` ಕೇರಳ ಸ್ಟೋರಿ ವಿವಾದ : 32 ಸಾವಿರ ಯುವತಿಯರು, ಐಸಿಸಿಸ್..ಮತಾಂತರದ ಕರಾಳ ಜಾಲದ ಕಥೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೇರಳ ಸ್ಟೋರಿ ವಿವಾದ : 32 ಸಾವಿರ ಯುವತಿಯರು, ಐಸಿಸಿಸ್..ಮತಾಂತರದ ಕರಾಳ ಜಾಲದ ಕಥೆ..!
The Kerala Story Image

ಕಳೆದ ವರ್ಷ ಕಾಶ್ಮೀರ್ ಫೈಲ್ಸ್ ಚಿತ್ರ ತೆರೆಗೆ ಬಂದಿತ್ತು. ಜಮ್ಮು ಕಾಶ್ಮೀರದಲ್ಲಿ 90ರ ದಶಕದಲ್ಲಿ ನಡೆದ ಅತ್ಯಾಚಾರ, ಹತ್ಯಾಕಾಂಡ, ಅವುಗಳನ್ನು ಹೊರಜಗತ್ತಿಗೆ ತಿಳಿಯದಂತೆ ಮುಚ್ಚಿಟ್ಟಿದ್ದ ಕಥೆ, ದೊಡ್ಡವರು, ಸರ್ಕಾರಗಳು ಮೌನವಾಗಿ ನೋಡಿದ ಘಟನೆಗಳನ್ನು ಹಸಿಹಸಿಯಾಗಿ ತೋರಿಸಲಾಗಿತ್ತು. ಸಹಜವಾಗಿಯೇ ಅದು ವಿರೋಧಕ್ಕೆ ತುತ್ತಾಯಿತು. ಇದೀಗ ಮತ್ತೊಂದು ಅಂತಹುದೇ ಸಿನಿಮಾ ಬರುತ್ತಿದೆ. ಕೇರಳ ಸ್ಟೋರಿ.

ಇದು ಕೇರಳದಲ್ಲಿ ಹಿಂದೂ, ಕ್ರಿಶ್ಚಿಯನ್ ಯವತಿಯರನ್ನು ಮತಾಂತರ ಮಾಡಿ, ದಾರಿ ತಪ್ಪಿಸಿ, ಪ್ರೆಗ್ನೆಂಟ್ ಮಾಡಿ ಐಸಿಸ್ ಉಗ್ರರಿಗೆ ಒಪ್ಪಿಸುತ್ತಿರುವ ಕರಾಳ ಕಥೆ. ಹಾಗೆ ಬಲವಂತದ ಮತಾಂತರಕ್ಕೆ ತುತ್ತಾದವರು 32 ಸಾವಿರಕ್ಕೂ ಹೆಚ್ಚು. ಅದನ್ನೇ ಸಿನಿಮಾ ಮಾಡಿದ್ದಾರೆ. ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

ಹಿಜಾಬ್ ಧರಿಸಿದರೆ ಅತ್ಯಾಚಾರ ಆಗಲ್ಲ. ಅಲ್ಲಾನೇ ರಕ್ಷಿಸುತ್ತಾನೆ.

ಹೆಂಡತಿಗಾಗಿ ಕಣ್ಣೀರು ಹಾಕುವ ಶಿವನನ್ನು ದೇವರು ಎಂದು ಹೇಗೆ ನಂಬುತ್ತೀರಿ. ಅಲ್ಲಾ ಒಬ್ಬನೇ ದೇವರು. ಎಂಬಂತಹ ಡೈಲಾಗ್`ಗಳಿವೆ. ಅಂತಹ ಯುವತಿಯರನ್ನು ಬ್ರೇನ್ ವಾಷ್ ಮಾಡಿ ಐಸಿಸ್`ಗೆ ಸೇರಿಸುವ ದೊಡ್ಡ ಜಾಲವೇ ಕೇರಳದಲ್ಲಿ ಸಕ್ರಿಯವಾಗಿದೆ ಎನ್ನುವುದು ಬಹಿರಂಗವಾಗಿತ್ತು. ಅಂತಹ ಯುವತಿ/ಯುವಕರನ್ನು ರಕ್ಷಿಸಲಾಗಿತ್ತು. ಇನ್ನೂ ಕೆಲವರು ಕೇರಳದವರೇ ಐಸಿಸ್`ನಲ್ಲಿ ಸಕ್ರಿಯರಾಗಿರುವುದು ಎನ್`ಐಎ ತನಿಖೆಯಲ್ಲಿ ಬಹಿರಂಗವಾಗಿತ್ತು. ಲವ್ ಜಿಹಾದ್ ಹಾಗೂ ಐಸಿಸ್`ಗೆ ಸೇರಿಸುವ ಜಾಲದ ವಿರುದ್ಧ ಕೇರಳದ ಹಿಂದೂ ಮತ್ತು ಕ್ರಿಶ್ಚಿಯನ್ ಸಂಘಟನೆಗಳು ಕಾನೂನು ಹೋರಾಟವನ್ನೂ ನಡೆಸುತ್ತಿವೆ. ಇದನ್ನೇ ಸಿನಿಮಾದಲ್ಲಿ ತೋರಿಸಲಾಗಿದೆ. ಇದರ ವಿರುದ್ಧ ಕೇರಳದ ಕಾಂಗ್ರೆಸ್, ಸಿಪಿಐ, ಸಿಪಿಎಂ ಸೇರಿದಂತೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಇದೊಂದು ಸಂಘಪರಿವಾರದ ಅಜೆಂಡಾ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ. ಇದೆಲ್ಲದರ ಮಧ್ಯೆ ಸಿನಿಮಾ ಮೇ 5ರಂದು ರಿಲೀಸ್ ಆಗುತ್ತಿದೆ.