ರಜನಿಕಾಂತ್ ಚಿತ್ರದಲ್ಲಿ ಶಿವಣ್ಣ ಲುಕ್ ಸಖತ್ ಆಗಿದೆ. ಆಗಸ್ಟ್ 10ಕ್ಕೆ ರಿಲೀಸ್ ಡೇಟ್ ಘೋಷಿಸಿಕೊಂಡಿರೋ ಜೈಲರ್ ಸಿನಿಮಾ, ರಿಲೀಸ್ ಡೇಟ್ ಘೋಷಣೆಗೆಂದೇ ಟೀಸರ್ ರಿಲೀಸ್ ಮಾಡಿದೆ. ಶಿವಣ್ಣ ಲುಕ್ ಮಾತ್ರ ಸಖತ್ ಆಗಿದೆ.
ಇದು ಪ್ಯಾನ್ ಇಂಡಿಯಾ ಸಿನಿಮಾವೇ ಅಥವಾ ಕೇವಲ ತಮಿಳಿನಲ್ಲಿ ಮಾತ್ರ ತೆರೆಗೆ ಬರಲಿದೆಯೇ ಎಂಬ ಬಗ್ಗೆ ಸಾಕಷ್ಟು ಅನುಮಾಗಳಿವೆ. ಆದರೆ ಈವರೆಗೂ ಚಿತ್ರತಂಡ ಸ್ಪಷ್ಟನೆ ಕೊಟ್ಟಿಲ್ಲ. ಆದರೆ ಸಿನಿಮಾದ ತುಂಬ ಎಲ್ಲ ಭಾಷೆಯ ಕಲಾವಿದರು ಇರುವುದರಿಂದ ಬಹುಶಃ ಪ್ಯಾನ್ ಇಂಡಿಯಾ ಮಟ್ಟದಲ್ಲೇ 'ಜೈಲರ್' ತೆರೆಗೆ ಬರುವ ಸಾಧ್ಯತೆಗಳಿವೆ.
ಚಿತ್ರದಲ್ಲಿ ಶಿವಣ್ಣ ಅವರಷ್ಟೇ ಅಲ್ಲ, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಹಿಂದಿಯಿಂದ ಜಾಕಿ ಶ್ರಾಫ್ ಕೂಡಾ ಇದ್ದಾರೆ. ವಿನಾಯಕನ್, ಸುನಿಲ್, ನಾಗಬಾಬು, ಕಿಶೋರ್, ಬಿಲ್ಲಿ ಮುರಳಿ, ಕರಾಟೆ ಕೀರ್ತಿ, ಯೋಗಿ ಬಾಬು, ಕಲೈ ಅರಸನ್.. ಅವರ ಜೊತೆ ಲೇಡಿ ಸೂಪರ್ ಸ್ಟಾರ್ಸ್ ಎಂದೇ ಕರೆಯಬಹುದಾದ ರಮ್ಯಕೃಷ್ಣ, ತಮನ್ನಾ ಭಾಟಿಯಾ ಕೂಡಾ ಇದ್ದಾರೆ.
ಕೊಲಮಾವು ಕೋಕಿಲಾ, ಡಾಕ್ಟರ್ ನಂತಹ ಹಿಟ್ ಸಿನಿಮಾಗಳನ್ನು ನೀಡಿರುವ ನೆಲ್ಸನ್ ಬೀಸ್ಟ್ ಮೂಲಕ ನಿರಾಸೆ ಮಾಡಿದ್ದರು. ಆದರೆ ಈ ಬಾರಿ 'ಜೈಲರ್' ಮೂಲಕ ಗೆಲುವಿನ ಟ್ರ್ಯಾಕ್`ಗೆ ಮರಳುವ ಹಾದಿಯಲ್ಲಿದ್ದಾರೆ.