` ಎಡವಿದ್ದೇನೆ.. ಮತ್ತೆ ಎದ್ದು ಓಡುತ್ತೇನೆ : ನಿಖಿಲ್ ಕುಮಾರಸ್ವಾಮಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಎಡವಿದ್ದೇನೆ.. ಮತ್ತೆ ಎದ್ದು ಓಡುತ್ತೇನೆ : ನಿಖಿಲ್ ಕುಮಾರಸ್ವಾಮಿ
Nikhil Kumaraswamy Image

ಸತತ 2ನೇ ಬಾರಿಗೆ. ಮೊದಲು ಮಂಡ್ಯ ಲೋಕಸಭೆ ಚುನಾವಣೆ..ನಂತರ ರಾಮನಗರ ವಿಧಾನಸಭೆ ಚುನಾವಣೆ. ಎರಡೂ ಸೋಲುಗಳ ಬಳಿಕ ನಿಖಿಲ್ ಕುಮಾರಸ್ವಾಮಿ ರಾಮನಗರ ಜನತೆಗೆ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.  'ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ' ಎಂದಿದ್ದಾರೆ.

'ನನ್ನನ್ನು ಅತ್ಯಂತ ಪ್ರೀತಿಯಿಂದ ಬೆಂಬಲಿಸಿ ಆಶೀರ್ವದಿಸಿದ ರಾಮನಗರ ವಿಧಾನಸಭೆ ಕ್ಷೇತ್ರದ ಮಹಾಜನತೆಗೆ ನನ್ನ ಶಿರಸಾಷ್ಟಾಂಗ ನಮನಗಳು. ಈ ಒಂದು ಸೋಲು ನಿಮ್ಮ ಸೇವೆ ಮಾಡಬೇಕು ಎನ್ನುವ ನನ್ನ ಅದಮ್ಯ ಸಂಕಲ್ಪಕ್ಕೆ ತಡೆ ಒಡ್ಡಲಾರದು. ನಾನೆಂದೂ ನಿಮ್ಮ ಜತೆಯಲ್ಲೇ ಇರುತ್ತೇನೆ, ನಿಮಗಾಗಿ ಜೀವಿಸುತ್ತೇನೆ. ಸೋಲನ್ನು ಸಮಚಿತ್ತದಿಂದ ಸ್ವಿಕರಿಸಿ ಮುನ್ನಡೆಯುತ್ತೇನೆ. ಅದು ನಾನು ನನ್ನ ಪೂಜ್ಯ ತಾತನವರಾದ ಶ್ರೀ ಹೆಚ್.ಡಿ.ದೇವೇಗೌಡ ಸಾಹೇಬರಿಂದ, ತಂದೆ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಕಲಿತ ಪಾಠ' ಎಂದು ಬರೆದುಕೊಂಡಿದ್ದಾರೆ.

ಅಪ್ಪ ಮಾಜಿ ಸಿಎಂ. ತಾತ ಮಾಜಿ ಪ್ರಧಾನಿ. ದೊಡ್ಡಪ್ಪ, ಮತ್ತೊಬ್ಬ ಸೋದರ ಸೂರಜ್ ಶಾಸಕರಾದರೆ, ಹಿರಿಯ ಸಹೋದರ ಪ್ರಜ್ವಲ್ ಸಂಸದ. ಅಮ್ಮ ಮಾಜಿ ಶಾಸಕಿ.. ಒಟ್ಟಿನಲ್ಲಿ ಅವರ ಇಡೀ ಕುಟುಂಬವೇ ರಾಜಕಾರಣದಲ್ಲಿದೆ. ಹೀಗಿದ್ದರೂ ಸತತ ಎರಡು ಸೋಲು, ಸಹಜವಾಗಿಯೇ ನಿಖಿಲ್ ಅವರಲ್ಲಿ ನಿರಾಸೆ ಮೂಡಿಸಿದ್ದರೆ ಅಚ್ಚರಿ ಇಲ್ಲ. ಆದರೆ ನಿಖಿಲ್ ಆತ್ಮವಿಶ್ವಾಸ ಕಳೆದುಕೊಂಡಿಲ್ಲ.

ಎಡವಿದ್ದೇನೆ, ಮತ್ತೆ ಎದ್ದು ಓಡುತ್ತೇನೆ. ಬಿದ್ದ ಮಗುವನ್ನು ಮೇಲೆತ್ತುವ ನಿಮ್ಮ ಪ್ರೀತಿ, ವಾತ್ಸಲ್ಯವನ್ನು ನಾನು ಬಲ್ಲೆ. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಜಾತ್ಯತೀತ ಜನತಾದಳವನ್ನು ಹರಸಿದ ಸಾರ್ವಜನಿಕ ಬಂಧುಗಳನ್ನು ಇಲ್ಲಿ ಸ್ಮರಿಸುತ್ತೇನೆ. ಸೋಲಿನಿಂದ ಕಂಗೆಟ್ಟು ಜನರಿಂದ ದೂರವಾಗುವ ಜಾಯಮಾನ ನಮ್ಮದಲ್ಲ. ಈ ಪರಾಜಯದಿಂದ ಪಾಠ ಕಲಿಯುತ್ತೇವೆ, ಪುನಾ ಪುಟಿದೆದ್ದು ಬರುತ್ತೇವೆ. ಪ್ರತಿಯೊಬ್ಬರಿಗೂ ಪ್ರಣಾಮಗಳು' ಎಂದು ಬರೆದುಕೊಂಡಿದ್ದಾರೆ ನಿಖಿಲ್ ಕುಮಾರಸ್ವಾಮಿ.