ಶಶಾಂಕ್ ಇದೇ ಮೊದಲ ಬಾರಿಗೆ ಡಾರ್ಲಿಂಗ್ ಕೃಷ್ಣ ಜೊತೆ ಮಾಡಿರುವ ಸಿನಿಮಾ ಕೌಸಲ್ಯ ಸುಪ್ರಜಾ ರಾಮ. ಹೀರೋಯಿನ್ ನೋಡುತ್ತಿದ್ದಂತೆಯೇ ಎಣ್ಣೆ ಹೊಡೆದದ್ದಕ್ಕಿಂತಲೂ ಹೆಚ್ ಕಿಕ್ ಆಗುವ ಕೃಷ್ಣ.. ಶಿವಾನಿಯ ಪ್ರೀತಿಗೆ ಬೀಳುವ.. ಶಿವಾನಿಯೂ ಆತನ ಪ್ರೇಮಕ್ಕೆ ಮರುಳಾಗುವ.. ಚೇತೋಹಾರಿ ದೃಶ್ಯಗಳೊಂಗೆ ಸಾಗುವ ಹಾಡು ನಿಂಗೆ ಸೋತೋಗ್ಬಿಟ್ನಲ್ಲೇ ಶಿವಾನಿ..
ಹಾಡಿಗೊಂದು ಟೀಸರ್ ಬಿಟ್ಟಿದ್ದರು ಶಶಾಂಕ್. ಟೀಸರ್ ನೋಡಿಯೇ ಸಖತ್ತಾಗಿರಬಹುದು ಅನ್ನೋ ನಿರೀಕ್ಷೆಯನ್ನು ಶಶಾಂಕ್ ಸುಳ್ಳು ಮಾಡಿಲ್ಲ.
ಅರ್ಜುನ್ ಜನ್ಯ ಅವರು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರ ಸಂಗೀತ ಸಂಯೋಜನೆಯಲ್ಲಿ ‘ಶಿವಾನಿ..’ ಹಾಡು ಮೂಡಿಬಂದಿದ್ದು, ನಿರ್ದೇಶಕ ಶಶಾಂಕ್ ಅವರೇ ಸಾಹಿತ್ಯ ಬರೆದಿದ್ದಾರೆ. ನಟ ನಾಗಭೂಷಣ್ ಕೂಡ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಧುರ ಸಂಗೀತ ಮತ್ತು ಕ್ಯಾಚಿ ಸಾಹಿತ್ಯದಿಂದಾಗಿ ಹಾಡು ಗಮನ ಸೆಳೆಯುತ್ತಿದೆ. ಬೃಂದಾ ಆಚಾರ್ಯ ಅವರು ಶಿವಾನಿ ಪಾತ್ರದಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ.
ಸರೆಗಮ ಕನ್ನಡ ಮೂಲಕ ‘ಶಿವಾನಿ..’ ಹಾಡು ಬಿಡುಗಡೆ ಆಗಿದೆ. ಸಾಂಗ್ ನೋಡಿದ ಸಿನಿಪ್ರಿಯರು ಪಾಸಿಟಿವ್ ಆಗಿ ಕಮೆಂಟ್ ಮಾಡುತ್ತಿದ್ದಾರೆ. ಈ ಹಾಡಿನಿಂದಾಗಿ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ‘ಶಶಾಂಕ್ ಸಿನಿಮಾಸ್’ ಮತ್ತು ‘ಕೌರವ ಪ್ರೊಡಕ್ಷನ್ ಹೌಸ್’ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿವೆ.