ಪೆಂಟಗನ್ ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ. ಏಪ್ರಿಲ್ 7ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ 5 ಕಥೆಗಳು ಹಾಗೂ ಐವರು ನಿರ್ದೇಶಕರಿದ್ದಾರೆ. ಚಿತ್ರದ ಟ್ರೇಲರ್ ನೋಡಿದವರು ಚಿತ್ರದ ಬಗ್ಗೆ ಒಳ್ಳೆಯ ಮಾತನ್ನಾಡುತ್ತಿದ್ದಾರೆ. ಇದರ ಮಧ್ಯೆ ರಘು ಚೂರಿಕಟ್ಟೆ ನಿರ್ದೇಶನದ ಪೆಂಟಗನ್ ಚಿತ್ರದ ಒಂದು ವರ್ಷನ್‍ನಲ್ಲಿ ಬೋಲ್ಡ್ ಸೀನ್‍ಗಳಿವೆ. ಕಾಮನಬಿಲ್ಲು.. ಹಾಡಿನಲ್ಲಿ ಇಂಟಿಮೇಟ್ ಸೀನ್‍ಗಳಿವೆ. ಬೆತ್ತಲೆ ಬೆನ್ನು ತೋರಿಸಿರುವ ತನಿಷಾ ಕುಪ್ಪಂಡ, ಬೆಡ್`ರೂಂ ಸೀನುಗಳಲ್ಲಿ ಬಿಂದಾಸ್ ಆಗಿಯೇ ನಟಿಸಿದ್ದಾರೆ. ಆದರೆ ಚಿತ್ರದ ಪ್ರಚಾರದ ವೇಳೆ ಮಾತನಾಡುವಾಗ ಯೂಟ್ಯೂಬರ್ ಒಬ್ಬ ನೀವು ನೀಲಿ ಚಿತ್ರಗಳಲ್ಲಿ ಬೆತ್ತಲೆ ಚಿತ್ರಗಳಲ್ಲಿ ನಟಿಸೋಕೆ ಸಿದ್ಧರಿದ್ದೀರಾ ಎಂದು ಪ್ರಶ್ನಿಸಿಬಿಟ್ಟಿದ್ದ.
ತನಿಷಾ ಗರಂ ಆಗಿಯೇ ಉತ್ತರ ಕೊಟ್ಟಿದ್ದರೆನ್ನಿ. ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು ಕೂಡಾ. ಅದಾದ ನಂತರ ಸುದ್ದಿಗೋಷ್ಠಿ ಮಾಡಿದ್ದ ತನಿಷಾ ರಾಜಾಹುಲಿ ಹರ್ಷ ಕೂಡಾ ಅದೇ ರೀತಿಯ ಮೆಸೇಜ್ ಕಳಿಸಿದ್ದಾರೆ ಎಂದು ಆರೋಪಿಸಿದ್ದರು. ಗೊತ್ತಿಲ್ಲದವರು ಹಾಗೆ ಮಾತನಾಡಿದರೆ ಏನೂ ಅನ್ನಿಸಲ್ಲ. ಆದರೆ ಎಲ್ಲವೂ ಗೊತ್ತಿರುವ ನಮವರೇ ಇಂತಹ ಕೆಲಸ ಮಾಡಿದಾಗ ನೋವಾಗುತ್ತೆ ಎಂದಿದ್ದರು. ಇದಕ್ಕೆ ಖುದ್ದು ಹರ್ಷ ಅವರೇ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸ್ಪಷ್ಟನೆ ಕೊಟ್ಟಿದ್ದಾರೆ.
ನಾನು ಮತ್ತು ತನಿಷಾ ಒಳ್ಳೆಯ ಸ್ನೇಹಿತರು. ಯುಟ್ಯೂಬರ್ ವೈರಲ್ ವೀಡಿಯೋಗೆ ಪ್ರತಿಕ್ರಿಯಿಸಿ, ನಾನು ಸಂದೇಶ ಕಳಿಸಿದ್ದು ನಿಜ. ಆದರೆ ಯಾವುದೇ ಕೆಟ್ಟ ಆಲೋಚನೆಯಿಂದ ಅಲ್ಲ. ಬ್ಲೂಫಿಲ್ಮ್ ಮಾಡ್ತೀರಾ ಎಂದು ಆ ಯುಟ್ಯೂಬರ್ ಹೀಗ್ಯಾಕೆ ಕೇಳಿದ್ದರು ಎಂದು ಪ್ರಶ್ನೆ ಮಾಡುವ ರೀತಿಯಲ್ಲಿ ನಗುವಿನ ಇಮೋಜಿ ಕಳುಹಿಸಿದೆ ಅಷ್ಟೇ. ಆ ಸಂದೇಶವೇ ಈ ಗೊಂದಲಕ್ಕೆ ಕಾರಣವಾಗಿದೆ. ಅನ್ಯತಾ ಭಾವಿಸಬಾರದು ಎಂದು ಮತ್ತೆ ವಾಯ್ಸ್ ನೋಟ್ ಕಳುಹಿಸಿದ್ದೀನಿ. ಯುಟ್ಯೂಬರ್ ಯಾಕೆ ಹೀಗೆ ಪ್ರಶ್ನೆ ಮಾಡಿದ್ದರು ಎಂದು ಕೇಳಿದ್ದೀನಿ. ಅದು ಬಿಟ್ಟು ನೀಲಿ ಸಿನಿಮಾದಲ್ಲಿ ಆಕ್ಟ್ ಮಾಡ್ತೀರಾ ಎಂದು ನಾನು ಪ್ರಶ್ನೆ ಮಾಡಿಲ್ಲ. ಎಲ್ಲವೂ ನಾವು ಅರ್ಥ ಮಾಡಿಕೊಳ್ಳುವ ದೃಷ್ಟಿಕೋನದಲ್ಲಿದೆ ಎಂದಿರುವ ಹರ್ಷ, ಇದೀಗ ಅವರ ಸಿನಿಮಾ ರಿಲೀಸ್ಗೆ ರೆಡಿಯಿದೆ. ಪ್ರಚಾರಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆನಟಿಯಾಗಿ ಬೋಲ್ಡ್ ಸಿನಿಮಾದಲ್ಲಿ ನಟಿಸಿದ ಮೇಲೆ ಬೋಲ್ಡ್ ಪ್ರಶ್ನೆಗಳನ್ನ ಕೂಡ ಎದುರಿಸಲು ರೆಡಿಯಾಗಿಬೇಕು ಎಂದು ಹರ್ಷ ಮಾತನಾಡಿದ್ದಾರೆ.