ರಶ್ಮಿಕಾ ಮಂದಣ್ಣ ಈಗ ಕುಂತ್ಕೊಂಡ್ರೂ ಸುದ್ದಿಯೇ. ನಿಂತ್ಕೊಂಡ್ರೂ ಸುದ್ದಿನೇ. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಇನ್ಸ್‍ಟಾಗ್ರಾಂನಲ್ಲಿ ಫಾಲೋವರ್ಸ್ ಸಂಖ್ಯೆ 4 ಕೋಟಿ ಸಮೀಪಕ್ಕೆ ಬಂದಿದೆ. ಹೀಗಾಗಿಯೇ ರಶ್ಮಿಕಾ ಮಂದಣ್ಣ ಅವರಿಗೆ ನಿಮ್ಮ ಫೇವರಿಟ್ ಕ್ರಿಕೆಟರ್ ಯಾರು ಅನ್ನೋ ಪ್ರಶ್ನೆಯೂ ಎದುರಾಗಿದೆ. ಇತ್ತೀಚೆಗೆ ಶುಭ್ ಮನ್ ಗಿಲ್ ಅವರು ತಮಗೆ ರಶ್ಮಿಕಾ ಮಂದಣ್ಣ ಫೇವರಿಟ್ ಎಂದಿದ್ದ ಹಿನ್ನೆಲೆಯಲ್ಲಿ ರಶ್ಮಿಕಾ ಅವರಿಗೆ ಈ ಪ್ರಶ್ನೆ ಎದುರಾಗಿತ್ತು. ಗಿಲ್ ಹೆಸರು ಹೇಳ್ತಾರೇನೋ ಎಂಬ ನಿರೀಕ್ಷೆಯಲ್ಲಿದ್ದವರಿಗೆ ರಶ್ಮಿಕಾ ಹೇಳಿರುವ ಉತ್ತರವೇ ಬೇರೆ.
ನಾನು ಕರ್ನಾಟಕದವಳು. ಬೆಂಗಳೂರಿನವಳು. ಹಾಗಾಗಿ ಆರ್.ಸಿ.ಬಿ.ಯೇ ನನ್ನ ಫೇವರಿಟ್ ಟೀಂ. ಆಟಗಾರನಾಗಿ ನನಗೆ ಕೊಹ್ಲಿ ಎಂದರೆ ತುಂಬಾ ಇಷ್ಟ. ಅವರ ಆಟಿಟ್ಯೂಡ್, ಆಕ್ರಮಣಕಾರಿ ಬ್ಯಾಟಿಂಗ್ ಸ್ಟೈಲ್ ಎಲ್ಲವೂ ಇಷ್ಟ ಎಂದಿದ್ದಾರೆ ರಶ್ಮಿಕಾ ಮಂದಣ್ಣ.