` ಕೇರಳ ಸ್ಟೋರಿ ನಾನ್ ಸ್ಟಾಪ್ ಅಬ್ಬರ : ಚಿತ್ರಕ್ಕೆ ಕ್ಯಾಥೊಲಿಕ್ ಬಿಷಪ್`ಗಳ ಪ್ರಶಂಸೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೇರಳ ಸ್ಟೋರಿ ನಾನ್ ಸ್ಟಾಪ್ ಅಬ್ಬರ : ಚಿತ್ರಕ್ಕೆ ಕ್ಯಾಥೊಲಿಕ್ ಬಿಷಪ್`ಗಳ ಪ್ರಶಂಸೆ
The Kerala Story Movie Image

ಈ ವರ್ಷದ ವಿವಾದಾತ್ಮಕ ಚಿತ್ರವೂ ಆಗಿರುವ ಕೇರಳ ಸ್ಟೋರಿ ಅದ್ಧೂರಿ ಪ್ರದರ್ಶನ ಮುಂದುವರೆಸಿದೆ. ಪ.ಬಂಗಾಳ, ತಮಿಳುನಾಡಿನಲ್ಲಿ ಅಧಿಕೃತ ನಿಷೇಧ ಇರುವ ಚಿತ್ರಕ್ಕೆ ಕೇರಳ, ರಾಜಸ್ತಾನ, ಪಾಂಡಿಚೆರಿಗಳಲ್ಲಿ ಭಾಗಶಃ ಪ್ರದರ್ಶನಗಳಿವೆ. ಪ್ರೇಕ್ಷಕರು ಯಾವಾಗ ಗಲಾಟೆಯಾಗುತ್ತದೆಯೋ ಏನೋ ಎಂಬ ಆತಂಕದಲ್ಲಿ ಸಿನಿಮಾದಿಂದ ದೂರ ಉಳಿದಿದ್ದಾರೆ. ಇತ್ತ ಉತ್ತರ ಪ್ರದೇಶ, ಉತ್ತರಾಖಂಡ್, ಮಧ್ಯಪ್ರದೇಶಗಳಲ್ಲಿ ತೆರಿಗೆ ವಿನಾಯಿತಿ ಘೋಷಣೆಯಾಗಿದೆ. ಇದೆಲ್ಲದರ ನಡುವೆ ಸಿನಿಮಾದ ಕಲೆಕ್ಷನ್ ಭರ್ಜರಿಯಾಗಿಯೇ ನಡೆಯುತ್ತಿದೆ. ಸಿನಿಮಾದ ಒಟ್ಟಾರೆ ಕಲೆಕ್ಷನ್ 60 ಕೋಟಿ ದಾಟಿ ಮುನ್ನಡೆದಿದೆ.

ಇದೀಗ ಹಲವು ವಿವಾದಗಳ ನಡುವೆಯೇ ಚಿತ್ರಕ್ಕೆ ಕ್ಯಾಥೊಲಿಕ್ ಬಿಷಪ್`ಗಳ ಪ್ರಶಂಸೆ ಸಿಕ್ಕಿದೆ. ಚಿತ್ರವು ಇಸ್ಲಾಮಿಕ್ ಸ್ಟೇಟ್ ನಡೆಸಿದ ದೌರ್ಜನ್ಯವನ್ನು ಬಹಿರಂಗಪಡಿಸುತ್ತದೆ. ಇದನ್ನು ಕೋಮುವಾದದ ಮಾದರಿಯಲ್ಲಿ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ. ಮಹಿಳೆಯರನ್ನು ಪ್ರೀತಿಯ ಜಾಲದಲ್ಲಿ ಬೀಳಿಸಿ ಅವರನ್ನು ಐಸಿಸ್ಗೆ ಸೇರಿಸಿದ ಬಗ್ಗೆ ಬಹಳ ನಿದರ್ಶನಗಳಿವೆ. ಚಿತ್ರ ಅದನ್ನು ತೋರಿಸಿದೆ. ಆದರೆ ಇದರಿಂದ ಅನೇಕರಿಗೆ ಅಸಮಾಧಾನವಾಗಿದೆ. ಐಸಿಸ್ಅನ್ನು ಮುಸ್ಲಿಮರು ಅಥವಾ ಇಸ್ಲಾಂ ಎಂದು ಯಾರೂ ಹೇಳುತ್ತಿಲ್ಲ. ಲವ್ ಜಿಹಾದ್ ಎಂಬುದು ಸತ್ಯ. ಬಲವಂತದ ಮತಾಂತರ ಅಥವಾ ಪ್ರೀತಿ ಹೆಸರಿನಲ್ಲಿ ಮತಾಂತರ ಮಾಡುವುದು ಸ್ವೀಕಾರಾರ್ಹವಲ್ಲ ಎಂದಿದೆ ಕೇರಳ ಕ್ಯಾಥೊಲಿಕ್ ಬಿಷಪ್ಗಳ ಪರಿಷತ್ತು.

ನಿರ್ದೇಶಕ ಸುದೀಪ್ತೋ ಸೇನ್ ನಿರ್ದೇಶಿಸಿ ವಿಫುಲ್ ಶಾ ನಿರ್ಮಿಸಿರುವ ಚಿತ್ರವು ಕೇರಳದ 32,000 ಹಿಂದೂ ಯುವತಿಯರನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ ಇಸ್ಲಾಂಗೆ ಮತಾಂತರಿಸಿ ಸಿರಿಯಾ, ಅಷ್ಘಾನಿಸ್ತಾನದಂತಹ ರಾಷ್ಟ್ರಗಳಿಗೆ ಕಳುಹಿಸಿ ಅಲ್ಲಿ ಐಸಿಸ್ಗೆ ಸೇರಿಸಲಾಗಿದೆ. ಅವರನ್ನು ಆತ್ಮಾಹುತಿ ಬಾಂಬ್ ದಾಳಿಗಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಕಥಾ ಹೊಂದರವನ್ನು ಹೊಂದಿದೆ.

ಇದೀಗ ನಾಳೆ ಅಂದ್ರೆ 12ನೇ ತಾರೀಕು ಕೇರಳ ಸ್ಟೋರಿ 37 ದೇಶಗಳಲ್ಲಿ ರಿಲೀಸ್ ಆಗುತ್ತಿದೆ.