ನಮ್ಮ ವೋಟು..ನಮ್ಮ ಹಕ್ಕು ಎಂಬ ಸಂದೇಶ ಸಾರಿದ ರಕ್ಷಿತ್ ಶೆಟ್ಟಿ, ವೋಟ್ ಹಾಕಿದ್ದೇ ತಡ, ಅಮೆರಿಕಕ್ಕೆ ಶಿಫ್ಟ್ ಆಗಿದ್ದಾರೆ. 777 ಚಾರ್ಲಿ' ಸಿನಿಮಾದ ಸಕ್ಸಸ್ ಬಳಿಕ ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಶೂಟಿಂಗ್ನಲ್ಲಿ ಮಗ್ನರಾಗಿದ್ದರು. ಇದೀಗ ಆ ಸಿನಿಮಾದ ಶೂಟಿಂಗ್ ಕೂಡ ಮುಕ್ತಾಯವಾಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ನಡೆಯುತ್ತಿವೆ.ಅಲ್ಲಿ ರಿಚರ್ಡ್ ಆಂಟನಿ ಕೆಲಸದಲ್ಲಿ, ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಲಿದ್ದಾರೆ.
ಮತದಾನ ಇದ್ದಿದ್ದರಿಂದ ನಾನು ಇಲ್ಲಿವರೆಗೂ ಕಾಯುತ್ತಿದ್ದೆ. ಇಲ್ಲದಿದ್ದರೆ, ಹಿಂದೆಯೇ ಹೋಗಬೇಕಿತ್ತು. ರಿಚರ್ಡ್ ಆಂಟನಿ ಸಿನಿಮಾದ ಫೈನಲ್ ಸ್ಕ್ರಿಪ್ಟ್ ಬರೆಯಬೇಕಿದೆ. ಇಲ್ಲಿ ಸ್ಕ್ರಿಪ್ಟ್ ಬರೆಯುವಾಗ ತುಂಬ ಕಾಲ್ ಬರ್ತಾ ಇರ್ತವೆ. ಡಿಸ್ಟರ್ಬ್ ಆಗುತ್ತಲೇ ಇರುತ್ತದೆ. ಆದರೆ ಅಮೆರಿಕದಲ್ಲಿ ಬೆಳಕು ಇದ್ದಾಗ ಇಲ್ಲಿ ಕತ್ತಲು ಇರುತ್ತದೆ. ಅಲ್ಲಿ ನಾನು ಎದ್ದು ಕೆಲಸ ಮಾಡುವಾಗ ಇಲ್ಲಿ ಎಲ್ರೂ ಮಲಗಿರುತ್ತಾರೆ. ಅದಕ್ಕಾಗಿ ಈ ಐಡಿಯಾ ಮಾಡಿಕೊಂಡಿದ್ದೇನೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ.
'ಸಪ್ತ ಸಾಗರದಾಚೆ ಎಲ್ಲೋ ' ಸಿನಿಮಾವು ಸದ್ಯದ ಪ್ಲ್ಯಾನ್ ಪ್ರಕಾರ, ಜುಲೈ ಅಂತ್ಯದಲ್ಲಿ ಬರುವ ನಿರೀಕ್ಷೆ ಇದೆ. ಆ ಸಿನಿಮಾವು ರಿಲೀಸ್ ಆದ ಕೂಡಲೇ 'ರಿಚರ್ಡ್ ಆಂಟನಿ' ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.