ಬನಾರಸ್ ಚಿತ್ರ ಬಾಕ್ಸಾಫೀಸಿನಲ್ಲಿ ಬೊಂಬಾಟ್ ಸದ್ದು ಮಾಡದೇ ಹೋದರೂ, ಅಭಿನಯ, ಪ್ರತಿಭೆಗಳಿಂದ ಗಮನ ಸೆಳೆದವರು ಝೈದ್ ಖಾನ್. ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಪುತ್ರ. ನಿರ್ದೇಶಕ ಜಯತೀರ್ಥ ಅವರ ಪಳಗಿದ ಕೈಗಳಲ್ಲಿ ಪ್ರಾಮಿಸಿಂಗ್ ಎನಿಸಿದ್ದರು ಝೈದ್ ಖಾನ್. ಈಗ 2ನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಡೈರೆಕ್ಟರ್ ಯಾರು ಗೊತ್ತೇ.. ಪುನೀತ್ ರುದ್ರನಾಗ್.
ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವ ರಾಜ್ಕುಮಾರ್ ಮೊದಲು 'ಯುವ ರಣಧೀರ ಕಂಠೀರವ' ಎಂಬ ಸಿನಿಮಾವನ್ನು ಆರಂಭಿಸಬೇಕಿತ್ತು. ಅದರ ಪ್ರೋಮೋ ಕೂಡ ರಿಲೀಸ್ ಆಗಿತ್ತು. ಆ ಸಿನಿಮಾವನ್ನು ನಿರ್ದೇಶನ ಮಾಡಬೇಕಾಗಿದ್ದು ಪುನೀತ್ ರುದ್ರನಾಗ್. ಕಾರಣಾಂತರಗಳಿಂದ ಆ ಪ್ರಾಜೆಕ್ಟ್ ಟೇಕ್ಆಫ್ ಆಗಲಿಲ್ಲ. ಇದೀಗ ಝೈದ್ ಖಾನ್ ಜತೆಗೆ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ ಪುನೀತ್.
ಪುನೀತ್, ಕೆಜಿಎಫ್ ಚಾಪ್ಟರ್ 1 ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿದ್ದವರು. ಈ ಸಿನಿಮಾಗೆ ಕಥೆ ಬರೆಯುತ್ತಿರುವುದು ಭಗೀರಥ ಎಂಬ ಹುಡುಗ. ವೃತ್ತಿ ಪರತೆಯಿಂದ ಮಾಡುತ್ತಿರುವ ಸಿನಿಮಾ ಇದು. ನನ್ನ ಹಿಂದಿನ ಬನಾರಸ್ ಸಿನಿಮಾಗಿಂತ ತುಂಬ ವಿಭಿನ್ನವಾಗಿ ಇರಲಿದೆ. ಇಂಥದ್ದೊಂದು ಕಮರ್ಷಿಯಲ್ ಕಥೆಯನ್ನು ಸಿನಿಮಾ ಮಾಡುತ್ತಿರುವುದಕ್ಕೆ ಖುಷಿಯಿದೆ. . ಸದ್ಯ ಆರಂಭದ ಮಾತುಕತೆಯಲ್ಲಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಿದ್ದೇವೆ' ಎನ್ನುತ್ತಾರೆ ಝೈದ್ ಖಾನ್. ಈ ಸಿನಿಮಾವನ್ನು ಯಾರು ನಿರ್ಮಾಣ ಮಾಡಲಿದ್ದಾರೆ? ಚಿತ್ರದ ಇತರ ತಾರಾಬಳಗದಲ್ಲಿ ಯಾರೆಲ್ಲ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿಯು ಮುಂದಿನ ದಿನಗಳಲ್ಲಿ ಸಿಗುವ ಸಾಧ್ಯತೆ ಇದೆ.