ಕೇರಳ ಸ್ಟೋರಿ. ಈ ವರ್ಷದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು. ಹಲವು ಭಾಷೆಗಳಲ್ಲಿ ರಿಲೀಸ್ ಆಗಿರುವ ಚಿತ್ರಕ್ಕೆ ತಮಿಳುನಾಡು, ಕೇರಳ, ಪ.ಬಂಗಾಳದಲ್ಲಿ ಸೂಕ್ತ ಶೋಗಳು ಸಿಕ್ಕಿಲ್ಲ. ಹೀಗಿದ್ದರೂ 200 ಕೋಟಿ ದಾಟಿರುವ ಕೇರಳ ಸ್ಟೋರಿ, ಬಿಡಗಡೆಯಾದ 2 ವಾರಗಳಲ್ಲೇ ದಾಖಲೆ ಬರೆದಿದೆ. ಇದರ ನಡುವೆ ಕೇರಳ ಸ್ಟೋರಿಗೆ ಕರ್ನಾಟಕದಲ್ಲಿಯೂ ವಿಘ್ನ ಎದುರಾಗಿದೆ.
ಒಂದೆಡೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ವಿಶ್ವ ಹಿಂದೂ ಪರಿಷತ್, ಬಜರಂಗದಳ ಚಿತ್ರವನ್ನು ಉಚಿತವಾಗಿ ಪ್ರದರ್ಶನ ಮಾಡಲು ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ಮುಸ್ಲಿಂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ.
ಕೇರಳ ಸ್ಟೋರಿ ಚಿತ್ರ ಪ್ರದರ್ಶನದಿಂದ ಸೃಷ್ಟಿಯಾಗಬಲ್ಲ ಪ್ರತಿಭಟನೆ, ಹಿಂಸಾಚಾರ ತಪ್ಪಿಸಲು ಎಡಿಜಿಪಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿ ಎಲ್ಲಾ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಲಾಗಿದೆ. ಬೆಂಗಳೂರು ನಗರ,ಮೈಸೂರು,ಹುಬ್ಬಳಿ ಧಾರವಾಡ ,ಮಂಗಳೂರು,ಬೆಳಗಾವಿ ,ಕಲಬುರಗಿ ನಗರ ಸೇರಿದಂತೆ ಎಲ್ಲಾ ಜಿಲ್ಲಾ ಎಸ್ಪಿಗಳು ಮುನ್ನೆಚ್ಚರಿಕೆವಹಿಸುವಂತೆ ಸೂಚನೆ ನೀಡಲಾಗಿದೆ.
ಮಣಿಪಾಲ್ದ ಕೆನಾರಾ ಮಾಲ್ನಲ್ಲಿ ಸುರೇಶ್ ಮಂಡನ್ ನೇತೃತ್ವದಲ್ಲಿ ದಿ ಕೇರಳ ಸ್ಟೋರಿ ಚಿತ್ರಪ್ರದರ್ಶನ ಆಯೋಜಿಸಲಾಗಿದೆ. 18 ವರ್ಷ ಮೇಲ್ಪಟ್ಟ ಹಿಂದೂ ಯುವತಿಯರಿಗಾಗಿ ಈ ಚಿತ್ರ ಪ್ರದರ್ಶನ ಆಯೋಜನೆ ಮಾಡಲಾಗಿದೆ. ರ್ದೇಶಕ ಸುದೀಪ್ತೋ ಸೇನ್ ನಿರ್ದೇಶಿಸಿದ್ದ ಚಿತ್ರದಲ್ಲಿ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ನಿಷೇಧಿಸಿದ್ದ ಪಶ್ಚಿಮ ಬಂಗಾಳ ಸರ್ಕಾರದ ಆದೇಶಕ್ಕೆ ಇತ್ತೀಚೆಗೆ ಸುಪ್ರೀಂಕೋರ್ಚ್ ತಡೆ ನೀಡಿತ್ತು.
ಕೇರಳದಲ್ಲಿ ಸಾವಿರಾರು ಹಿಂದೂ ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಇಸ್ಲಾಂಗೆ ಮತಾಂತರ ಮಾಡಿ ಅವರನ್ನು ಸಿರಿಯಾ, ಅಷ್ಘಾನಿಸ್ತಾನದಂತಹ ಇಸ್ಲಾಂ ರಾಷ್ಟ್ರಗಳಿಗೆ ಕರೆದೊಯ್ಯಲಾಗಿದೆ. ಅಲ್ಲಿ ಅವರನ್ನು ಆತ್ಮಾಹುತಿ ಬಾಂಬ್ ದಾಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಕಥೆಹಂದರದಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಇದು ನೈಜ ಘಟನೆಗಳ ಆಧಾರಿತ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.
ಇದು ಕಪೋಲಕಲ್ಪಿತ ಕಥೆ ಎನ್ನುವವರಿಗೆ ಉತ್ತರವಾಗಿ ಚಿತ್ರತಂಡ ಐಸಿಸ್ ಸಂಘಟನೆಯಿಂದ ಬಚಾವ್ ಆಗಿ ಬಂದವರು ಹಾಗೂ ಮತಾಂತರದ ಜಾಲಕ್ಕೆ ಸಿಕ್ಕು ಬದುಕಿದವರನ್ನು ಪತ್ರಕರ್ತರ ಎದುರು ಕರೆದುಕೊಂಡು ಬಂದಿತ್ತು. ಒಟ್ಟಿನಲ್ಲಿ ಕೇರಳ ಸ್ಟೋರಿ ಸತ್ಯ ಘಟನೆ ಆಧರಿತ ಕಾಲ್ಪನಿಕ ಕಥಾಹಂದರದ ಚಿತ್ರ.