ಕರ್ನಾಟಕ ಬುಲ್ಡೋಜರ್ ತಂಡದ ಆಟಗಾರ ರಾಜೀವ್ ನಟಿಸುತ್ತಿರುವ ಸಿನಿಮಾ ಉಸಿರೇ ಉಸಿರೇ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೊನೆಯ ಹಂತದಲ್ಲಿದ್ದು ಈಗ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾದ ಪ್ರಮುಖ ದೃಶ್ಯವೊಂದರಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಆ ಚಿತ್ರದ ದೃಶ್ಯವೊಂದು ಇದ್ದಕ್ಕಿದ್ದಂತೆ ವೈರಲ್ ಆಗಿ ಹೋಗಿದೆ. ಇನ್ನೂ ಚಿತ್ರವೇ ಕಂಪ್ಲೀಟ್ ಆಗಿಲ್ಲ. ಹೀಗಿರುವಾಗಲೇ ವಿಡಿಯೋ ಲೀಕ್ ಆಗಿದ್ದು ಹೇಗೆ? ಇನ್ನು ಈ ಚಿತ್ರದಲ್ಲಿ ಸುದೀಪ್ ಹೀರೋ ಅಲ್ಲ. ಅತಿಥಿನ ನಟನಾಗಿ ನಟಿಸುತ್ತಿದ್ದಾರೆ ಅಷ್ಟೆ.
ಲೀಕ್ ಆಗಿರುವ ದೃಶ್ಯದಲ್ಲಿ ರಸ್ತೆಯಲ್ಲಿ ಅಪಘಾತವಾಗಿರುವ ಯುವಕನೊಬ್ಬನಿಗೆ ಸುದೀಪ್ ನೀರು ಕುಡಿಸಿ ಆರೈಕೆ ಮಾಡುತ್ತಾರೆ. ಅಪಘಾತಕ್ಕೆ ಒಳಗಾದವರ ಬಗ್ಗೆ ಸ್ಥಳದಲ್ಲಿದ್ದವರು ಮೊಬೈಲ್ ವಿಡಿಯೋ ಮಾಡುವುದಕ್ಕಿಂತ ಸಹಕರಿಸಿ, ನೆರವು ನೀಡುವುದು ಒಳ್ಳೆಯದು. ನೋಡಿ, ನಮ್ಮ ಸುದೀಪಣ್ಣನ್ನ ನೋಡಿ ಕಲೀರಿ ಎಂಬ ಸಂದೇಶದೊಂದಿಗೆ ವಿಡಿಯೋ ವೈರಲ್ ಆಯ್ತು. ಈಗ ಸುದೀಪ್ ಬೇರೆ ರಾಜಕಾರಣಿಯೂ ಹೌದು. ಸಿಎಂ ಬೊಮ್ಮಾಯಿಯವರಿಗೆ ಬೆಂಬಲ ಘೋಷಿಸಿ ಪರ-ವಿರೋಧ ಎರಡನ್ನೂ ಕಟ್ಟಿಕಕೊಂಡಿದ್ದಾರೆ. ಹೀಗಾಗಿ ಬೇರೆಯದೇ ವಾದವೂ ಬಂತು.
ಆದರೆ ಇದು ಸಿನಿಮಾ ಲೋಕ. ಉಸಿರೇ ಉಸಿರೇ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ರಾಜೀವ್ ಹೀರೊ. ರಾಜೀವ್ಗೆ ಶ್ರೀಜಿತ ಹೀರೊಯಿನ್. ಇವರೊಂದಿಗೆ ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ, ಬ್ರಹ್ಮಾನಂದಮ್, ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿ.ಎಂ.ವಿಜಯ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಶೂಟಿಂಗ್ ವೇಳೆ ಯಾರೋ ತೆಗೆದ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಒಮ್ಮೆ ಭಾವುಕರಾಗಿದ್ದಂತೂ ನಿಜ. ಕಿಚ್ಚ ಸುದೀಪ್ ಟೀಕೆಗಳಿಗೆ ಕಿವಿಗೊಡದೆ ತಮ್ಮಷ್ಟ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.