ಕ್ರೇಜಿ ಸ್ಟಾರ್ ರವಿಚಂದ್ರನ್ ಚಿತ್ರ ಎಂದ ಮೇಲೆ ಸ್ಟಾರ್‍ಗಳು ಇರಲೇಬೇಕು. ಆದರೆ ಜಡ್ಜ್‍ಮೆಂಟ್ ಚಿತ್ರದಲ್ಲಿ ದೊಡ್ಡ ಸೈನ್ಯವೇ ಸೇರಿದೆ. ರವಿಚಂದ್ರನ್ ಜೊತೆ ಧನ್ಯಾ ರಾಮ್ ಕುಮಾರ್ ಅಷ್ಟೇ ಅಲ್ಲ, ಆಪ್ತರಕ್ಷಕ ಖ್ಯಾತಿಯ ಲಕ್ಷ್ಮೀ ಗೋಪಾಲಸ್ವಾಮಿ, ದಿಗಂತ್ ಇದ್ದಾರೆ. ಪೋಷಕ ಕಲಾವಿದರ ತಂಡವೂ ಸ್ಟಾರ್ ಮಯ. ಟಿ.ಎಸ್.ನಾಗಾಭರಣ, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ರಾಜೇಂದ್ರ ಕಾರಂತ್, ರೂಪಾ ರಾಯಪ್ಪ.. ಹೀಗೆ..
ಲಾಸ್ಟ್ ಬಸ್, ಅಮೃತ್ ಅಪಾರ್ಟ್‍ಮೆಂಟ್ಸ್, ಆಕ್ಸಿಡೆಂಟ್ ಚಿತ್ರಗಳನ್ನು ನಿರ್ಮಿಸಿದ್ದ ಜಿ 9 ಕಮ್ಯುನಿಕೇಷನ್ಸ್ ಮೀಡಿಯಾ & ಎಂಟರ್`ಟೈನ್`ಮೆಂಟ್ಸ್ ಸಂಸ್ಥೆಯೇ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ಗುರುರಾಜ್ ಕುಲಕರ್ಣಿ ಡೈರೆಕ್ಟರ್. ಈ ಸಂಸ್ಥೆಯ ಈ ಎಲ್ಲ ಚಿತ್ರಗಳನ್ನೂ ನಿರ್ದೇಶನ ಮಾಡಿದ್ದೂ ಕೂಡಾ ಗುರುರಾಜ್ ಕುಲಕರ್ಣಿಯವರೇ.
ನನಗೆ ಈ ತಂಡ ಹೊಸದು. ಜಾನರ್ ಕೂಡಾ ಹೊಸದು. 6 ಜನ ಸ್ನೇಹಿತರು ಸೇರಿ ನಿರ್ಮಾಣ ಮಾಡುತ್ತಿರುವ ಚಿತ್ರ. ಒಳ್ಳೆಯ ತಂಡ ಎಂಬ ನಂಬಿಕೆಯಂತೂ ಇದೆ ಎಂದಿದ್ದಾರೆ ರವಿಚಂದ್ರನ್. ಶರದ್ ಬಿ ನಾಡಗೌಡ, ವಿಶ್ವನಾಥ ಗುಪ್ತ, ರಾಮು ರಾಯಚೂರು, ರಾಜಶೇಖರ ಆರ್ ಪಾಟೀಲ, ರಾಜೇಶ್ವರಿ ಆರ್ ಸುನೀಲ ಹಾಗೂ ಪ್ರತಿಮ ಬಿರಾದಾರ 'ದ ಜಡ್ಜ್ ಮೆಂಟ್' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.