` ಮದುವೆಯಾಗಿದ್ದೇಕೆ : ಆಶಿಶ್ ವಿದ್ಯಾರ್ಥಿ ಹೇಳಿದರು ಕಾರಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮದುವೆಯಾಗಿದ್ದೇಕೆ : ಆಶಿಶ್ ವಿದ್ಯಾರ್ಥಿ ಹೇಳಿದರು ಕಾರಣ
Ashish Vidyarthi Image

ನನಗೆ ವಯಸ್ಸು 60 ಅಲ್ಲ. 57. ರೂಪಾಲಿಯ ವಯಸ್ಸು ಕೂಡಾ 55. ನನಗೆ ಒಂಟಿಯಾಗಿರಲು ಇಷ್ಟ ಇರಲಿಲ್ಲ. ಯಾರಾದರೂ ಜೊತೆಯಲ್ಲಿರಬೇಕು, ಸಂಗಾತಿ ಬೇಕು ಎನ್ನಿಸಿತ್ತು. ಆ ಸಮಯದಲ್ಲೇ ರೂಪಾಲಿ ಅವರು ಸಂಪರ್ಕಕ್ಕೆ ಬಂದರು. ಅವರ ಜೊತೆ ಮಾತನಾಡಿದಾಗ ಇಂಟ್ರೆಸ್ಟಿಂಗ್ ಅನ್ನಿಸಿತು. ಪತಿ-ಪತ್ನಿಯಾಗಿ ಜೊತೆಯಾಗಿರೋಣ ಎನ್ನಿಸಿತು. ಮದುವೆಯಾದೆವು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಆಶಿಶ್ ವಿದ್ಯಾರ್ಥಿ.

ಆಶಿಶ್ ವಿಧ್ಯಾರ್ಥಿಗೆ ಮೊದಲ ಪತ್ನಿಯಿಂದ ಈಗಾಗಲೇ ಒಬ್ಬ ಮಗನಿದ್ದಾನೆ. ಅದರ ಬಗ್ಗೆಯೂ ಬರೆದುಕೊಂಡಿರೋ ವಿದ್ಯಾರ್ಥಿ ನಾನು, ರಾಜೋಶಿ ಮದುವೆಯಾದೆವು. ನಮಗೆ ಅರ್ಥ್ ಎನ್ನುವ ಮಗನಿದ್ದಾನೆ. ಈಗ 22 ವರ್ಷ, ಕೆಲಸ ಮಾಡುತ್ತಿದ್ದಾನೆ. ನಮ್ಮಿಬ್ಬರ ಜೀವನ ತುಂಬ ಚೆನ್ನಾಗಿತ್ತು. ಆಮೇಲೆ ಭವಿಷ್ಯವನ್ನು ನೋಡಿದಾಗ ದಾರಿ ಬೇರೆ ಬೇರೆ ಅನಿಸಿತು. ಇಬ್ಬರಿಗೂ ಸಂತೋಷವಾಗಿರಬೇಕಿತ್ತು. ನಮ್ಮಿಬ್ಬರಿಗೂ ಜೊತೆಯಾಗಿ ಹೆಜ್ಜೆ ಹಾಕಲು ಸಾಧ್ಯವಿಲ್ಲ ಎನ್ನೋದು ಗೊತ್ತಾಗಿತ್ತು.  ಸಪರೇಟ್ ಆಗಿ ಹೆಜ್ಜೆ ಹಾಕೋಣ ಅಂತ ಅಂದುಕೊಂಡೆವು. ನಮ್ಮಿಬ್ಬರ ನಡುವಿನ ವ್ಯತ್ಯಾಸ ಒಂದು ಕಡೆ ಸರಿ ಹೋಗಬಹುದಿತ್ತು, ಆದರೆ ಇನ್ನೊಬ್ಬರ ಮೇಲೆ ಒತ್ತಡ ಹೇರಿದಂತಾಗುತ್ತಿತ್ತು ಹೀಗಾಗಿ ಬೇರೆಯಾದೆವು ಎಂದಿದ್ದಾರೆ ಆಶಿಶ್ ವಿದ್ಯಾರ್ಥಿ.

ಒಟ್ಟಿನಲ್ಲಿ ಇಬ್ಬರೂ ಹೊಸ ದಾಂಪತ್ಯ ಆರಂಭಿಸಿದ್ದಾರೆ. ಮುಂದೆ ಸಾಗುತ್ತಾ ಇರೋಣ, ಇತರರು ಹೇಗೆ ತಮ್ಮ ಜೀವನ ನಡೆಸುತ್ತಿದ್ದಾರೊ ಆ ಬಗ್ಗೆ ಗೌರವ ನೀಡೋಣ, ಆದರೆ ಮೂಲ ಗುರಿಯೆಂದರೆ ಜವಾಬ್ದಾರಿಗಳನ್ನು ಪೂರೈಸುವುದು ಮತ್ತು ಸಂತೋಶವಾಗಿರುವುದು ಮಾತ್ರವೇ ಆಗಿರಲಿ. ಇಂದು ನನಗೆ ಆಗಿದ್ದು ನಾಳೆ ನಿಮಗೂ ಆಗಬಹುದು ಹಾಗಾಗಿ ಎಲ್ಲರ ಜೀವನವನ್ನೂ ಗೌರವಿಸಿ ಎಂದಿದ್ದಾರೆ ಆಶಿಷ್ ವಿದ್ಯಾರ್ಥಿ.

Also Read :-

ಆಶಿಶ್ ವಿದ್ಯಾರ್ಥಿ ಎರಡನೇ ಮದುವೆ