಎನ್ನುವುದು ಸಾಬೀತಾಯಿತು. ಈಗ ಅದೇ ಕಥೆಯನ್ನಾಧರಿಸಿದ ಸಿನಿಮಾ ಬರುತ್ತಿದೆ.

ಸಿನಿಮಾದಲ್ಲೇನಿದೆ?

ಈ ಕುರಿತು ಎರಡು ಆಯೋಗಗಳ ವರದಿಗಳಿವೆ. ನಾನಾವತಿ ಆಯೋಗದ ಪ್ರಕಾರ ಗೋದ್ರಾ ಹತ್ಯಾಕಾಂಡ ಯೋಜಿತ ಕೃತ್ಯ. ಕೇಂದ್ರ ಸರ್ಕಾರದ ಬ್ಯಾನರ್ಜಿ ಆಯೋಗದ ಪ್ರಕಾರ, ಅದೊಂದು ಆಕಸ್ಮಿಕ. ಕೊನೆಗೆ ಈ ಕುರಿತು ಸುಪ್ರೀಂಕೋರ್ಟ್ ತನಿಖೆ ನಡೆದು 31 ಅಪರಾಧಿಗಳಿಗೆ ಶಿಕ್ಷೆಯನ್ನೂ ನೀಡಿತು. ಸುಮಾರು 2 ಸಾವಿರಕ್ಕೂ ಹೆಚ್ಚು ಜನ ಯೋಜನೆ ಪ್ರಕಾರವೇ ನುಗ್ಗಿ ರೈಲಿಗೆ ಬೆಂಕಿ ಹಚ್ಚಿದ್ದರು. ಸುಪ್ರೀಂಕೋರ್ಟ್ ಅಪರಾಧಿಗಳನ್ನು ಘೋಷಿಸಿದ್ದು 2011ರಲ್ಲಿ. ಕೊನೆಗೆ ಶಿಕ್ಷೆ ಘೋಷಣೆಯಾಗಿದ್ದು 2017ರಲ್ಲಿ.

ಈ ಘಟನೆಯ ಕುರಿತು ಇಂದಿಗೂ ಆಗಾಗ್ಗೆ ವಿವಾದ ಭುಗಿಲೇಳುತ್ತಲೇ ಇರುತ್ತದೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದು ಎಂದು ಒಂದು ವರ್ಗ ಹೇಳಿದರೆ, ಇದು ಆಕಸ್ಮಿಕ ಎನ್ನುವುದು ಇನ್ನೊಂದು ವರ್ಗದ ವಾದ. ಇದೀಗ ಈ ಸಂಪೂರ್ಣ ಚಿತ್ರಣವನ್ನು ತೆರೆ ಮೇಲೆ ತರಲು ಸಿದ್ಧರಾಗಿದ್ದಾರೆ ನಿರ್ದೇಶಕ ಶಿವಾಕ್ಷಿ. ನಿರ್ಮಾಪಕರು   ಬಿಜೆ ಪುರೋಹಿತ್ ಗೋಧ್ರಾದಲ್ಲಿ ನಡೆದ ಈ ಘಟನೆ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎನ್ನುವುದನ್ನು ಈ ಚಿತ್ರದಲ್ಲಿ ಸೆರೆ ಹಿಡಿಯಲಾಗಿದೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ಗೋಧ್ರಾ ದುರಂತದ ಚಿತ್ರಣವನ್ನು ನೋಡಬಹುದಾಗಿದೆ.

 ಇದು ಸತ್ಯ ಘಟನೆಗಳನ್ನು ಆಧರಿಸಿದೆ ಎಂದು ಟೀಸರ್ನಲ್ಲಿ ತಿಳಿಸಲಾಗಿದೆ.  ಸಬರಮತಿ ಎಕ್ಸ್ಪ್ರೆಸ್ ಮೇಲಿನ ದಾಳಿಯನ್ನು 'ಘೋರ' ಎಂದು ಇದರಲ್ಲಿ ತೋರಿಸಲಾಗಿದೆ.  ಕೋಮುಗಲಭೆಗಳಿಗೂ ಕಾರಣವಾದ ಈ ದಾಳಿಯ ಹಿಂದಿನ ಕಾರಣವೇನು ಎಂಬುದನ್ನು  ಚಿತ್ರದಲ್ಲಿ  ಬಹಿರಂಗಪಡಿಸಲು ಪ್ರಯತ್ನಿಸಲಾಗಿದೆ ಎಂದು ತಿಳಿಸಲಾಗಿದೆ.  ಟೀಸರ್ನಲ್ಲಿರುವ ದೃಶ್ಯಗಳು ನಾನಾವತಿ ಆಯೋಗದ ವರದಿಯನ್ನು ಆಧರಿಸಿದೆ ಎಂದು ವಿವರಣೆ ನೀಡಲಾಗಿದೆ.   ಚಿತ್ರದ ಬಿಡುಗಡೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.