ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ನಿನ ಕೆಡಿ ಚಿತ್ರ ಸಖತ್ ಸೌಂಡ್ ಮಾಡುತ್ತಿದೆ. ಈಗಾಗಲೇ ಚಿತ್ರತಂಡಕ್ಕೆ ನಮ್ಮ ಕ್ರೇಜಿ ಸ್ಟಾರ್ ರವಿಚಂದ್ರನ್, ಬಾಲಿವುಡ್ ಸ್ಟಾರ್ ಸಂಜಯ್ ದತ್, ಶಿಲ್ಪಾಶೆಟ್ಟಿ ಸೇರಿಕೊಂಡಿದ್ದಾರೆ. ಇದೀಗ ಹೀರೋಯಿನ್ ಆಯ್ಕೆಯೂ ಫೈನಲ್ ಆಗಿದ್ದು, ರೀಷ್ಮಾ ನಾಣಯ್ಯ ನಾಯಕಿ ಎಂಬ ಸುದ್ದಿ ಜೋರಾಗಿದೆ.
ಕನ್ನಡದ ನಟಿನೇ ಧ್ರುವಗೆ ನಾಯಕಿಯಾಗಬೇಕು ಎಂದು ಚಿತ್ರತಂಡ ಮೊದಲೇ ಯೋಚಿಸಿತ್ತು. ಅದರಂತೆಯೇ ಕನ್ನಡದ ನಟಿ ರೀಷ್ಮಾನೇ ಈ ಪಾತ್ರಕ್ಕೆ ಸೂಕ್ತ ಎಂದೆನಿಸಿ ಆಯ್ಕೆ ಮಾಡಲಾಗಿದೆ. ʻಕೆಡಿʼ ಸಿನಿಮಾದಲ್ಲಿ ರೆಟ್ರೋ ಕಥೆಯಿದ್ದು, ರೆಟ್ರೋ ಲುಕ್ನಲ್ಲಿ ರೀಷ್ಮಾ ನಾಣಯ್ಯ ಮಿಂಚಲಿದ್ದಾರೆ. ಈ ಮೊದಲು ಶ್ರೀಲೀಲಾ ನಾಯಕಿ ಎಂದು ಸುದ್ದಿಯಾಗಿತ್ತು. ಆದರೆ ಈಗ ಕೊಡಗಿನ ಕುವರಿ ರೀಷ್ಮಾ ನಾಯಕಿ ಎಂದು ಹೇಳಲಾಗುತ್ತಿದೆ.
ರೀಷ್ಮಾ ನಾಣಯ್ಯ ಅವರು ಪ್ರೇಮ್ ಅವರೇ ಚಿತ್ರರಂಗಕ್ಕೆ ಪರಿಚಯಿಸಿದ ಸುಂದರಿ. ಉಪೇಂದ್ರ ಜೊತೆ ಯುಐ ಹಾಗೂ ಗಣೇಶ್ ಜೊತೆ ಬಾನ ದಾರಿಯಲಿ ಚಿತ್ರದಲ್ಲಿ ನಟಿಸುತ್ತಿರುವ ರೀಷ್ಮಾ ನಾಣಯ್ಯ, ಈಗ ಭರ್ಜರಿ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿಯಾಗುತ್ತಿದ್ದಾರೆ.