ಇತ್ತೀಚಿನ ದಶಕದಲ್ಲಿ ಇಡೀ ಭಾರತದ ಗಮನ ಸೆಳೆದ ಹೀರೋ ಎಂದರೆ ವಿಜಯ್ ಸೇತುಪತಿ ಹೆಸರನ್ನು ಪ್ರಮುಖವಾಗಿ ಹೇಳಬಹುದು. ಅವರ ಚಿತ್ರಗಳಲ್ಲಿ ಕಥೆ ಸಖತ್ತಾಗಿರುತ್ತದೆ ಎನ್ನುವ ನಂಬಿಕೆ ಪ್ರೇಕ್ಷಕರದ್ದು. ವಿಜಯ್ ಸೇತುಪತಿ ನಟಿಸಿದ ಚಿತ್ರಗಳನ್ನು ರೀಮೇಕ್ ಮಾಡುವವರು ಕೂಡಾ, ಅವರ ಪಾತ್ರ ಮಾಡುವಾಗ ಕೇರ್ ಫುಲ್ ಆಗಿರುತ್ತಾರೆ. ತಮಿಳಿನ ಈ ನಟ ಇದೀಗ ಸಿದ್ದರಾಮಯ್ಯ ಬಯೋಪಿಕ್`ನಲ್ಲಿ ಕೂಡಾ ನಟಿಸಲು ಒಪ್ಪಿದ್ದಾರಂತೆ.
ಕಮಲ್ ಹಾಸನ್ ಎದುರು ಕೂಡಾ ವಿಲನ್ ಆಗಿ ನಟಿಸಿ ಶಭಾಶ್ ಎನಿಸಿಕೊಂಡ ವಿಜಯ್ ಸೇತುಪತಿ ಜೊತೆ ಈಗ ಕನ್ನಡದ ನಟಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಬೀರ್ ಬಲ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ರುಕ್ಮಿಣಿ ವಸಂತ್, ರಕ್ಷಿತ್ ಶೆಟ್ಟಿ ಜೊತೆ ಸಪ್ತಸಾಗರದಾಚೆಯೆಲ್ಲೋ, ಶ್ರೀಮುರಳಿ ಜೊತೆ ಬಘೀರ ಹಾಗೂ ಗಣೇಶ್ ಜೊತೆ ಬಾನದಾರಿಯಲ್ಲಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ವಿಜಯ್ ಸೇತುಪತಿಯಂತಹ ಸ್ಟಾರ್ ಕಲಾವಿದನ ಎದುರು ನಟಿಸುತ್ತಿರೋದು ಥ್ರಿಲ್ ಕೊಟ್ಟಿದೆ ಎಂದಿದ್ದಾರೆ ರುಕ್ಮಿಣಿ ವಸಂತ್. ಈ ಚಿತ್ರದ ಊಲಕ ರುಕ್ಮಿಣಿ, ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.