` ಗೀತಾ ಶಿವರಾಜ್ ಕುಮಾರ್ ಅವರಿಗಾಗಿ ಬಲೆಯನ್ನೇ ಬೀಸಬೇಕಾಯ್ತು : ಡಿಕೆ ಶಿವಕುಮಾರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಗೀತಾ ಶಿವರಾಜ್ ಕುಮಾರ್ ಅವರಿಗಾಗಿ ಬಲೆಯನ್ನೇ ಬೀಸಬೇಕಾಯ್ತು : ಡಿಕೆ ಶಿವಕುಮಾರ್
ಗೀತಾ ಶಿವರಾಜ್ ಕುಮಾರ್ ಅವರಿಗಾಗಿ ಬಲೆಯನ್ನೇ ಬೀಸಬೇಕಾಯ್ತು : ಡಿಕೆ ಶಿವಕುಮಾರ್

ಶಿವಣ್ಣ ಅವರೂ ಕೂಡಾ ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರೆ. ಸೊರಬದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಅವರೇ ಈ ಮಾತು ಹೇಳಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಮಧು ಬಂಗಾರಪ್ಪ ಈ ಮಾತು ಹೇಳಿರುವುದು ವಿಶೇಷ.

ನಾನು ನನ್ನ ಪತ್ನಿಯ ನಿರ್ಧಾರಕ್ಕೆ ಬೆಂಬಲವಾಗಿರುತ್ತೇನೆ ಎಂದಿದ್ದಾರೆ ಶಿವಣ್ಣ. ಶಿವಣ್ಣ ಕೂಡಾ ಪ್ರಚಾರಕ್ಕೆ ಹೋಗುತ್ತಿದ್ದು, ಗೀತಾ ಜೊತೆಯಲ್ಲೇ ಪ್ರಚಾರ ಮಾಡಲಿದ್ದಾರೆ. ಗೀತಾ ಅವರು ಕಾಂಗ್ರೆಸ್ಸಿಗೆ ಸೇರಿರುವುದರಿಂದ, ಕಾಂಗ್ರೆಸ್ ಪರವೇ ಪ್ರಚಾರ ಮಾಡಬೇಕಾಗಿ ಬರಬಹುದು.

ಕಳೆದ ಕೆಲವು ವರ್ಷಗಳಿಂದ ಗೀತಾ ಅವರು ಶಕ್ತಿಧಾಮಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯಕ್ಕೆ ಸೇರುವುದರಿಂದ ಅವರ ಇನ್ನಷ್ಟು ಒಳ್ಳೆಯ ಕೆಲಸಗಳಿಗೆ, ಯೋಜನೆಗಳಿಗೆ ಶಕ್ತಿ ಬರಲಿದೆ ಎಂದಿದ್ದಾರೆ ಶಿವಣ್ಣ.

ಗೀತಾ ಅವರನ್ನು ಕಾಂಗ್ರೆಸ್ಸಿಗೆ ಬರಮಾಡಿಕೊಂಡ ಡಿ.ಕೆ.ಶಿವರಾಜ್ ಕುಮಾರ್, ಮಧು ಬಂಗಾರಪ್ಪ ಅವರಿಗಾಗಿ ಗಾಳ ಹಾಕಿದೆ. ಆದರೆ ಗೀತಾ ಅವರನ್ನು ಕಾಂಗ್ರೆಸ್ಸಿಗೆ ಕರೆತರಲು ಬಲೆಯನ್ನೇ ಹಾಕಬೇಕಾಯಿತು. ಅವರು ನನ್ನ ಬಲೆಗೂ ಬೀಳಲಿಲ್ಲ. ಆದರೆ ರಾಹುಲ್ ಗಾಂಧಿ ಅವರು ಘೋಷಿಸಿರುವ ಕಾರ್ಯಕ್ರಮಗಳಿಗೆ ಬಿದ್ದರು ಎಂದಿದ್ದಾರೆ ಡಿಕೆ ಶಿವಕುಮಾರ್.

ಮೋದಿಯವರು ಕಾಂಗ್ರೆಸ್ ಘೋಷಣೆಗಳಿಗೆ ಗೀತಾ ಉತ್ತರ ನೀಡಿದ್ದಾರೆ. ಡಾ.ರಾಜ್ ಕುಮಾರ್ ಸೊಸೆ, ಶಿವ ರಾಜ್ ಕುಮಾರ್ ಪತ್ನಿ ಹಾಗೂ ನನ್ನ ಗುರುಗಳಾದ ಎಸ್. ಬಂಗಾರಪ್ಪ ಅವರ ಮಗಳು ಗೀತಾ, ಕಾಂಗ್ರೆಸ್ ಸೇರುವ ಮೂಲಕ ಮೋದಿಯ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ ಎನ್ನುವುದು ಡಿಕೆ ಶಿವಕುಮಾರ್ ವಿವರಣೆ.