ರೋಸಿ ಅನ್ನೋ ಟೈಟಲ್ಲಿನ ಸಿನಿಮಾ ಶೂನ್ಯ ನಿರ್ದೇಶನದಲ್ಲಿ ಘೋಷಣೆಯಾಗಿದೆ. ಅತ್ತ ಅದಕ್ಕೆ ಒಂದು ವಾರ ಮುಂಚೆ 45ರೋಸಿ ಅನ್ನೋ ಸಿನಿಮಾ ಕೂಡಾ ಫಿಲ್ಮ್ ಚೇಂಬರಿನಲ್ಲಿ ರಿಜಿಸ್ಟರ್ ಆಗಿದೆ. ರೋಸಿ, ಯೋಗಿಯ 50ನೇ ಸಿನಿಮಾ. 45 ರೋಸಿ, ಸಿನಿಮಾಗೆ ಅರ್ಜುನ್ ಜನ್ಯಾ ಡೈರೆಕ್ಟರ್. ಶಿವಣ್ಣ ಜೊತೆ ಉಪ್ಪಿ ಕೂಡಾ ನಟಿಸುತ್ತಿದ್ದಾರೆ. ಈ ಬಗ್ಗೆ ಅರ್ಜುನ್ ಜನ್ಯ ಮತ್ತು ರಮೇಶ್ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಶಿವಣ್ಣ ಇಡೀ ವಿವಾದವನ್ನು ಪ್ರೀತಿಯಿಂದಲೇ ಇತ್ಯರ್ಥ ಮಾಡುವಂತೆ ಕಾಣುತ್ತಿದೆ.
ಇದು ವಿವಾದ ಅಲ್ಲ ಸರ್. ನಮ್ಮ ಚಿತ್ರ ನಿರ್ಮಾಣ ಸಂಸ್ಥೆಗೂ, ಅವರ ಸಂಸ್ಥೆಗೂ ಮಧ್ಯೆ ಮಾತುಕತೆಯೇ ಆಗಿಲ್ಲ. ಗೊತ್ತೂ ಇರಲಿಲ್ಲ. ಇದು ವಿವಾದವೇ ಅಲ್ಲ. ಎರಡೂ ಕಡೆ ನಮ್ಮವರೇ ಇರೋದ್ರಿಂದ ಇತ್ಯರ್ಥವಾಗುತ್ತದೆ ಎಂದಿರುವ ಯೋಗಿ, ಸುದ್ದಿ ಗೊತ್ತಾದ ಬೆನ್ನಲ್ಲೇ ಶಿವಣ್ಣನ ಮನೆಗೆ ಹೋಗಿದ್ದಾರೆ.
ಯೋಗಿ ಹೇಳುತ್ತಿದ್ದಂತೆಯೇ ಶಿವಣ್ಣ `ಇದು ನಿನಗೆ 50ನೇ ಸಿನಿಮಾ ಅಲ್ವಾ? ಚೇಂಜ್ ಏನೂ ಮಾಡ್ಕೋಬೇಡ. ಹೋಗು, ನಿನಗೇ ಟೈಟಲ್ ಸಿಗುತ್ತದೆ. ನಾನು ಮಾತನಾಡುತ್ತೇನೆ’ ಎಂದು ಭರವಸೆ ನೀಡಿದ್ದಾರಂತೆ. ಶೂನ್ಯ ಅವರೂ ಕೂಡಾ ಈ ಬಗ್ಗೆ ಮಾತನಾಡಿದ್ದು ನಾವೂ ಮತ್ತು ಅವರು ಇಬ್ಬರೂ ಒಂದೇ ತಿಂಗಳಲ್ಲಿ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇವೆ. ಅವರು ನಮಗಿಂತ ಒಂದು ವಾರ ಮೊದಲು ಮಾಡಿಸಿದ್ದಾರೆ. ನಮಗೆ ಮಾಹಿತಿ ಇರಲಿಲ್ಲ. ಚರ್ಚೆ ಮಾಡಿಯೇ ಚೇಂಬರ್`ನವರು ಟೈಟಲ್`ನ್ನು ಓಕೆ ಮಾಡಿದ್ದಾರೆ. ನಮ್ಮ ಚಿತ್ರದಲ್ಲಿ ಚಿತ್ರದ ನಾಯಕನ ಹೆಸರು ರೋಜಿ. ಕಥೆ ಹಾಗೂ ಕಥೆಯಲ್ಲಿ ನಡೆಯುವ ಬೆಳವಣಿಗೆಗೆ ಅದು ಸೂಕ್ತವಾಗಿ ಹೊಂದಿಕೊಳ್ಳುತ್ತೆ ಎಂದಿದ್ದಾರೆ ಶೂನ್ಯ.
ಆದರೆ ಶಿವಣ್ಣ ಭರವಸೆ ಕೊಟ್ಟಿದ್ದಾರಾದ್ದರಿಂದ ಇದು ತೀವ್ರ ಸ್ವರೂಪಕ್ಕೆ, ವಾದ-ವಾಗ್ಯುದ್ಧ ಜಗಳಿಗಳಿಗಂತೂ ಹೋಗುವ ಸಾಧ್ಯತೆ ಇಲ್ಲ.