` ಅಂಬಿ ಹುಟ್ಟಿದಹಬ್ಬಕ್ಕೆ ಮಗ-ಸೊಸೆ ಕೊಟ್ಟ ಒಲವಿನ ಉಡುಗೊರೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಅಂಬಿ ಹುಟ್ಟಿದಹಬ್ಬಕ್ಕೆ ಮಗ-ಸೊಸೆ ಕೊಟ್ಟ ಒಲವಿನ ಉಡುಗೊರೆ
ಅಂಬಿ ಹುಟ್ಟಿದಹಬ್ಬಕ್ಕೆ ಮಗ-ಸೊಸೆ ಕೊಟ್ಟ ಒಲವಿನ ಉಡುಗೊರೆ

ಒಲಿವಿನ ಉಡುಗೊರೆ ಕೊಡಲೇನು.. ರಕುತದಿ ಬರೆದೆನು ಇದ ನಾನು..

ಚಳಿ ಚಳಿ ತಾಳೆನು ಈ ಚಳಿಯಾ..ಅಹ್ಹಾ..

ಹೇ ಜಲೀಲ.. ಕನ್ವರ್`ಲಾಲ..

ಈ ಹಾಡುಗಳಿಗೆ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ಹೆಜ್ಜೆ ಹಾಕಿ ಕುಣಿದರೆ ಹೇಗಿರುತ್ತೆ.. ಅಂಬಿಹ ಹುಟ್ಟುಹಬ್ಬಕ್ಕೆ ಅಂಥಾದ್ದೊಂದು ವಿಶೇಷ ಹುಟ್ಟು ಹಬ್ಬ ಆಚರಿಸಿದ್ದಾರೆ ಅಭಿ ಮತ್ತು ಅವಿವಾ.

ಮಂಡ್ಯದ ಗಂಡು ಮುತ್ತಿನ ಚೆಂಡು ಹಾಡಿಗೂ ಹೆಜ್ಜೆ ಹಾಕಿದ್ಧಾರೆ. ಮಂಡ್ಯದ ಗಂಡು ಹಾಡಿನಲ್ಲಿ ಅಂಬಿ ಸೈಕಲ್ಲಿನಲ್ಲಿ ಬಂದರೆ, ಇಲ್ಲಿ ಸ್ಪೆಷಲ್, ಬುಲೆಟ್ಟಿನಲ್ಲಿ ಬರ್ತಾರೆ.  ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ

ಹೇ ಜಲೀಲಾ.. ಗೀತೆಗೂ ಅಭಿಷೇಕ್ ಹೆಜ್ಜೆ ಹಾಕಿದ್ದು, ಜತೆಗೆ ಒಂದಷ್ಟು ಮಂದಿ ಜೂನಿಯರ್ ಅಂಬರೀಶ್ ಅವರುಗಳು ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ಅಭಿಷೇಕ್ ಅಂಬರೀಶ್ ‘ಬ್ಯಾಡ್ ಮ್ಯಾನರ್ಸ್’ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅಂಬಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಒಂದು ಗೀತೆಯನ್ನು ರಿಲೀಸ್ ಮಾಡಲಾಗಿದೆ. ಇನ್ನು, ಈ ಸಿನಿಮಾದಲ್ಲಿ ಅಭಿಷೇಕ್ಗೆ ರಚಿತಾ ರಾಮ್ ಮತ್ತು ಪ್ರಿಯಾಂಕಾ ಕುಮಾರ್ ನಾಯಕಿಯರಾಗಿ ನಟಿಸಿದ್ದಾರೆ. 'ದುನಿಯಾ' ಸೂರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಸುಧೀರ್ ಕೆ ಎಂ ಬಂಡವಾಳ ಹೂಡಿದ್ದು, ಚರಣ್ ರಾಜ್ ಸಂಗೀತ ನೀಡುತ್ತಿದ್ದಾರೆ.

ಇನ್ನು ಜೂನ್ 5ರಂದು ಅಭಿಷೇಕ್ ಮದುವೆ ನಡೆಯುತ್ತಿದೆ. ಜೂನ್ 5ರ ಸೋಮವಾರ ಬೆಳಗ್ಗೆ 9.30ರಿಂದ 10.30ರವರೆಗೆ ಕರ್ಕಾಟಕ ಲಗ್ನದಲ್ಲಿ ಮುಹೂರ್ತ ನಡೆಯಲಿದೆ.

 ಅಂಬರೀಷ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಮಾಧಿಗೆ ಭೇಟಿ ನೀಡಿದ ಸುಮಲತಾ, ಲಗ್ನಪತ್ರಿಕೆಯನ್ನಿಟ್ಟು ಸಮಾಧಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಸಮಾಧಿ ಪೂಜೆಗೆ ಸುಮಲತಾ ಅವರ ಜೊತೆ ಅಭಿಷೇಕ್, ಅವಿವಾ, ರಾಕ್`ಲೈನ್ ವೆಂಕಟೇಶ್, ಕೆಪಿ ಶ್ರೀಕಾಂತ್ ಸೇರಿದಂತೆ ಹಲವರು ಆಗಮಿಸಿದ್ದರು. ಸಾವಿರಾರು ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಸಿದರು.