` ನಾವಿಬ್ಬರೂ ಮದುವೆಯಾಗಿಲ್ಲ. ಸಹಜೀವನದಲ್ಲಿದ್ದೇವೆ : ನರೇಶ್, ಪವಿತ್ರಾ ಲೋಕೇಶ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಾವಿಬ್ಬರೂ ಮದುವೆಯಾಗಿಲ್ಲ. ಸಹಜೀವನದಲ್ಲಿದ್ದೇವೆ : ನರೇಶ್, ಪವಿತ್ರಾ ಲೋಕೇಶ್
ನಾವಿಬ್ಬರೂ ಮದುವೆಯಾಗಿಲ್ಲ. ಸಹಜೀವನದಲ್ಲಿದ್ದೇವೆ : ನರೇಶ್, ಪವಿತ್ರಾ ಲೋಕೇಶ್

ಪವಿತ್ರಾ ಲೋಕೇಶ್ ಮತ್ತು ನರೇಶ್ ಇಬ್ಬರೂ ಮದುವೆಯಾಗಿದ್ದಾರಾ..? ಇಲ್ಲ. ಅವರಿಬ್ಬರೂ ಮದುವೆಯಾಗಿಲ್ಲ. ಸಹಜೀವನದಲ್ಲಿದ್ದಾರೆ. ಈ ಮಾತನ್ನು ಸ್ವತಃ ಅವರಿಬ್ಬರೇ ಒಪ್ಪಿಕೊಂಡಿದ್ದಾರೆ. ಪವಿತ್ರಾ ಲೋಕೇಶ್ ಮದುವೆಯಾಗಿಲ್ಲ. ಈ ಮೊದಲು ನಟ ಸುಚೇಂದ್ರ ಪ್ರಸಾದ್ ಅವರೊಂದಿಗೆ ಸಹಜೀವನದಲ್ಲಿದ್ದರು. ಮಕ್ಕಳಿದ್ದಾರೆ. ಕೆಲವು ವರ್ಷಗಳ ಹಿಂದೆ ಸುಚೇಂದ್ರ ಪ್ರಸಾದ್ ಅವರಿಂದ ದೂರವಾಗಿದ್ದರು. ನಂತರ ನರೇಶ್ ಅವರೊಂದಿಗೆ ಬದುಕು ಹಂಚಿಕೊಂಡಿದ್ದಾರೆ.

ನನ್ನ ವೈಯಕ್ತಿಕ ಜೀವನದ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ ನೀವಿಬ್ಬರು ಮದುವೆ ಆಗಿದ್ದೀರಾ ಅಂತ ಕೇಳಿದ್ದಾರೆ ನನ್ನ ಪ್ರಕಾರ ಮದುವೆ ಅನ್ನೋದು ಹೃದಯದಲ್ಲಿ ಇದ್ದರೆ ಸಾಕು ಅದನ್ನು ತೋರಿಸಿಕೊಳ್ಳಲು ತಾಳಿ ಉಂಗುರ ಬೇಕಿಲ್ಲ...ನಾನು ಪವಿತ್ರ ಲೋಕೇಶ್ ಲೀವಿಂಗ್ ರಿಲೇಷನ್ಶಿಪ್ನಲ್ಲಿದ್ದೀವಿ ಎಂದು ಹೇಳಿದ್ದಾರೆ ನರೇಶ್. ಸ್ವತಃ ಪವಿತ್ರಾ ಲೋಕೇಶ್ ಅವರ ಎದುರಲ್ಲೇ ಅವರ ಕೈಹಿಡಿದುಕೊಂಡೇ ಈ ಉತ್ತರ ಕೊಟ್ಟಿದ್ದಾರೆ ನರೇಶ್. ಇವರಿಬ್ಬರೂ ಒಟ್ಟಿಗ ನಟಿಸಿರುವ ಇವರದ್ದೇ ಜೀವನಕಥೆ ಮತ್ತೆ ಮದುವೆ ಚಿತ್ರ ಪ್ರೀ-ಈವೆಂಟ್`ನಲ್ಲಿ ಈ ಮಾತು ಹೇಳಿದ್ಧಾರೆ ಪವಿತ್ರಾ.

ನಾನು ಹಣದ ಹಿಂದೆ ಹೋದವಳಲ್ಲ. ನನಗೆ ಕನ್ನಡ ಚಿತ್ರರಂಗ ಎಲ್ಲವನ್ನೂ ಕೊಟ್ಟಿದೆ. ತೆಲುಗಿನವರು ಕೈತುಂಬಾ ಕೆಲಸ ಕೊಟ್ಟಿದ್ದಾರೆ. ಚೆನ್ನಾಗಿಯೇ ದುಡಿದಿದ್ದೇನೆ. ಹಣಕ್ಕಾಗಿ ತಪ್ಪು ಮಾಡುವ ಅಗತ್ಯ ನನಗಿಲ್ಲ. ನರೇಶ್ ಕೂಡಾ ಸಾಮಾನ್ಯ ಕುಟುಂಬದವರಲ್ಲ. ಸ್ಟಾರ್ ಫ್ಯಾಮಿಲಿಯವರು ಎಂದಿದ್ದಾರೆ ಪವಿತ್ರಾ ಲೋಕೇಶ್.

ನರೇಶ್ ಅವರ ವಾದವಂತೂ ಅಲ್ಲಿದ್ದವರಿಗೆಲ್ಲ ಬೇರೆಯದೇ ವಾದವನ್ನು ಪರಿಚಯಿಸಿದ್ದು ಹೌದು. 50% ದಂಪತಿಗಳು ಸಮಾಜಕ್ಕೆ ಹೆದರಿ ಬಲವಂತವಾಗಿ ಒಟ್ಟಿಗೆ ಜೀವನ ಸಾಗಿಸುತ್ತಿದ್ದಾರೆ. ಬಹಳ ಕಿರುಕುಳಗಳ ನಡುವೆಯೂ ಒಟ್ಟಿಗೆ ಜೀವಿಸುತ್ತಿದ್ದಾರೆ. ಕೆಲವರು ಧೈರ್ಯವಾಗಿ ಹೊರ ಬರುತ್ತಿದ್ದಾರೆ  ಕಾನೂನು ನಿಮ್ಮ ಜೀವನವನ್ನು ಸಾಗಿಸುವ ಹಕ್ಕು ನೀಡಿದೆ. ಸುಪ್ರೀಂ ಕೋರ್ಟ್ ಕೂಡ ಇದನ್ನು ಹೇಳಿದೆ. ಇರುವುದು ಒಂದೇ ಜೀವನ ಆ ಒಂದು ಜೀವನವನ್ನು ನೀವು ಖುಷಿಯಾಗಿ ಕಳೆಯಬೇಕು, ಸುತ್ತ ಇರುವವರಿಗೂ ಖುಷಿ ಹಂಚಬೇಕು. ನಮ್ಮನ್ನು ಮದುವೆಯಾಗಿದೆ ಅಂತ ಹೇಳಿದ್ರು ..ಆಗ ನಾನು ಮದುವೆ ಅಂದ್ರೆ ಏನು ಎಂದು ಪ್ರಶ್ನೆ ಮಾಡಿದೆ. ತಾಳಿ ಹಾಕಿಕೊಳ್ಳುವುದು ಉಂಗುರ ಹಾಕಿಕೊಳ್ಳೋದು ಮದುವೆನಾ? ನಮ್ಮ ಸಂಸ್ಕೃತಿ, ಸಂಪ್ರದಾಯದ ಪ್ರಕಾರ ಇದೆಲ್ಲಾ ಸಾಂಕೇತಿಕ ಅಷ್ಟೇ. ಮದುವೆ ಅಂದರೆ ಎರಡು ಹೃದಯಗಳು ಒಂದಾಗಬೇಕು. ನಮ್ಮ ಹೃದಯಗಳಿಗೆ ಮದುವೆ ಆಗಿದೆ. ನಾವು ಖುಷಿಯಾಗಿದ್ದೆವೆ. ನಾವು ಮದುವೆ ಅನ್ನೋ ವ್ಯವಸ್ಥೆಯನ್ನು ಗೌರವಿಸುತ್ತೇವೆ. ಈ ಸಿನಿಮಾದಲ್ಲೂ ಅದನ್ನೇ ಹೇಳಿದ್ದೇವೆ. ಸುಪ್ರೀಂ ಕೋರ್ಟ್ ಕೂಡ ಲಿವಿಂಗ್ಟು ಗೆದರ್ ಮದುವೆಗೆ ಸಮಾನ ಎಂದು ಹೇಳಿದೆ. ಸಮಾಜ ಬದಲಾಗುತ್ತಿದೆ  ಇದು ನರೇಶ್ ವಾದ. ಒಪ್ಪುವುದು ಬಿಡುವುದು ಅವರವರಿಗೆ ಬಿಟ್ಟಿದ್ದು.