` ಯುದ್ಧಕಾಂಡಕ್ಕೆ ಅರ್ಚನಾ ಜೋಯಿಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಯುದ್ಧಕಾಂಡಕ್ಕೆ ಅರ್ಚನಾ ಜೋಯಿಸ್
Archana Jois Joins 'Yuddhakhana' Movie Team

ಅಜಯ್ ರಾವ್ ನಿರ್ಮಾಣದಲ್ಲಿ ಬರುತ್ತಿರೋ ಸಿನಿಮಾ ಯುದ್ಧಕಾಂಡ. ಈ ಚಿತ್ರದಲ್ಲಿ ಅಜಯ್ ರಾವ್ ಲಾಯರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. 80ರ ದಶಕದ ಸೂಪರ್ ಹಿಟ್ ಸಿನಿಮಾ ಯುದ್ಧಕಾಂಡದಲ್ಲೂ ರವಿಚಂದ್ರನ್, ವಕೀಲರೇ. ಆದರೆ ಈ ಯುದ್ಧಕಾಂಡಕ್ಕೂ, ಆ ಯುದ್ಧಕಾಂಡಕ್ಕೂ ಸಂಬಂಧ ಇಲ್ಲ. ಕಥೆಗೆ ಸೂಕ್ತವಾದ ಟೈಟಲ್ ಎಂಬ ಕಾರಣಕ್ಕೆ ಇಟ್ಟಿದ್ದೇವೆ ಎಂದು ಹೇಳಿದ್ದರು ಡೈರೆಕ್ಟರ್ ಕೆ.ಬಿ. ಪವನ್.

ಈ ಮೊದಲು ಪವನ್, ಕಟಿಂಗ್ ಶಾಪ್ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಅಜಯ್ ರಾವ್ ಅವರಿಗೆ ಸುಪ್ರೀತಾ ನಾರಾಯಣ್ ನಾಯಕಿ. ಇದೀಗ ಚಿತ್ರದ ಪ್ರಮುಖ ಪಾತ್ರವೊಂದಕ್ಕೆ ಅರ್ಚನಾ ಅವರನ್ನು ಆಯ್ಕೆ ಮಾಡಲಾಗಿದೆ. ಚಿತ್ರದಲ್ಲಿ ಅವರದ್ದು ಅತ್ಯಂತ ಮಹತ್ವದ ಪಾತ್ರ. ಸದ್ಯಕ್ಕೆ ಅಷ್ಟು ಮಾತ್ರವೇ ಹೇಳಬಲ್ಲೆ ಎಂದಿದ್ದಾರೆ ಪವನ್.

ಅಂದಹಾಗೆ ಅರ್ಚನಾ ಜೋಯಿಸ್ ಗಮನ ಸೆಳೆದಿದ್ದು, ರಾಕಿಭಾಯ್ ತಾಯಿಯಾಗಿ. ಇತ್ತೀಚೆಗೆ ಅರ್ಚನಾ ಜೋಯಿಸ್ ಪ್ರಮುಖ ಪಾತ್ರದಲ್ಲಿದ್ದ ಹೊಂದಿಸಿ ಬರೆಯಿರಿ ಚಿತ್ರವೂ ಸದ್ದು ಮಾಡಿತ್ತು. ಕಥೆ, ಕ್ವಾಲಿಟಿ ಚಿತ್ರಗಳನ್ನು ಅಳೆದೂತೂಗಿ ಆಯ್ಕೆ ಮಾಡಿಕೊಳ್ಳುವ ಅರ್ಚನಾ ಜೋಯಿಸ್, ಇದೀಗ ಯುದ್ಧಕಾಂಡಕ್ಕೆ ಬಂದಿದ್ದಾರೆ.