ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾಗಿರುವ ಅವಿನಾಶ್ ಮತ್ತು ಮಾಳವಿಕಾ ಅವರಿಗೆ ಒಬ್ಬ ವಿಶಿಷ್ಟ ಮಗನಿದ್ದಾನೆ. ಮಾತು ಬರುವುದಿಲ್ಲ. ನಡೆಯಲು ಆಗುವುದಿಲ್ಲ. ಜಗತ್ತಿನಲ್ಲಿ ಕೇವಲ 2 ಸಾವಿರ ಮಕ್ಕಳು ಮಾತ್ರ ಈ ರೀತಿ ಇರುತ್ತಾರಂತೆ. ಬೇರೆಯವರಿಗೆ ನೋಡುವುದಕ್ಕೆ ಕಷ್ಟವಾಗಬಹುದೇನೋ.. ಆದರೆ ತಾಯಿಗೆ.. ತಂದೆಗೆ.. ವೀಕೆಂಡ್ ವಿತ್ ರಮೇಶ್`ನಲ್ಲಿ ಅವಿನಾಶ್ ಅವರು ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಮಾಳವಿಕಾ ಮತ್ತು ಅವಿನಾಶ್ ತಮ್ಮ ಮಗನ ಬಗ್ಗೆ ಹೇಳಿಕೊಂಡಿದ್ದಾರೆ.
ಈ ಮಗುವಿನ ಕಾರಣಕ್ಕೆ ಯಾವುದೇ ಕಾರ್ಯಕ್ರಮಗಳಿಗೆ ಮಾಳವಿಕಾ ಹೋಗುವುದಿಲ್ಲ. ಸೋಷಿಯಲ್ ಗ್ಯಾದರಿಂಗ್ಗಳಿಗೆ ಹೋಗೋದೇ ಇಲ್ಲ ನಾವು. ನಾವು ಎನು ಮಾತನಾಡಲಿ? ಅವಿನಾಶ್ ಮಗ ಕಣೋ ಇವರು...ಅಲ್ಲೊಂದು ದೇವಸ್ಥಾನವಿದೆ ಅಲ್ಲಿ ಹೋಗಿ ತಾಯಿತ ಕಟ್ಟಿಸಿ ಅಂತಾರೆ. ಅತ್ತ ಅವಿನಾಶ್ ಈಗ ದೇವರೇ ನನ್ನ ಮಗನ ಜೊತೆ ಇದ್ದಾನೆ ಅಂತಾರೆ.
'ಎಲ್ಲಾ ಮಕ್ಕಳು ದೇವರ ಮಕ್ಕಳೇ. ಹೀಗೆ ಹುಟ್ಟ ಬೇಕು ಅಂತ ಯಾವ ಮಗುನೂ ಹುಟ್ಟುವುದಿಲ್ಲ. ಇಂಥದೇ ಮನೆಯಲ್ಲಿ ಹುಟ್ಟಬೇಕು ಅಂತ ಹುಟ್ಟುವುದಿಲ್ಲ. ಇದೆಲ್ಲಾ ದೇವರ ಪ್ರಸಾದ ಅಂತ ಸ್ವೀಕಾರ ಮಾಡ್ತೀವಿ. ವಿಶೇಷ ಏನಪ್ಪ ಅಂದ್ರೆ ಭಗವಂತ ಯಾವುದನ್ನೋ ಕಿತ್ಕೊಂಡು ಇನ್ನೇನೋ ಕೊಡ್ತಾನೆ. ಇತ್ತೀಚೆಗಷ್ಟೇ ಟಿವಿ ಶೋವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಮಾಳವಿಕಾ ಈ ಮಗನಿಂದಾಗಿ ನಮ್ಮ ಮನೆಯಲ್ಲಿ ಅಪ್ಪಾಜಿ ಪ್ರತಿನಿತ್ಯ ಪ್ರತ್ಯಕ್ಷ ಆಗ್ತಾರೆ. ಅವನಿಗೆ ಸಂಗೀತವೆಂದರೆ ಇಷ್ಟ. ಹಾಡಿನಲ್ಲಿ ಭಕ್ತಿ ಇರಬೇಕು. ನಾಲ್ಕೈದು ಗೆಜೆಟ್`ನಲ್ಲಿ ಅಪ್ಪಾಜಿಯವರ ಅಂದರೆ ಡಾ.ರಾಜ್ ಅವರ ಹಾಡುಗಳಿರುತ್ತವೆ. ನನಗೆ ಅರ್ಜುನ್ ಜನ್ಯ ಪರಿಚಯವಾಗಿದ್ದೇ ಇವನಿಂದ.. ಎಂದು ಹೇಳಿಕೊಳ್ತಾರೆ ಮಾಳವಿಕ.