` ಮತ್ತೆ ಮತ್ತೆ ಟ್ರೋಲ್ ಆದರು ಉಪೇಂದ್ರ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮತ್ತೆ ಮತ್ತೆ ಟ್ರೋಲ್ ಆದರು ಉಪೇಂದ್ರ..!
Upendra Image

ರಾಜ್ಯದಲ್ಲೀಗ ಎಲೆಕ್ಷನ್ ಸಮಯ. ಮೇ 10ಕ್ಕೆ ಎಲೆಕ್ಷನ್. ಮೇ 13ಕ್ಕೆ ವೋಟಿಂಗ್. 5 ವರ್ಷಗಳಿಗೊಮ್ಮೆ ನಡೆಯುವ ಪ್ರಜಾಪ್ರಭುತ್ವದ ಹಬ್ಬವಿದು. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲರೂ ಅಖಾಡಕ್ಕೆ ಧುಮುಕೋಕೆ ಸಿದ್ದರಾಗಿದ್ದಾರೆ. ಸಹಜವಾಗಿಯೇ ಉತ್ತಮ ಪ್ರಜಾಕೀಯವೂ ರೆಡಿ. ರೆಗ್ಯುಲರ್ ಪಾರ್ಟಿಗಳ ಹಾಗಲ್ಲ. ಹೀಗಾಗಿ ಉಪೇಂದ್ರ ಅವರ ಮೇಲೆ ಎಲ್ಲರ ಗಮನ ನೆಟ್ಟಿತ್ತು. ಅದಕ್ಕೆ ತಕ್ಕಂತೆ ಉಪೇಂದ್ರ ಒಂದು ಟ್ವೀಟ್ ಮಾಡಿದ್ರು.

ಡಿಜಿಟಲ್ ಕಾಲದಲ್ಲಿ ಇವಿಎಂ ಮೂಲಕ ಚುನಾವಣೆ ನಡೆಯುತ್ತಿದೆ. ಆದರೆ,  ಮತಗಳ ಎಣಿಕೆ ನಡೆಯಲು ಎರಡು ದಿನಗಳ ಅಂತರ ಯಾಕೆ, ಅದೇ ದಿನ ಪ್ರಕಟಿಸಬಹುದಲ್ಲ ಎನ್ನುವ ಅರ್ಥದಲ್ಲಿ ಅವರು ಟ್ವೀಟ್ ಮಾಡಿದ್ದರು. ಉಪೇಂದ್ರ ಅವರ ಟ್ವೀಟ್ಗೆ ಭಿನ್ನಭಿನ್ನ ಕಾಮೆಂಟ್ಗಳು ಬಂದಿದ್ದು ಮಾತ್ರ ಅಲ್ಲ, ಹಲವರು ಉಪೇಂದ್ರ ಅವರನ್ನು ತರಾಟೆಗೆ ತಗೊಂಡ್ರು. 1ನೇ ಕ್ಲಾಸ್ ಪರೀಕ್ಷೆ ನಡೆಸಿದರೆ ಅದರ ಫಲಿತಾಂಶ ನೀಡೋಕೆ ಒಂದು ತಿಂಗಳು ಕಾಯಿಸ್ತಾರೆ. ಅಂಥದ್ದರಲ್ಲಿ 224 ಕ್ಷೇತ್ರಗಳ ಮಹತ್ವದ ಚುನಾವಣೆಯ ರಿಸಲ್ಟ್ ಘೋಷಣೆ ಮಾಡೋಕೆ ಎರಡು ದಿನವಾದರೂ ಬೇಡವೇ ಎಂದು ಪ್ರಶ್ನೆ ಮಾಡಿದ್ದಾರೆ. ಸಿನೆಮಾದ ಶೂಟಿಂಗ್ ಮುಗಿದ ಮಾರನೆ ದಿನವೇ ರಿಲೀಸ್ ಮಾಡಬಹುದಲ್ವಾ? ಸಿನೆಮಾ ರಿಲೀಸ್ ಮಾಡಲು ತಿಂಗಳುಗಟ್ಟಲೆ ಯಾಕೆ ಕಾಯ್ತೀರಿ ನಟ ನಿರ್ದೇಶಕರೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು  'ಉಪ್ಪಿ ಸ್ವಲ್ಪ ಅರ್ಥ ಮಾಡ್ಕೊಳಿ ಸ್ವಾಮಿ. ಮತಯಂತ್ರಗಳನ್ನು ಮತಗಟ್ಟೆಗಳಿಂದ ಎಣಿಕೆ ಕೇಂದ್ರಗಳಿಗೆ ಕೊಂಡೊಯ್ಯಬೇಕು, ಅದರ ಜೊತೆಗೆ ಸಾಕಷ್ಟು ಭದ್ರತಾ ವ್ಯವಸ್ಥೆಗಳು ಇತ್ಯಾದಿ ಇರುತ್ತೆ ಅಲ್ವಾ? ಇಷ್ಟೆಲ್ಲಾ ಮಾಡೋಕ್ಕೆ 2 ದಿನ ಬೇಕಲ್ವಾ ಸ್ವಾಮಿ ಎಂದರು. 'ಬುದ್ಧಿವಂತರು ನೀವು.. ಕರ್ನಾಟಕದ ಎಲ್ಲಕಡೆಯಿಂದ ಮತ ಪೆಟ್ಟಿಗೆಗಳನ್ನು ಒಂದೆಡೆ ಸುರಕ್ಷಿತವಾಗಿ ತರಿಸಿ. ಎಣಿಕೆಗೆ ವ್ಯವಸ್ಥೆ ಮಾಡಬೇಕು. ಎಲ್ಲಾದರೂ ಅಹಿತಕರ ಘಟನೆ ನಡೆದಲ್ಲಿ, ಮರು ಮತದಾನ ಮಾಡಬೇಕು, ಹಾಗಾಗಿ ಎರಡು ದಿನ ಬೇಕಾಗುತ್ತದೆ . ಹೀಗೆಲ್ಲ ಬಾಲಿಶ ಸ್ಟೇಟ್ಮೆಂಟ್ ಗಳು ನಿಮ್ಮ  ಗೌರವವನ್ನು ಕಡಿಮೆ ಮಾಡುತ್ತದೆ..ಅಲ್ವಾ' ಎಂದು ಇನ್ನೊಬ್ಬರು ಉಪೇಂದ್ರ ಅವರಿಗೆ ಎಚ್ಚರಿಸಿದ್ದಾರೆ.

 ತಾವು ಮಾಡಿದ ಟ್ವೀಟ್ ನಿರೀಕ್ಷೆಗೂ ಮೀರಿ ಕಾಮೆಂಟ್ಸ್ಗಳು ಬಂದ ಕಾರಣ, ಉಪೇಂದ್ರ ಅವರೇ ಮತ್ತೊಂದು ಟ್ವೀಟ್ ಮಾಡಿದರು.

ಡಿಜಿಟಲ್ ವೋಟಿಂಗ್ ಅಲ್ವಾ ? ಮತ ಎಣಿಕೆಗೆ 2 ದಿನಾ ಬೇಕಾ ? ನನಗೆ ಗೊತ್ತಿಲ್ಲಾ, ಗೊತ್ತಿದ್ದರೆ ತಿಳಿಸಿ ಅಂದೆ ಅಷ್ಟೇ…. ಅಬ್ಬಬ್ಬಾ ಏನು ಕಾಮೆಂಟ್ಸ್ ಗಳು ?! ವಾರೆ ವಾಹ್ … ವ್ಯಾಪಾರೀ ರಾಜಕೀಯ, ಭ್ರಷ್ಟಾಚಾರ, ಕುದುರೆ ವ್ಯಾಪಾರ ಇದರ ಬಗ್ಗೆ ಕಾಮೆಂಟ್ ಮಾಡಿ ನೋಡೋಣ ಅತಿ ಬುದ್ವಂತ್ರು, ದೇಶ ಪ್ರೇಮಿಗಳು, ರಾಜಕೀಯ ಪಕ್ಷಗಳ ಹಿಂ ಬಾಲಕರು….

ಆದರೆ ಟ್ರೋಲಿಗರೇನೂ ಸುಮ್ಮನಾಗಲಿಲ್ಲ. ಅಂದಹಾಗೆ ಉಪೇಂದ್ರ ಅವರಿಗೆ ಗೊತ್ತಿಲ್ಲದ ವಿಷಯವೊಂದಿದೆ. ದೇಶದಲ್ಲ ಇವಿಎಂ ವೋಟಿಂಗ್ ನಡೆಯುವುದು ನಿಜ. ಆದರೆ ಡಿಜಿಟಲ್ ವೋಟಿಂಗ್ ನಡೆಯಲ್ಲ. ಮತದಾನ ಇನ್ನೂ ಡಿಜಿಟಲ್ ಆಗಿಲ್ಲ. ಅಲ್ಲದೆ ಮತದಾನ ಮುಗಿದ ಮೇಲೆ ಎರಡು ದಿನ ಗ್ಯಾಪ್ ಕೊಡುವುದು ರೀವೋಟಿಂಗ್ ಮತ್ತು ಸೆಕ್ಯುರಿಟಿ ಕಾರಣಗಳಿಗೆ.