` ಎರಡನೇ ಮದುವೆ ಗಾಸಿಪ್ ಶುದ್ಧ ಸುಳ್ಳು : ನಟಿ ಮೀನಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಎರಡನೇ ಮದುವೆ ಗಾಸಿಪ್ ಶುದ್ಧ ಸುಳ್ಳು : ನಟಿ ಮೀನಾ
Meena Image

ನಟಿ ಮೀನಾ ಹಾಗೂ ನಟ ಧನುಷ್ ಮದುವೆ ಆಗಲಿದ್ದಾರೆ. ಇದೇ ವರ್ಷದ ಜುಲೈ ತಿಂಗಳಿನಲ್ಲಿ ಮೀನಾ ಮತ್ತು ಧನುಷ್ ಅವರ ವಿವಾಹ ಮಹೋತ್ಸವ ಜರುಗಲಿದೆ. ಒಂದು ವೇಳೆ ಅದು ಆಗಲಿಲ್ಲ ಎಂದರೆ, ಧನುಷ್ ಮತ್ತು ಮೀನಾ ಲಿವ್ ಇನ್ ರಿಲೇಶನ್ಶಿಪ್ನಲ್ಲಿರಲಿದ್ದಾರೆ..

ಹೀಗೊಂದು ಹೇಳಿಕೆ ನೀಡಿ ವಿವಾದದ ಕಿಡಿ ಹೊತ್ತಿಸಿದ್ದರು ತಮಿಳು ಬೈಲ್ವಾನ್ ರಂಗನಾಥನ್.  ಈ ಹೇಳಿಕೆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮೀನಾ - ಧನುಷ್ ಮದುವೆ ಬಗ್ಗೆ ಗುಲ್ಲೆಬ್ಬಿತ್ತು. ಬೈಲ್ವಾನ್ ರಂಗನಾಥನ್ ಆಡಿರುವ ಮಾತುಗಳು ಇದೀಗ ನಟಿ ಮೀನಾ ಅವರ ಕಿವಿಗೂ ಬಿದ್ದಿದೆ. ಪರಿಣಾಮ, ಎರಡನೇ ಮದುವೆ ಗಾಸಿಪ್ ಬಗ್ಗೆ ನಟಿ ಮೀನಾ ಮೌನ ಮುರಿದಿದ್ದಾರೆ. ಹಬ್ಬಿರುವ ಗಾಸಿಪ್ ಶುದ್ಧ ಸುಳ್ಳು ಎಂದಿದ್ದಾರೆ ನಟಿ ಮೀನಾ.

ನಾನಿನ್ನೂ ಪತಿಯನ್ನ ಕಳೆದುಕೊಂಡ ನೋವಿನಲ್ಲಿದ್ದೇನೆ. ಇಂತಹ ಸಮಯದಲ್ಲಿ ಎರಡನೇ ಮದುವೆಯ ಗಾಸಿಪ್ ಹಬ್ಬಿರುವುದು ತೀರಾ ಬೇಸರ ತರಿಸಿದೆ. ವಿದ್ಯಾಸಾಗರ್ ನಿಧನದ ನೋವನ್ನ ಅರಗಿಸಿಕೊಳ್ಳುವುದೇ ಕಷ್ಟವಾಗುತ್ತಿದೆ. ಅಂಥದ್ರಲ್ಲಿ ಈ ತರಹದ ಗಾಸಿಪ್ ಹಬ್ಬಿದರೆ ತೀವ್ರ ನೋವುಂಟಾಗುತ್ತದೆ. ನನ್ನ ಗಮನ ಈಗ ಏನಿದ್ದರೂ ಮಗಳ ಭವಿಷ್ಯದ ಮೇಲೆ ಮಾತ್ರ. ಸಿನಿಮಾ ಹಾಗೂ ಪಾತ್ರಗಳ ಆಯ್ಕೆ ವಿಚಾರದಲ್ಲೂ ನಾನು ಚ್ಯೂಸಿ ಆಗಿದ್ದೇನೆ’’ ಎಂದಿದ್ದಾರೆ ನಟಿ ಮೀನಾ.

ಮಗಳು ನೈನಿಕಾಳೊಂದಿಗೆ ಜೀವನ ಸಾಗಿಸುತ್ತಿರುವ ನಟಿ ಮೀನಾ ಈಗ ರೌಡಿ ಬೇಬಿ ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ.