ಧ್ರುವ ಸರ್ಜಾ ಅವರ ಜೊತೆ ಕೆಡಿ ಚಿತ್ರ ರೆಡಿ ಮಾಡುತ್ತಿರುವ ಜೋಗಿ ಪ್ರೇಮ್, ಏಕ್ ಲವ್ ಯಾದ ಮುದ್ದು ಮುದ್ದು ಅನಿತಾರನ್ನು ಮಚ್ ಲಕ್ಷ್ಮಿಯನ್ನಾಗಿ ಮಾಡಿದ್ದಾರೆ. ರೀಷ್ಮಾ ನಾಣಯ್ಯ ಅವರ ಪಾತ್ರದ ಹೆಸರೇ ಮಚ್ ಲಕ್ಷ್ಮಿ. ರೀಷ್ಮಾನಾಣಯ್ಯ ಹುಟ್ಟುಹಬ್ಬಕ್ಕೆ ಮಚ್ ಲಕ್ಷ್ಮಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ.
ಇದೊಂದು ಪಾತ್ರ ಮತ್ತು ಅವರ ಲುಕ್ಕಿಗಾಗಿ ಸತತ 4 ತಿಂಗಳು ವರ್ಕೌಟ್ ಮಾಡಿದ್ದೇವೆ.ಬೇರೆ ಬೇರೆ ಡಿಸೈನ್ ಡ್ರೆಸ್, ಮ್ಯಾನರಿಸಂ ರೂಪಿಸಲು ಶ್ರಮ ಪಟ್ಟಿದ್ದೇವೆ. ಈ ಚಿತ್ರದಲ್ಲಿನ ಮ್ಯಾನರಿಸಂ ಮಾಡುವುದಕ್ಕೆ 70ರ ದಶಕದ ನಾಯಕಿಯರ ಮ್ಯಾನರಿಸಂ ಫಾಲೋ ಮಾಡೋಕೆ ಹೇಳಿದ್ದೆ. ಹಲವು ಮ್ಯಾನರಿಸಂಗಳನ್ನು ರೀಷ್ಮಾ ನಾಣಯ್ಯ ವರ್ಕೌಟ್ ಮಾಡಿದ್ದಾರೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ ಬೆರಗು ಹುಟ್ಟಿಸುತ್ತಾರೆ ಎನ್ನುತ್ತಾರೆ ಪ್ರೇಮ್.
ಪೋಸ್ಟರ್ ಕೂಡಾ ಹಾಗೆಯೇ ಇದೆ. ಮೊಳಕಾಲಿನವರೆಗೆ ಎತ್ತಿ ಕಟ್ಟಿರುವ ಸೀರೆ, ಒಂದು ಕೈತುಂಬಾ ಕರಿಬಳೆ, ಉದ್ದ ಜಡೆ, ಬಿಸಿ ಬಿಸಿ ಮುದ್ದೆ ಇಟ್ಟಿರುವ ತಟ್ಟೆ, ಮೂಳೆ ಕಡಿಯುತ್ತಿರುವ ಮಚ್ ಲಕ್ಷ್ಮಿ ಲುಕ್ ಅಂತೂ ರಗಡ್ ಆಗಿದೆ. ಧ್ರುವ ಸರ್ಜಾ ಎದುರು ಚಿತ್ರದಲ್ಲಿ ವಿ.ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಕೂಡಾ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್‍ನಲ್ಲಿ ಅದ್ಧೂರಿಯಾಗಿ ಚಿತ್ರ ನಿರ್ಮಾಣವಾಗುತ್ತಿದೆ.