ಸಿಂಪಲ್ ಸುನಿ ಆಯ್ಕೆಗಳೇ ಹಾಗಿರುತ್ತವಾ.. ಸುನಿ ಚಿತ್ರಗಳ ಮೂಲಕ ಇಂಡಸ್ಟ್ರಿಗೆ ಬಂದವರೆಲ್ಲ, ಗುರುತಿಸಿಕೊಂಡವರೆಲ್ಲ ಬೇರೆಯದೇ ಹಂತಕ್ಕೆ ಏರಿದ್ದಾರೆ. ಏರುತ್ತಿದ್ದಾರೆ. ಈಗ ಮತ್ತೊಬ್ಬ ಚೆಲುವೆಯ ಸರದಿ. ಹೆಸರು ಮೋಕ್ಷಾ ಕುಶಾಲ್. ಸುನಿ ನಿರ್ದೇಶನದ ಮೋಡ ಕವಿದ ವಾತಾವರಣ ಚಿತ್ರದ ಹೀರೋಯಿನ್ ಆಗಿದ್ದವರು. ಈಗ ಧನಂಜಯ್ ಜೊತೆ ಹೊಸ ಚಿತ್ರಕ್ಕೆ ಹೀರೋಯಿನ್.
ಪರಮೇಶ್ವರ್ ಗುಂಡ್ಕಲ್. ಈ ಹಿಂದೆ ಕಲರ್ಸ್ ಕನ್ನಡದಲ್ಲಿದ್ದವರು. ಈಗ ಜಿಯೋ ಸಿನಿಮಾಸ್`ಗಾಗಿ ಸಿನಿಮಾ ನಿರ್ದೇಶಕರಾಗುತ್ತಿದ್ದಾರೆ. ಆ ಚಿತ್ರಕ್ಕೂ ಮೋಕ್ಷಾ ನಾಯಕಿ. ಧನಂಜಯ್ ಹೀರೋ.
ಈ ಪಾತ್ರಕ್ಕಾಗಿ ಆಕಾಂಕ್ಷಿಗಳಾಗಿದ್ದ 200 ಕ್ಕೂ ಹೆಚ್ಚು ನಟಿಯರ ಪೈಕಿ ನಾನು ಮಾತ್ರ ಆಯ್ಕೆಯಾಗಿತ್ತು ಎಂದು ತಿಳಿದಾಗ ಹೆಚ್ಚು ಸಂತೋಷವಾಯಿತು. ಒಬ್ಬರ ಸಿನಿ ಪಯಣದಲ್ಲಿ ಅದೃಷ್ಟವೂ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಇದರಿಂದ ನನಗೆ ಅರಿವಾಯಿತು. ನಾನು ಅದೃಷ್ಟಶಾಲಿ ಅಂದುಕೊಂಡಿದ್ದೇನೆ ಎಂದಿರುವ ಮೋಕ್ಷಾ, ಈ ಚಿತ್ರ ನನ್ನ ವೃತ್ತಿ ಜೀವನಕ್ಕೆ ತಿರುವು ನೀಡಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಎಂಜಿನಿಯಿರಿಂಗ್ ಓದಿರುವ ಮೋಕ್ಷಾ, ಪ್ರಸಾದ್ ಬಿದ್ದಪ್ಪ ಅವರ ಜೊತೆ ಕೆಲಸ ಮಾಡಿದ್ದವರು. ಮಾಡೆಲ್ ಆಗಿದ್ದವರು. ಈಗ ಮತ್ತೊಂದು ಚಿತ್ರಕ್ಕೆ, ಅದೂ ಸ್ಟಾರ್ ನಟನ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಮೊದಲ ಚಿತ್ರಕ್ಕೆ ಸ್ಟಾರ್ ಡೈರೆಕ್ಟರ್ ಇದ್ದರೆ, ಎರಡನೇ ಚಿತ್ರಕ್ಕೆ ಹೀರೋ ಸ್ಟಾರ್ ಆಗಿರುವುದು ವಿಶೇಷ.