ಶಿವಣ್ಣ-ನರ್ತನ್ ಕಾಂಬಿನೇಷನ್ನಿನಲ್ಲಿ ಭೈರತಿ ರಣಗಲ್ ಸಿನಿಮಾ ಸೆಟ್ಟೇರಿದೆ. ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣವಾಗುತ್ತಿರೋ 2ನೇ ಸಿನಿಮಾ ಇದು. ಭೈರತಿ ರಣಗಲ್' ಸಿನಿಮಾಗೆ ಗವಿಪುರದ ಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿದೆ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಮಫ್ತಿ' ತೆರೆಕಂಡು 6 ವರ್ಷಗಳು ಆಗಿವೆ. ಭೈರತಿ ರಣಗಲ್ ಪಾತ್ರದಲ್ಲಿ ಇದ್ದಂತೆಯೇ ಈಗಲೂ ನಾನು ಹಾಗೇ ಇದ್ದೀನಿ. ಹಾಗಾಗಿ ಈ ಪಾತ್ರ ಮಾಡಲು ಅನುಕೂಲ ಆಗುತ್ತದೆ. ಇದು ಪ್ರಿಕ್ವೇಲ್ ಆಗಿರುವುದರಿಂದ ವಿಭಿನ್ನ ಲುಕ್ನಲ್ಲಿಯೂ ಕಾಣಿಸಿಕೊಳ್ಳುತ್ತೇನೆ ಎಂದಿದ್ದಾರೆ ಶಿವಣ್ಣ. ಅಂದಹಾಗೆ ಇದು ಭೈರತಿ ರಣಗಲ್ ಪ್ರೀಕ್ವೆಲ್ ಸ್ಟೋರಿ. ಮಫ್ತಿಯಲಿಲ ಮಧ್ಯವಯಸ್ಕನಾಗಿ ನಟಿಸಿದ್ದ ಶಿವಣ್ಣ, ಈಗ ಯಂಗ್ ಆಗಬೇಕು. ನಿರ್ದೇಶಕ ನರ್ತನ್ ಅವರಿಗೆ ಅದು ಕಷ್ಟವೇನಲ್ಲ.
ಮಫ್ತಿಯಲ್ಲಿ ಶ್ರೀಮುರಳಿ ಕೂಡಾ ಇದ್ದರು. ದೇವರಾಜ್ ಇದ್ದರು. ಮಲ್ಟಿ ಸ್ಟಾರ್ ಮೂವಿಯಾಗಿತ್ತು. ಅದೇ ರೀತಿ ಈ ಚಿತ್ರದಲ್ಲೂ ಇರಲಿದೆಯಾ ಎಂದರೆ ನರ್ತನ್ ಗುಟ್ಟು ಬಿಟ್ಟುಕೊಡಲ್ಲ. ಸ್ಪೆಷಲ ಎಲಿಮೆಂಟ್ ಇರಲಿದೆ ಎಂದು ಮಾತ್ರ ಹೇಳ್ತಾರೆ. ನಾಯಕಿ ಪಾತ್ರವೂ ಇರಲಿದೆ. ಯಾರು ಅನ್ನೋದು ಫೈನಲ್ ಆಗಿಲ್ಲ.
ಕಥೆಗೆ ಯಾರು ಹೊಂದಿಕೊಳ್ಳುತ್ತಾರೋ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಆ ಪಾತ್ರಕ್ಕೆ ಬಹಳ ಮಹತ್ವ ಇದೆ. ಆ ಪಾತ್ರಕ್ಕೆ ಬಹಳ ಭಾವನೆಗಳು ಇವೆ. ಅದು ರಣಗಲ್ ಪಾತ್ರಕ್ಕೆ ಚೆನ್ನಾಗಿ ಹೊಂದಿಕೆ ಆಗುತ್ತದೆ. ಆದಷ್ಟು ಬೇಗ ನಾಯಕಿ ಯಾರು ಅಂತ ಹೇಳ್ತೀವಿ ಎಂದಿದ್ದಾರೆ.
ಮಫ್ತಿ ತಂಡವೇ ಬಹುತೇಕ ಭೈರತಿ ರಣಗಲ್ ಸಿನಿಮಾಗೆ ಕೆಲಸ ಮಾಡಲಿದೆ. ಸಂಗೀತ ನಿರ್ದೇಶನವನ್ನು ರವಿ ಬಸ್ರೂರು ಅವರು ಮಾಡುತ್ತಿದ್ದು, ನವೀನ್ ಕುಮಾರ್ ಅವರ ಛಾಯಾಗ್ರಹಣ ಹಾಗೂ ಶಿವಕುಮಾರ್ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಇಂದು ಮುಹೂರ್ತ ನೆರವೇರಿದೆ ಎಂದು ನಿರ್ದೇಶಕ ನರ್ತನ್ ತಿಳಿಸಿದರು.