ಅರ್ಜುನ್ ಜನ್ಯ ಜೊತೆಗೂಡಿ ಶಿವಣ್ಣ 45 ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣ ಹಾಗೂ ಉಪೇಂದ್ರ ಜೋಡಿಯಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ಜೊತೆ ರಾಜ್ ಬಿ.ಶೆಟ್ಟಿ ಕೂಡಾ ಇದ್ದಾರೆ. ಒಂದೆಡೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶಿವಣ್ಣ ಈ ಚಿತ್ರಕ್ಕೂ ಟೈಂ ಕೊಟ್ಟಿದ್ದಾರೆ. ಚಿತ್ರಕ್ಕೀಗ ಹೀರೋಯಿನ್ ಆಯ್ಕೆಯಾಗಿದೆ.
ಕೌಸ್ತುಭ ಮಣಿ ಈ ಚಿತ್ರಕ್ಕೆ ನಾಯಕಿ. ನನ್ನರಸಿ ರಾಧೆ ಧಾರಾವಾಹಿ ಮೂಲಕ ಗಮನ ಸೆಳೆದಿದ್ದ ಹುಡುಗಿ ಕೌಸ್ತುಭ ಮಣಿ. ಕೌಸ್ತುಭ, ರಾಜ್ ಬಿ.ಶೆಟ್ಟಿಯವರಿಗೆ ನಾಯಕಿಯಂತೆ.
ಯುವ ಪ್ರತಿಭೆ ತೇಜ್ ನಟಿಸಿ, ನಿರ್ದೇಶನ ಮಾಡುತ್ತಿರುವ 'ರಾಮಾಚಾರಿ 2.0' ಚಿತ್ರದಲ್ಲೂ ಕೌಸ್ತುಭ ನಟಿಸಿದ್ದಾರೆ. ನಟಿಯಾಗಿ, ನಾನು ಹೊಸ ಉದ್ಯಮಗಳನ್ನು ಅನ್ವೇಷಿಸಲು ಮತ್ತು ಅನುಭವಿಸಲು ಉತ್ಸುಕಳಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಚಿತ್ರ ಮುಂದಿನ ತಿಂಗಳು ರಿಲೀಸ್ ಆಗಲಿದೆ. ನಟಿಯಾಗಬೇಕು ಎಂಬ ಕನಸೇ ಕಂಡಿರದ ಕೌಸ್ತುಭ, ನಟಿಯಾಗಿದ್ದು ಮಾತ್ರ ವಿಶೇಷ. ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಕೌಸ್ತುಭ ಮಣಿ ಆಕಸ್ಮಿಕವಾಗಿ ಬಣ್ಣದ ಬದುಕಿಗೆ ಕಾಲಿಟ್ಟರು.
ಕೌಸ್ತುಭ ಮಣಿ ಬಣ್ಣದ ಲೋಕಕ್ಕೆ ಬರುವುದಕ್ಕೆ ಕಾರಣ ಮಾನ್ವಿತಾ ಕಾಮತ್ ಅಂತೆ. ಫ್ಯಾಷನ್ ಶೋವೊಂದರಲ್ಲಿ ಮಾನ್ವಿತಾ ಅವರನ್ನು ಭೇಟಿ ಮಾಡಿದ್ದರಂತೆ. ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದ ಕೌಸ್ತುಭ ಅವರನ್ನು ಮಾನ್ವಿತಾ ಅವರು ಸೀರಿಯಲ್ ತಂಡವೊಂದಕ್ಕೆ ಪರಿಚಯ ಮಾಡಿಸಿಕೊಟ್ಟರಂತೆ. ಅಲ್ಲಿಂದ ನನ್ನರಸಿ ರಾಧೆಯ ಬಣ್ಣದ ಲೋಕದ ಜರ್ನಿ ಶುರುವಾಯ್ತು. ಇದೀಗ ಶಿವಣ್ನ-ಉಪ್ಪಿ-ರಾಜ್ ಬಿ.ಶೆಟ್ಟಿ ನಟಿಸುತ್ತಿರುವ ಮಲ್ಟಿಸ್ಟಾರ್ ಚಿತ್ರಕ್ಕೆ ಹೀರೋಯಿನ್ ಆಗಿದ್ದಾರೆ. ಅಂದಹಾಗೆ ಚಿತ್ರದಲಿ ಶಿವಣ್ಣ ಹಾಗೂ ಉಪೇಂದ್ರ ಅವರಿಗೆ ನಾಯಕಿಯರು ಯಾರು ಎಂಬುದು ಇನ್ನೂ ಫೈನಲ್ ಆಗಿಲ್ಲ.