ಡಾಲಿ ಧನಂಜಯ ಮತ್ತು ಅಮೃತಾ ಅಯ್ಯಂಗಾರ್ ನಡುವೆ ಏನೋ ಇದೆ ಅನ್ನೋ ಮಾತು ಇವತ್ತಿನದ್ದಲ್ಲ. ಏಕೆಂದರೆ ಅವರಿಬ್ಬರೂ ಒಟ್ಟಿಗೇ ಈಗಾಗಲೇ 3 ಚಿತ್ರಗಳಲ್ಲಿ ನಟಿಸಿದ್ದಾರೆ. ಪಾಪ್ ಕಾರ್ನ್ ಮಂಕಿ ಟೈಗರ್, ಬಡವ ರಾಸ್ಕಲ್ ಚಿತ್ರದಲ್ಲಿ ನಟಿಸಿದ್ದ ಡಾಲಿ ಮತ್ತು ಅಮೃತಾ ಇದೀಗ ಹೊಯ್ಸಳ ಚಿತ್ರದಲ್ಲಿ ಮತ್ತೊಮ್ಮೆ ಜೊತೆಯಾಗಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ಲವ್ ಇದೆ. ಇಬ್ಬರೂ ಮದುವೆಯಾಗ್ತಾರೆ ಅನ್ನೋ ಸುದ್ದಿ ಜೋರಾಗಿ ಹಬ್ಬಿದೆ. ಸ್ವತಃ ಸುದೀಪ್ ಸ್ಟೇಜ್ ಮೇಲೆ ಕಿಚಾಯಿಸಿದ್ದಾರೆ. ಹೀಗಾಗಿ ಇದು ಇನ್ನೂ ಜೋರಾಗಿದೆ.
ನಮ್ಮೀಬ್ಬರ ಮಧ್ಯೆ ಪ್ರೀತಿ ಇದೆ ಎಂಬ ಹಬ್ಬಿರುವ ಸುದ್ದಿಗೆ ಧನಂಜಯ್ಗೆ ಯಾರು ಹೆಣ್ಣು ಕೊಡ್ತಿಲ್ಲವಂತೆ. ನಮ್ಮೀಬ್ಬರ ಮಧ್ಯೆ ಹಾಗೇನು ನಾವಿಬ್ಬರು ಸ್ನೇಹಿತರು. ಡಾಲಿ ಜೊತೆ ಫೋಟೋ ಹಾಕಿದ್ದರೆ, ಹಿರಿಯ ನಟರು ಸಿಕ್ಕಾಗ ಇದೇ ಕೇಳುತ್ತಾರೆ. ಸಂಬಂಧಿಕರು ಇದರ ಬಗ್ಗೆ ವಿಚಾರಿಸುತ್ತಾರೆ. ಆಗ ನಾನು ಸ್ಟಷ್ಟನೆ ಕೊಡುತ್ತೇನೆ. ಇದು ಹೇಗೆ ನಿಲ್ಲಿಸಬೇಕು ಎಂದು ತಿಳಿಯುತ್ತಿಲ್ಲ. ಸೆಟ್ನಲ್ಲಿ ನನಗೆ ಹೆಣ್ಣು ಕೊಡುತ್ತಿಲ್ಲ ಎಂದು ಡಾಲಿ ರೇಗಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ ಅಮೃತಾ ಅಯ್ಯಂಗಾರ್.
ಅಂದಹಾಗೆ ಇದೆಲ್ಲ ಶುರುವಾಗಿದ್ದ ಗಣೇಶ್ ಅವರು ನಿರೂಪಣೆ ಮಾಡುತ್ತಿದ್ದ ಶೋದಿಂದ ಎನ್ನುವುದು ಕೂಡಾ ವಿಶೇಷ. ಟಿವಿಗೆ ನಡೆಸಿಕೊಡುತ್ತಿದ್ದ ಕಾರ್ಯಕ್ರಮದಲ್ಲಿ ಗಣೇಶ್ ಅವರಿಗೆ ಪ್ರಪೋಸ್ ಮಾಡುವ ರೀತಿಯ ಟಾಸ್ಕ್ ಕೊಟ್ಟಿದ್ದರು. ಅವತ್ತು ಪ್ರಪೋಸ್ ಮಾಡಿಸಿಕೊಂಡಿದ್ದು ಡಾಲಿ ಧನಂಜಯ. ಅದನ್ನು ನಿಜವೆಂದೇ ಅಭಿಮಾನಿಗಳು ಫೀಲ್ ಆದರು. ಇದೀಗ ಇಬ್ಬರೂ ಎಷ್ಟು ಸ್ಪಷ್ಟನೆ ಕೊಟ್ಟರೂ ಅಭಿಮಾನಿಗಳು ನಂಬುತ್ತಿಲ್ಲ. ಈಗಲೂ ಅಷ್ಟೆ, ಅಮೃತಾ ಇಷ್ಟೆಲ್ಲ ಸ್ಪಷ್ಟನೆ ಕೊಟ್ಟ ಮೇಲೆಯೂ ಹೋಗ್ಲಿ.. ಬಿಡಿ.. ಮದುವೆ ಯಾವಾಗ ಎನ್ನುತ್ತಿದ್ದಾರಂತೆ.
ಇದೆಲ್ಲದರ ನಡುವೆಯೆ ಹೊಯ್ಸಳ ಭರ್ಜರಿ ಓಪನಿಂಗ್ ತೆಗೆದುಕೊಳ್ಳೋ ಸುಳಿವು ಇದೆ. ಡಾಲಿ-ಅಮೃತಾ ಅಯ್ಯಂಗಾರ್ ಜೊತೆಯಾಗಿ ನಟಿಸಿರುವ 3ನೇ ಸಿನಿಮಾ ಇದು. ಇದೇ 30ರಂದು ರಿಲೀಸ್.