ರಮ್ಯಾ ಅವರು ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ. ರಾಜ್ ಬಿ.ಶೆಟ್ಟಿ ನಟಿಸಿ ನಿರ್ದೇಶಿಸಿರುವ ಸಿನಿಮಾ. ಈ ಸಿನಿಮಾ ವಿವಾದಕ್ಕೀಡಾಗಿತ್ತು. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಲ್ಲಿ ಒಬ್ಬರಾಗಿರುವ ಎಸ್.ವಿ.ರಾಜೇಂದ್ರ ಸಿಂಗ್ ಟೈಟಲ್ ನನ್ನದು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ವಿವಾದದ ವಿಚಾರಣೆ ಕೈಗೆತ್ತಿಕೊಂಡಿರುವ ಸಿಟಿ ಸಿವಿಲ್ ಕೋರ್ಟ್, ಟೈಟಲ್ ಬಳಕೆಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದೆ.
ಸ್ವಾತಿ ಮುತ್ತಿನ ಮಳೆಹನಿಯೇ' 1990ರಲ್ಲಿ ಬಂದ ಬಣ್ಣದ ಗೆಜ್ಜೆ ಸಿನಿಮಾದ ಫೇಮಸ್ ಹಾಡಿನ ಸಾಲು ಇದಾಗಿದೆ. ಆ ಸಿನಿಮಾವನ್ನು ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನ ಮಾಡಿದ್ದರು. ಆ ಹಾಡು ಇಂದಿಗೂ ಅಷ್ಟೆ ಫೇಮಸ್. ಅದೇ ಹಾಡಿನ ಸಾಲನ್ನು ಇಟ್ಟುಕೊಂಡು ರಮ್ಯಾ ತನ್ನ ಮೊದಲ ನಿರ್ಮಾಣದ ಸಿನಿಮಾಗೆ ಟೈಟಲ್ ಇಟ್ಟಿದ್ದರು. ಆದರೀಗ ರಾಜೇಂದ್ರ ಸಿಂಗ್ ಬಾಬು ತಕರಾರು ತೆಗೆದಿದ್ದರು. ಈ ಟೈಟಲ್ ಇಟ್ಟುಕೊಂಡು ಈಗಾಗಲೇ ಅಂಬರೀಷ್-ಸುಹಾಸಿನಿ ಜೋಡಿಯಾಗಿ ಚಿತ್ರವನ್ನು ಆರಂಭಿಸಿದ್ದೆ. ಅಂಬರೀಷ್ ನಿಧನದ ನಂತರ ಇದೇ ಟೈಟಲ್ ಇಟ್ಟುಕೊಂಡು ಅಭಿಷೇಕ್ ಅಂಬರೀಷ್ ಅವರನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿದ್ದೇನೆ. ಹೀಗಾಗಿ ಟೈಟಲ್‍ನ್ನು ಕೊಡುವುದು ಬೇಡ ಎಂದು ವಾದಿಸಿದ್ದರು ಎಸ್.ವಿ.ರಾಜೇಂದ್ರ ಸಿಂಗ್ ಬಾಬು.
ಟೈಟಲ್ ಬಳಕೆಗೆ ಓಕೆ ಎಂದಿರುವ ಸಿಟಿ ಸಿವಿಲ್ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.