` 9 ದಿನಕ್ಕೇ 113 ಕೋಟಿ : ಕೇರಳ ಸ್ಟೋರಿ ದಾಖಲೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
9 ದಿನಕ್ಕೇ 113 ಕೋಟಿ : ಕೇರಳ ಸ್ಟೋರಿ ದಾಖಲೆ
The Kerala Story Movie Image

ದಿ ಕೇರಳ ಸ್ಟೋರಿ ಸಿನಿಮಾವು ತೆರೆಕಂಡ 9ನೇ ದಿನಕ್ಕೆ ಶತಕೋಟಿ ಕ್ಲಬ್ ಸೇರಿದೆ. ಈ ಸಿನಿಮಾವು ಭಾರತದಲ್ಲಿ ಒಟ್ಟು 112.99 ಕೋಟಿ ರೂ. ಕಲೆಕ್ಷನ್ ಮಾಡಿದೆ. ಮೊದಲ ದಿನ 8.05 ಕೋಟಿ ರೂ. ಗಳಿಸಿದ್ದ ದಿ ಕೇರಳ ಸ್ಟೋರಿ ಸಿನಿಮಾ ಮೊದಲ ವಾರಕ್ಕೆ 81.14 ಕೋಟಿ ರೂ. ಗಳಿಸಿತ್ತು. ಇದೀಗ 9ನೇ ದಿನಕ್ಕೆ 112.99 ಕೋಟಿ ರೂ. ಗಳಿಸಿದೆ. ಸುದಿಪ್ತೋ ಸೇನ್ ನಿರ್ದೇಶನ ಮಾಡಿರುವ ದಿ ಕೇರಳ ಸ್ಟೋರಿ, ಬಾಕ್ಸ್ ಆಫೀಸ್ನಲ್ಲಿ ತನ್ನ ನಾಗಾಲೋಟ ಮುಂದುವರಿಸಿದೆ. ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಹೀಗಿದ್ದರೂ, ಕೂಡ ಭಾರತದಲ್ಲಿ ಈ ಸಿನಿಮಾ ಈವರೆಗೂ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆಯನ್ನೇ ಮಾಡಿದೆ.

ಸಾಮಾನ್ಯವಾಗಿ ಯಾವುದೇ ಸಿನಿಮಾ ಆರಂಭದಲ್ಲಿ ಉತ್ತಮ ಗಳಿಕೆ ಮಾಡುತ್ತದೆ. ದಿನ ಕಳೆದಂತೆ, ಕಲೆಕ್ಷನ್ ಕುಸಿತ ಕಂಡು ಬರುತ್ತದೆ. ಆದರೆ 'ದಿ ಕೇರಳ ಸ್ಟೋರಿ' ಸಿನಿಮಾದಲ್ಲಿ ಆಗಿದ್ದೇ ಬೇರೆ. ಈ ಸಿನಿಮಾವು 9ನೇ ದಿನದ ಕಲೆಕ್ಷನ್ನಲ್ಲಿ ದೊಡ್ಡ ದಾಖಲೆಯನ್ನೇ ಬರೆದಿದೆ.

'ದಿ ಕೇರಳ ಸ್ಟೋರಿ' ಸಿನಿಮಾವು ಮೊದಲ ದಿನ 8.05 ಕೋಟಿ ರೂ. ಗಳಿಸಿತ್ತು. ಎರಡನೇ ದಿನ 11.01 ಕೋಟಿ ರೂ., 3ನೇ ದಿನ 16.43 ಕೋಟಿ ರೂ., 4ನೇ ದಿನ 10.03 ಕೋಟಿ ರೂ., 5ನೇ ದಿನ 11.07 ಕೋಟಿ ರೂ., 6ನೇ ದಿನ 12.01 ಕೋಟಿ ರೂ., 7ನೇ ದಿನ 12.54 ಕೋಟಿ ರೂ., 8ನೇ ದಿನ 12.35 ಕೋಟಿ ರೂ. ಗಳಿಸಿತ್ತು. ಆದರೆ 9ನೇ ದಿನ ಕಲೆಕ್ಷನ್ ಮಾತ್ರ ಎಲ್ಲರಲ್ಲೂ ಅಚ್ಚರಿಯನ್ನು ಉಂಟು ಮಾಡಿದೆ. ಇದುವರೆಗಿನ ಎಲ್ಲ ದಿನಗಳ ಕಲೆಕ್ಷನ್ ಅನ್ನು 9ನೇ ದಿನದ ಕಲೆಕ್ಷನ್ ಉಡೀಸ್ ಮಾಡಿದೆ. ಶನಿವಾರ ಈ ಸಿನಿಮಾ 19.50 ಕೋಟಿ ರೂ. ಗಳಿಸಿ, ತನ್ನ ನಾಗಾಲೋಟವನ್ನು ಮುಂದುವರಿಸಿದೆ.

ವಿರೋಧ ನಡುವೆಯೂ ಭಾರತದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ದಿ ಕೇರಳ ಸ್ಟೋರಿ’ ಚಿತ್ರವು ಅಮೆರಿಕ ಹಾಗೂ ಕೆನಡಾದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅದಾ ಶರ್ಮ ನಾಯಕಿಯಾಗಿದ್ದು, ಫಾತಿಮಾ ಪಾತ್ರದಲ್ಲಿ ನಟಿಸಿದ್ದಾರೆ. ಹಿಂದೂ, ಕ್ರಿಶ್ಚಿಯನ್ ಯುವತಿಯರನ್ನು ಬಲೆ ಬೀಸಿ ಮುಸ್ಲಿಮ್ ಧರ್ಮಕ್ಕೆ ಮತಾಂತರ ಮಾಡಿ, ಐಸಿಸ್ ಉಗ್ರರನ್ನಾಗಿಸುವ ನೈಜಕಥೆ ಸಿನಿಮಾದಲ್ಲಿದೆ.