ಬಿಜೆಪಿ ನಾಯಕಿಯೂ ಆಗಿರುವ ನಟಿ ಖುಷ್ಬೂ ಸುಂದರ್ ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಣ ಸಹಿಸಲು ಅಸಾಧ್ಯವಾದ ನೋವು ಮತ್ತು ವಿಪರೀತ ಜ್ವರ. ‘ನಾನು ಹೇಳಿದಂತೆ, ಜ್ವರ ಕೆಟ್ಟದಾಗಿದೆ. ಪರಿಣಾಮ ತುಂಬಾನೇ ಗಂಭೀರವಾಗಿದೆ. ತೀವ್ರ ಜ್ವರ ಹಾಗೂ ಸಾಯಿಸುವಂತಹ ದೇಹದ ನೋವಿನಿಂದ ನಾನು ಆಸ್ಪತ್ರೆ ಸೇರಿದ್ದೇನೆ. ಒಳ್ಳೆಯ ಚಿಕಿತ್ಸೆ ಸಿಗುತ್ತಿದೆ’ ಎಂದಿದ್ದಾರೆ ಖುಷ್ಬೂ.
ದೇಶದಲ್ಲಿ ಮತ್ತೆ ಕೊರೊನಾ ಹೆಚ್ಚುತ್ತಿದೆ. ಖುಷ್ಬೂಗೆ ಅಂಟಿರುವುದು ಕೊರೊನಾ ಸೋಂಕೆ ಎಂಬ ಪ್ರಶ್ನೆಯೂ ಮೂಡಿದೆ. ನಟಿಯ ಕಡೆಯಿಂದ ಇದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಅಲ್ಲದೆ ಇತ್ತೀಚೆಗೆ ಖುಷ್ಬೂ ತೀವ್ರವಾದ ಡಯಟ್ ಮತ್ತು ವ್ಯಾಯಾಮ ಮಾಡಿ ತೆಳ್ಳಗಾಗಿದ್ದರು. ಇದೇನಾದರೂ ಸೈಡ್ ಎಫೆಕ್ಟ್ ಆಯಿತಾ ಎಂಬ ಅನುಮಾನವೂ ಅಭಿಮಾನಿಗಳಲ್ಲಿದೆ. ಖುಷ್ಬೂ ಬೇಗ ಚೇತರಿಸಿಕೊಳ್ಳಲಿ ಎಂದು ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ‘ಬೇಗ ಸುಧಾರಿಸಿಕೊಳ್ಳಿ. ಮತ್ತೆ ಮೊದಲಿನಂತೆ ಓಡಾಡುವಂತಾಗಲಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ರಾಶಿ ಖನ್ನಾ ಕೂಡ ನಟಿಗೆ ವಿಶ್ ಮಾಡಿದ್ದಾರೆ.