ರುದ್ರಾಭಿಷೇಕ-ಬ್ಯಾಡ್ ಮ್ಯಾನರ್ಸ್ ಪಾತ್ರದ ಹೆಸರು ರುದ್ರ. ಅಭಿಯ ವೊರಿಜಿನಲ್ ಹೆಸರು ಅಭಿಷೇಕ. ಎರಡೂ ಸೇರಿದರೆ ರುದ್ರಾಭಿಷೇಕ. ಶಿವಲಿಂಗ ಪೂಜೆಯ ವೇಳೆ ರುದ್ರಾಭಿಷೇಕವನ್ನು ಮಾಡುತ್ತಾರೆ. ಒಂದೊಂದು ದೇವಸ್ಥಾನದಲ್ಲಿ ಒಂದೊಂದು ರೀತಿ. ಇದು ಸೂರಿ ಸ್ಟೈಲ್.
ಅಭಿಷೇಕ್- ರುದ್ರ ಎರಡನ್ನು ಸೇರಿಸಿ ಹಾಡಿನಲ್ಲಿ ರುದ್ರಾಭಿಷೇಕ ನಡೆಸಲಾಗಿದೆ. ಕೊಂಚ ಹಿಂದಿ, ಇಂಗ್ಲೀಷ್ ಪದಗಳನ್ನು ಹೆಚ್ಚೇ ಸೇರಿಸಿ ಸಾಲುಗಳನ್ನು ಪೋಣಿಸಲಾಗಿದೆ. ಏಕ್ ದೋ ತೀನ್ ಚಾರ್ ಹೀ ಈಸ್ ದಿ ನ್ಯೂ ರೆಬಲ್ ಸ್ಟಾರ್, `ಚೂರು ಬ್ಯಾಡ್ ಚೂರು ಮ್ಯಾಡ್’ ಅನ್ನುವ ಸಾಲುಗಳು ಇಂಟ್ರೆಸ್ಟಿಂಗ್ ಆಗಿದೆ. ಧನಂಜಯ್ ರಾಜನ್ ಬೊಂಬಾಟ್ ಲಿರಿಕ್ಸ್, ಚರಣ್ ರಾಜ್ ಟ್ಯೂನ್ ಮತ್ತು ಉಷಾ ಉತ್ತುಪ್ ಹಾಗೂ ಆಕಾಶ್ ಜಾಕೋಬ್ ವಾಯ್ಸ್ ಕಿಕ್ಕೇರಿಸುವಂತಿದೆ. ಸೂರಿ & ಟೀಂ ಅದ್ಭುತವಾಗಿ ಹಾಡನ್ನು ಚಿತ್ರೀಕರಿಸಿರುತ್ತಾರೆ ಅನ್ನೋದ್ರಲ್ಲೇನೂ ಅನುಮಾನವಿಲ್ಲ.
ಅಮರ್ ಚಿತ್ರದಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ಅಭಿಷೇಕ್, ಇಲ್ಲಿ ರಗಡ್ ಲುಕ್‍ನಲ್ಲಿ ಕಂಗೊಳಿಸುತ್ತಿದ್ದಾರೆ.
ಜಾಕಿ ಚಿತ್ರದ ಟೈಟಲ್ ಸಾಂಗ್‍ನಂತೆಯೇ ಅದ್ಧೂರಿಯಾಗಿ ಮಾಡಲಾಗಿದೆ ಎನ್ನಲಾಗಿದ್ದ ಸಾಂಗ್ ಇದೇ. ಕೇವಲ ಇದೊಂದು ಹಾಡಿಗೇ ಒಂದು ಕೋಟಿ ಖರ್ಚು ಮಾಡಲಾಗಿದೆ. ಅಭಿಷೇಕ್ ಎದುರು ನಾಯಕಿಯಾಗಿ ರಚಿತಾ ರಾಮ್, ಪ್ರಿಯಾಂಕಾ ನಟಿಸಿದ್ದಾರೆ. ಬಹುತೇಕ ಮೇ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗೋ ಚಾನ್ಸ್ ಇದೆ. ಸಿನಿಮಾ ಹಾಡು ಭರ್ಜರಿಯಾಗಿದ್ದು, ಸೂಪರ್ ಸೂಪರ್ ವೀಕ್ಷಣೆ ಗಳಿಸಿದೆ.