ಮಳ್ಳಿ ಪೆಳ್ಳಿ ಅನ್ನೋ ತೆಲುಗು ಸಿನಿಮಾ ಭಾರಿ ಸುದ್ದಿಯಾಗುತ್ತಿದೆ. ಕನ್ನಡದಲ್ಲಿ ಈ ಸಿನಿಮಾ ಮತ್ತೆ ಮದುವೆ ಹೆಸರಿನಲ್ಲಿಯೂ ಬರುತ್ತಿದೆ. ಈ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡೋಕೆ ಕಾರಣ ಚಿತ್ರದ ಟೀಸರ್. ಟೀಸರ್`ನಲ್ಲಿರುವ ದೃಶ್ಯಗಳು ಡೈಲಾಗ್ಸ್ ಮತ್ತು ಸೀನ್ಗಳನ್ನು ನೋಡಿದರೆ, ಇದು ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ರಿಯಲ್ ಲೈಫ್ ಕಥೆಯೇ ಎಂಬ ಅನುಮಾನ ಮೂಡುವಂತಿದೆ.
ಟೀಸರ್ ಆರಂಭವಾಗುತ್ತಿದ್ಧಂತೆ ತೆಲುಗು ಇಂಡಸ್ಟ್ರೀಯವರು ಕನ್ನಡದವರ ಮೇಲೆ ಕಣ್ಣು ಹಾಕ್ತಾ ಇದ್ದಾರಲ್ಲ ಅನ್ನೋ ಡೈಲಾಗ್ ಕೂಡ ಇದೆ. ಓರ್ವ ಮಹಿಳೆ ಮಾಧ್ಯಮಗಳ ಎದುರು ಕುಳಿತು ನನ್ನ ಗಂಡನಿಂದ ನನಗೆ ಅನ್ಯಾಯವಾಗಿದೆ ಎಂದು ಆರೋಪ ಮಾಡುತ್ತಿರುತ್ತಾಳೆ. ನನ್ನ ಸಂಸಾರಕ್ಕೆ ಬೆಂಕಿ ಹಾಕಬೇಡ ಎಂದು ಕೇಳಿಕೊಳ್ಳುತ್ತೇನೆ ನನ್ನ ಮಗನ ಭವಿಷ್ಯದ ಜತೆಗೆ ಆಟಬೇಡ ಅಂತ ಬೇಡಿಕೊಳ್ತಿನಿ' ಎಂದು ಮಾಧ್ಯಮಗಳ ಮುಂದೆ ಪವಿತ್ರಾ ಲೋಕೇಶ್ ನಟಿಸಿರುವ ಪಾತ್ರಕ್ಕೆ ಮನವಿ ಮಾಡುತ್ತಾರೆ.
ಕಳೆದ ವರ್ಷ ಮೈಸೂರಿನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ವಾಸ್ತವ್ಯ ಹೂಡಿದ್ದ ಹೋಟೆಲ್ ಎದುರು ಹೈಡ್ರಾಮಾವೇ ನಡೆದಿತ್ತು. ಅವರಿಬ್ಬರು ಇದ್ದ ಸ್ಥಳಕ್ಕೆ ನರೇಶ್ ಪತ್ನಿ ರಮ್ಯಾ ರಘುಪತಿ ಹೋಗಿ ಗಲಾಟೆ ಮಾಡಿದ್ದರು. ಅದೇ ಥರದ ಯಥಾವತ್ ಸೀನ್ ಈ ಟೀಸರ್ನಲ್ಲಿದೆ. ಅಂದು ನರೇಶ್ ಮತ್ತು ಪವಿತ್ರಾ ಯಾವ ರೀತಿ ನಡೆದುಕೊಂಡಿದ್ದರೋ, ಅದೇ ಥರದ ಸೀನ್ ಅನ್ನು 'ಮತ್ತೆ ಮದುವೆ' ಟೀಸರ್ನಲ್ಲೂ ನೋಡಬಹುದಾಗಿದೆ. ನರೇಶ್ ಮತ್ತು ಪವಿತ್ರಾ ಲೋಕೇಶ್ ಅವರ ಕಿಸ್ಸಿಂಗ್ ಸೀನ್ ಕೂಡ ಇದರಲ್ಲಿದೆ.
ಈ ಚಿತ್ರಕ್ಕೆ ನಿರ್ಮಾಪಕರೂ ನರೇಶ್ ಅವರೇ. ಎಂ.ಎಸ್.ರಾಜು ಎಂಬ ಖ್ಯಾತ ನಿರ್ದೇಶಕರೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನರೇಶ್, ಪವಿತ್ರಾ ಜೊತೆ ಶರತ್ ಬಾಬು, ಜಯಸುಧಾ, ವನಿತಾ ವಿಜಯ್ ಕುಮಾರ್, ಅನನ್ಯಾ ನಗಲ್ಲಾ.. ಹೀಗೆ ಹಲವು ಕಲಾವಿದರು ನಟಿಸಿದ್ದಾರೆ.