ಅವರೂ ಶೆಟ್ಟಿ. ಇವರೂ ಶೆಟ್ಟಿ. ಅವರು ಶ್ರೀನಿಧಿ ಶೆಟ್ಟಿ. ಇವರು ರಕ್ಷಿತ್ ಶೆಟ್ಟಿ. ಇವರಿಬ್ಬರೂ ಟ್ವಿಟರಿನಲ್ಲಿ ನಡೆಸಿದ್ದ ಮಾತುಕತೆಯೇ ಈಗ ಟ್ರೆಂಡಿಂಗ್ ಆಗ್ಬಿಟ್ಟಿದೆ. ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಅವರ ಹಾಗೆ ಸುಮ್ಮನೆ ಪೋಸ್ಟ್ಗೆ ಸಿಂಪಲ್ ಸ್ಟಾರ್ ಕಾಮೆಂಟ್ ಮಾಡಿರುವುದು ಈಗ ವೈರಲ್ ಆಗಿದೆ. ಅಷ್ಟಕ್ಕೂ ಏನಿದು ಇಬ್ಬರೂ ಶೆಟ್ರ ಮಾತುಕತೆ ಅಂತಿರಾ? ಇಬ್ಬರ ಕ್ಯೂಟ್ ಮಾತುಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಅಷ್ಟೆಯಲ್ಲ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ನಟಿ ಶ್ರೀನಿಧಿ ಶೆಟ್ಟಿ ಇತ್ತೀಚೆಗೆ ಒಂದು ಪೋಸ್ಟ್ ಶೇರ್ ಮಾಡಿದ್ದರು. ಪರ್ಪಲ್ ಬಣ್ಣದ ಡ್ರೆಸ್ ಧರಿಸಿದ್ದ ಶ್ರೀನಿಧಿ ಶೆಟ್ಟಿ ಸಿಂಪಲ್ ಲುಕ್ನ ಸುಂದರ ಪೋಟೋ ಹಂಚಿಕೊಂಡಿದ್ದರು. ಫೋಟೋಗೆ ಹಾಗೆ ಸುಮ್ಮನೆ ಎಂದು ಕ್ಯಾಪ್ಷನ್ ಮಾಡಿದ್ದರು. ಶ್ರೀನಿಧಿ ಶೆಟ್ಟಿ ಫೋಟೋಗೆ ಸಿಂಪಲ್ ಸ್ಟಾರ್ ಕಾಮೆಂಟ್ ಮಾಡಿದ್ದಾರೆ. 'ಹೌದಾ ಶೆಟ್ರೆ ಗೊತ್ತಾಯಿತು' ಎಂದು ತುಳುವಿನಲ್ಲಿ ಹೇಳಿದ್ದಾರೆ. ರಕ್ಷಿತ್ ಕಾಮೆಂಟ್ಗೆ ಶ್ರೀನಿಧಿ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ. 'ಗೊತ್ತಾಯಿತಾ ಶೆಟ್ರೆ, ಯಾರಿಗೂ ಹೇಳಬೇಡಿ ಎಂದು' ಹೇಳಿದ್ದಾರೆ.
ಇಬ್ಬರ ಮಾತುಕತೆ ನೋಡಿ ಅಭಿಮಾನಿಗಳು ಕೊಡುತ್ತಿರೋ ಪ್ರತಿಕ್ರಿಯೆಯೇ ಡಿಫರೆಂಟು. ಏನ್ ನಡೀತಿದೆ ಶೆಟ್ರೆ ಅಂತಾ ಒಬ್ಬರಂದರೆ, ಬೇರೆ ಏನೋ ವಾಸನೆ ಬರ್ತಿದೆ ಶೆಟ್ರೇ ಅಂತಿದ್ದಾರೆ ಇನ್ನೊಂದಷ್ಟು ಮಂದಿ. ತಲೆಗೆ ಹುಳ ಬಿಟ್ರಿ ಶೆಟ್ರೇ ಅಂತಾ ಕೆಲವರಂದ್ರೆ, ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಜೋಡಿ ಚೆನ್ನಾಗಿದೆ ಎಂದು ಲವ್ ಸಿಂಬಲ್ ಹಾಕಿದ್ದಾರೆ.
ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಿ, ಚೆನ್ನಾಗಿರುತ್ತೆ ಎಂದು ಅನೇಕರು ಹೇಳುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಕಾಮೆಂಟ್ ಮಾಡಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರಕ್ಷಿತ್ ಜೊತೆ ಶ್ರೀನಿಧಿ ಸಿನಿಮಾ ಮಾಡುತ್ತಿದ್ದಾರಾ ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ರಕ್ಷಿತ್ ಮುಂದಿನ ಸಿನಿಮಾದಲ್ಲಿ ಶ್ರೀನಿಧಿ ನಟಿಸಿದ್ರೂ ಅಚ್ಚರಿ ಇಲ್ಲ. ಅಂದಹಾಗೆ ಹೊಂಬಾಳೆಯವರ ಜೊತೆ ರಕ್ಷಿತ್ ಶೆಟ್ಟಿಯವರ ರಿಚರ್ಡ್ ಆಂಟನಿ ಸಿನಿಮಾ ಚಿತ್ರೀಕರಣ ಶುರುವಾಗಬೇಕಿದೆ. ಶ್ರೀನಿಧಿ ಶೆಟ್ಟಿ ಕೂಡಾ ಹೊಂಬಾಳೆ ಹುಡುಗಿ ಅನ್ನೋದನ್ನ ಬೇರೆ ಹೇಳಬೇಕಿಲ್ಲ.. ಅಲ್ಲವೇ..